ಜಜ್ಜಿದ ದಂಡಿಗೆ ಸಮಾನವಾದ ಐಗುಪ್ತವೆಂಬ ಕೋಲಿನ ಮೇಲೆ ಭರವಸವಿಟ್ಟಿರುತ್ತಿಯಷ್ಟೆ; ಒಬ್ಬನು ಅಂತ ಕೋಲನ್ನು ಊರಿಕೊಳ್ಳುವದಾದರೆ ಅದು ಅವನ ಕೈಯೊಳಕ್ಕೆ ಹೋಗಿ ತಿವಿಯುತ್ತದೆ. ಐಗುಪ್ತದ ಅರಸ ನಾದ ಫರೋಹನು ತನ್ನಲ್ಲಿ ನಂಬಿಕೆ ಇಟ್ಟುಕೊಳ್ಳುವ ವರೆಲ್ಲರಿಗೆ ಹೀಗೆ ಇದ್ದಾನೆ.
Cross references
ಆದರೆ ಅಶ್ಶೂರಿನ ಅರಸನು ಹೋಶೇಯನಲ್ಲಿ ಒಳಸಂಚನ್ನು ಕಂಡುಹಿಡಿದನು. ಏನಂದರೆ, ಹೋಶೇಯನು ಅಶ್ಶೂರಿನ ಅರಸನಿಗೆ ಪ್ರತಿ ವರುಷಕ್ಕೂ ಕೊಡುವ ಕಪ್ಪವನ್ನು ಕೊಡದೆ ಐಗುಪ್ತದ ಅರಸನಾದ ಸೋ ಎಂಬವನ ಬಳಿಗೆ ಸೇವ ಕರನ್ನು ಕಳುಹಿಸಿದ್ದನು. ಆದದರಿಂದ ಅಶ್ಶೂರಿನ ಅರ ಸನು ಅವನನ್ನು ಕಟ್ಟಿ ಸೆರೆಮನೆಯಲ್ಲಿ ಬಂಧಿಸಿದನು.
ನೀನು ನನಗೆ ವಿರೋಧವಾಗಿ ತಿರುಗಿ ಬೀಳು ವದಕ್ಕೆ ಯಾರಲ್ಲಿ ಭರವಸ ಇಟ್ಟಿದ್ದೀ? ಇಗೋ, ನೀನು ಮುರಿದ ಬೆತ್ತದ ಕೋಲಾದ ಐಗುಪ್ತದ ಮೇಲೆ ಭರ ವಸವಾಗಿದ್ದೀ. ಅದರ ಮೇಲೆ ಮನುಷ್ಯನು ಊರಿ ಕೊಂಡರೆ ಅದು ಅವನ ಕೈಯಲ್ಲಿ ಹೊಕ್ಕು ಚುಚ್ಚುವದು. ಐಗುಪ್ತದ ಅರಸನಾದ ಫರೋಹನು ತನ್ನಲ್ಲಿ ಭರವಸ ವಾಗಿರುವ ಎಲ್ಲರಿಗೂ ಹೀಗೆಯೇ ಇದ್ದಾನೆ.
ಆಗ (ನನ್ನ ಜನರು) ಅವನು ನಿರೀಕ್ಷಿಸಿಕೊಂಡಿದ್ದ ಐಥಿಯೋ ಪಿಯರ ನಿಮಿತ್ತವಾಗಿಯೂ ತಮ್ಮ ವೈಭವದ ಐಗುಪ್ತದ ವಿಷಯವಾಗಿಯೂ ಬೆಚ್ಚಿ ಬೆರಗಾಗಿ ನಾಚಿಕೆಪಡು ವರು.ಆ ದಿವಸದಲ್ಲಿ ಈ ತೀರದ ನಿವಾಸಿಗಳು ಹೇಳುವದೇನಂದರೆ--ಇಗೋ, ಅಶ್ಶೂರದ ಅರಸ ರಿಂದ ಬಿಡುಗಡೆಯಾಗಬೇಕೆಂದು ನಾವು ಯಾರನ್ನು ಶರಣಾಗತರಾಗಿ ಆಶ್ರಯಿಸಿ ನಿರೀಕ್ಷಿಸಿದ್ದೇವೋ ಅವ ರಿಗೆ ಈ ಗತಿ ಬಂತಲ್ಲಾ ನಾವು ತಪ್ಪಿಸಿಕೊಳ್ಳುವದು ಹೇಗೆ ಅನ್ನುವರು.
ಕರ್ತನು ಹೀಗೆ ಅನ್ನುತ್ತಾನೆ. ತಿರುಗಿ ಬೀಳುವ ಮಕ್ಕಳಿಗೆ ಅಯ್ಯೋ ಅವರು ಆಲೋಚನೆಯನ್ನು ಮಾಡುತ್ತಾರೆ, ಆದರೆ ನನ್ನಿಂದಲ್ಲ; ನನ್ನ ಆತ್ಮಪ್ರೇರಿತರಾಗದೆ ಉಪಾಯವನ್ನು ನೇಯ್ದು ಪಾಪದ ಮೇಲೆ ಪಾಪವನ್ನು ಸೇರಿಸಿಕೊಂಡಿದ್ದಾರೆ.
ಫರೋಹನ ಬಲದಲ್ಲಿ ತಾವು ಬಲಗೊಳ್ಳುವ ಹಾಗೆ ಯೂ ಐಗುಪ್ತದ ನೆರಳಿನಲ್ಲಿ ಭರವಸವಿಟ್ಟು ನನ್ನ ಮಾತನ್ನು ಕೇಳದೆ ಐಗುಪ್ತಕ್ಕೆ ಪ್ರಯಾಣವಾಗಿ ಹೊರಟಿ ದ್ದಾರೆ.
ಐಗು ಪ್ತ್ಯರು ಮನುಷ್ಯಮಾತ್ರದವರೇ, ದೇವರಲ್ಲ; ಅವರ ಅಶ್ವಗಳು ಆತ್ಮವಲ್ಲ, ಮಾಂಸಮಯವೇ; ಹೀಗಿರುವದ ರಿಂದ ಕರ್ತನು ತನ್ನ ಕೈಚಾಚುವಾಗ ಸಹಾಯ ಮಾಡಿ ದವನು ಮತ್ತು ಸಹಾಯಪಡೆದವನೂ ಬಿದ್ದುಹೋಗು ವನು, ಅಂತೂ ಎಲ್ಲರೂ ಒಟ್ಟಿಗೆ ಲಯವಾಗುವರು.
ಆಗ ಅರಸನಾದ ಚಿದ್ಕೀಯನು ಇಗೋ, ಅವನು ನಿಮ್ಮ ಕೈಯಲ್ಲಿ ಇದ್ದಾನೆ; ನಿಮಗೆ ವಿರೋಧವಾಗಿ ಅರಸನು ಏನು ಮಾಡಬಲ್ಲವ ನಲ್ಲ ಅಂದನು.
ಆಗ ಅರಸನ ಮನೆಯಲ್ಲಿರುವ ಕಂಚುಕಿಯಾದ ಎಬೆದೆಲ್ಮೆಕನೆಂಬ ಕೂಷ್ಯನು ಯೆರೆವಿಾಯನನ್ನು ಅವರು ಕುಣಿಯಲ್ಲಿ ಹಾಕಿದರೆಂದು ಕೇಳಿದಾಗ ಅರಸನು ಬೆನ್ಯಾವಿಾನನ ಬಾಗಲಲ್ಲಿ ಕೂತಿರಲಾಗಿ,
ಇಲ್ಲವೆ ಫರೋಹನೂ ಅವನ ಮಹಾ ಸೈನ್ಯವೂ ದೊಡ್ಡ ಪರಿವಾರವೂ ಬಂದು ಬಹಳ ಜನ ರನ್ನು ಕೊಲ್ಲುವದಕ್ಕೆ ದಿಬ್ಬಗಳನ್ನು ಕೋಟೆಗಳನ್ನೂ ಕಟ್ಟುವಾಗಲೂ ಅವನಿಗೆ ಯುದ್ಧದಲ್ಲಿ ಸಹಾಯ ಮಾಡುವದಿಲ್ಲ.
ಆಗ ಎಲ್ಲಾ ಐಗುಪ್ತದ ನಿವಾಸಿಗಳು ನಾನೇ ಕರ್ತನೆಂದು ತಿಳಿಯುವರು; ಅವರು ಇಸ್ರಾಯೇಲ್ಯರ ಮನೆತನದವರಿಗೆ ದಂಟಿನ ಊರು ಗೋಲಾಗಿದ್ದರು.
ಇನ್ನು ಅದು ಇಸ್ರಾಯೇಲ್ ವಂಶದವರ ಭರವಸವಾಗದೆ, ಇವರು ಅವರ ಕಡೆಗೆ ನೋಡಿದಾಗ ಅಕ್ರಮವನ್ನು ಜ್ಞಾಪಕಕ್ಕೆ ತರಬೇಕಾಗಿರುವದಿಲ್ಲ; ಆಗ ನಾನೇ ದೇವ ರಾದ ಕರ್ತನೆಂದು ಅವರಿಗೆ ತಿಳಿಯುವದು.