Home Bibles ಯೆಶಾಯ 36:11 · ಕನ್ನಡ ಬೈಬಲ್
ಯೆಶಾಯ 36:11 · ಕನ್ನಡ ಬೈಬಲ್

ಆಗ ಎಲ್ಯಾಕೀಮ್‌, ಶೆಬ್ನ, ಯೋವ ಎಂಬವರು ರಬ್ಷಾಕೆಗೆ--ನೀನು ಮಾತನಾಡುವದು ಗೋಡೆಯ ಮೇಲಿರುವವರಿಗೆ ಕೇಳಿಸುತ್ತದೆ. ಆದದರಿಂದ ದಯ ವಿಟ್ಟು ನಿನ್ನ ಸೇವಕರಾದ ನಮ್ಮೊಡನೆ ಸಿರಿಯಾ ಭಾಷೆ ಯಲ್ಲಿ ಮಾತನಾಡು ಅದು ನಮಗೆ ತಿಳಿಯುತ್ತದೆ; ಯೆಹೂದ್ಯರ ಭಾಷೆಯಲ್ಲಿ ಮಾತನಾಡಬೇಡ ಎಂದು ಹೇಳಿದರು.

Cross references

2 ಅರಸುಗಳು 18:26

ಆಗ ಹಿಲ್ಕೀಯನ ಮಗನಾದ ಎಲ್ಯಾಕೀಮನೂ ಶೆಬ್ನನೂ ಯೋವನೂ ರಬ್ಷಾಕೆಗೆ--ನೀನು ದಯಮಾಡಿ ಅರಾಮ್ಯ ಭಾಷೆಯಲ್ಲಿ ನಿನ್ನ ಸೇವಕರ ಸಂಗಡ ಮಾತ ನಾಡು. ಅದು ನಮಗೆ ತಿಳಿಯುತ್ತದೆ; ಗೋಡೆಯ ಮೇಲಿರುವ ಜನರು ಕೇಳುವ ಹಾಗೆ ಯೆಹೂದ್ಯರ ಭಾಷೆಯಲ್ಲಿ ನಮ್ಮ ಸಂಗಡ ಮಾತನಾಡಬೇಡ ಅಂದರು.

ಎಜ್ರಾ 4:7

ಆದರೆ ಅರ್ತಷಸ್ತನ ದಿವಸಗಳಲ್ಲಿ ಬಿಷ್ಲಾಮನೂ ಮಿತ್ರದಾತನೂ ಟಾಬೆಯೇಲನೂ ಮಿಕ್ಕಾದ ಅವರ ಜತೆಗಾರರೂ ಪಾರಸಿಯರ ಅರಸನಾದ ಆರ್ತಷಸ್ತನಿಗೆ ಒಂದು ಪತ್ರ ಬರೆದರು. ಬರೆದ ಆ ಪತ್ರವು ಅರಾಮ್ಯರ ಭಾಷೆಯಲ್ಲಿ ಟೀಕಿಸಲ್ಪಟ್ಟು, ಅರಾಮ್ಯರ ಅಕ್ಷರದಲ್ಲಿ ಬರೆಯಲ್ಪಟ್ಟಿತ್ತು.

ಯೆಶಾಯ 22:20

ಆ ದಿನದಲ್ಲಿ ಆಗುವದೇನಂದರೆ--ನನ್ನ ಸೇವಕನೂ ಹಿಲ್ಕೀಯನ ಮಗನೂ ಆದ ಎಲ್ಯಾಕೀಮನನ್ನು ಕರೆದು,

ದಾನಿಯೇಲ 2:4

ಆಗ ಕಸ್ದೀಯರು ಅರಸನಿಗೆ ಅರಮಾಯ ಭಾಷೆಯಲ್ಲಿ ಹೇಳಿ ದ್ದೇನಂದರೆ--ಓ ಅರಸನೇ, ನಿರಂತರವಾಗಿ ಬಾಳು, ಕನಸನ್ನು ನಿನ್ನ ಸೇವಕರಿಗೆ ಹೇಳು; ಆಗ ನಾವು ಅದರ ಅರ್ಥಗಳನ್ನು ತಿಳಿಸುವೆವು ಅಂದರು.

Interlinear

Choose Theme