Home Bibles ಯೆಶಾಯ 34:3 · ಕನ್ನಡ ಬೈಬಲ್
ಯೆಶಾಯ 34:3 · ಕನ್ನಡ ಬೈಬಲ್

ಅವರಲ್ಲಿ ಕೊಂದುಹಾಕಲ್ಪಟ್ಟವರು ಬಿಸಾಡಲ್ಪಡು ವರು. ಅವರ ಹೆಣಗಳ ದುರ್ವಾಸನೆಯು ಮೇಲಕ್ಕೆ ಏರುವದು. ಅವರ ರಕ್ತಪ್ರವಾಹದಿಂದ ಪರ್ವತಗಳು ಕರಗಿಹೋಗುವವು.

Cross references

2 ಅರಸುಗಳು 9:35

ಅವರು ಅವಳನ್ನು ಹೂಣಿಡಲು ಹೋದಾಗ ಅವಳ ತಲೆ ಬುರುಡೆಯೂ ಕಾಲುಗಳೂ ಅಂಗೈಗಳೂ ಹೊರತು ಮತ್ತೇನೂ ಕಾಣಲಿಲ್ಲ. ಅವರು ತಿರಿಗಿ ಬಂದು ಅವನಿಗೆ ತಿಳಿಸಿದರು.

ಯೆಶಾಯ 14:19

ಆದರೆ ನೀನು ಅಸಹ್ಯವಾದ ಕೊಂಬೆಯಂತೆಯೂ ಕತ್ತಿಯಿಂದ ತಿವಿದು ಗುಂಡಿಯ ಕಲ್ಲುಗಳ ಪಾಲಾಗಿ ಹತರಾದವರ ಉಡುಪಿನಂತೆಯೂ ಕಾಲಕೆಳಗೆ ತುಳಿಯಲ್ಪಟ್ಟ ಹೆಣ ದಂತೆಯೂ ನಿನ್ನ ಸಮಾಧಿಯೊಳಗಿಂದ ಹೊರಗೆ ಹಾಕ ಲ್ಪಟ್ಟಿದ್ದೀ.

ಯೆಶಾಯ 34:7

ಕಾಡು ಕೋಣಗಳು ಅವುಗಳ ಸಂಗಡಲೂ ಎತ್ತುಗಳು ಹೋರಿ ಗಳ ಸಂಗಡಲೂ ಬೀಳುವವು; ಅವರ ದೇಶವು ರಕ್ತ ದಿಂದ ನೆನೆಯುವದು, ಅವರ ಧೂಳು ಕೊಬ್ಬಿನಿಂದ ಪುಷ್ಟಿಯಾಗುವದು--

ಯೆರೆಮಿಯ 8:1

ಅಯ್ಯೋ, ನನ್ನ ತಲೆ ನೀರಾಗಿಯೂ ನನ್ನ ಕಣ್ಣುಗಳು ಕಣ್ಣೀರಿನ ಬುಗ್ಗೆಯಾಗಿಯೂ ಇದ್ದರೆ ಒಳ್ಳೇದು! ಆಗ ನನ್ನ ಜನರ ಮಗಳ ಹತವಾದ ವರ ನಿಮಿತ್ತ ಹಗಲು ರಾತ್ರಿ ಅಳುವೆನು.

ಯೆರೆಮಿಯ 22:19

ಇಗೋ, ಕರ್ತನ ಬಿರುಗಾಳಿ ಉಗ್ರವಾಗಿ ಹೊರಟಿದೆ; ಅಘೋರ ವಾದ ಬಿರುಗಾಳಿಯು ದುಷ್ಟರ ತಲೆಯ ಮೇಲೆ ಕಠಿಣ ವಾಗಿ ಬೀಳುವದು.

ಯೆಹೆಜ್ಕೇಲ 14:19

ಇಲ್ಲದಿದ್ದರೆ ನಾನು ಆ ದೇಶದ ಮೇಲೆ ವ್ಯಾಧಿಯನ್ನು ಕಳುಹಿಸಿ, ಅದರ ಮೇಲೆ ನನ್ನ ರೋಷ ವನ್ನು ರಕ್ತದಲ್ಲಿ ಸುರಿದು, ಮನುಷ್ಯರನ್ನೂ ಮೃಗಗಳನ್ನೂ ಅದರೊಳಗಿಂದ ಕಡಿದುಬಿಟ್ಟರೆ,

ಯೆಹೆಜ್ಕೇಲ 32:4

ಆಗ ನಾನು ನಿನ್ನನ್ನು ನೆಲದ ಮೇಲೆ ಹಾಕಿಬಿಡುವೆನು, ಬಯಲಿನ ಮೇಲೆ ಬಿಸಾಡುವೆನು; ಆಕಾಶದ ಪಕ್ಷಿಗಳನ್ನೆಲ್ಲಾ ನಿನ್ನ ಮೇಲೆ ಕೂರಿಸಿ, ಸಮಸ್ತ ಭೂಮಿಯ ಮೇಲಿನ ಮೃಗಗಳನ್ನು ನಿನ್ನಿಂದ ತೃಪ್ತಿಪಡಿಸುವೆನು.

ಯೆಹೆಜ್ಕೇಲ 32:5

ನಿನ್ನ ಮಾಂಸವನ್ನು ಬೆಟ್ಟಗಳ ಮೇಲೆ ಹಾಕಿ, ನಿನ್ನ ರಾಶಿ ಯಿಂದ ಕಣಿವೆಗಳನ್ನು ತುಂಬಿಸುವೆನು.

ಯೆಹೆಜ್ಕೇಲ 32:6

ನಿನ್ನ ರಕ್ತ ಪ್ರವಾಹದಿಂದ ದೇಶವನ್ನು ಬೆಟ್ಟಗಳ ತನಕ ತೋಯಿಸು ವೆನು; ನದಿಗಳು ನಿನ್ನಿಂದ ತುಂಬುವವು.

ಯೆಹೆಜ್ಕೇಲ 35:6

ಆದದರಿಂದ ದೇವರಾದ ಕರ್ತನು ಹೇಳುತ್ತಾನೆ-- ನನ್ನ ಜೀವದಾಣೆ, ನಾನು ನಿನ್ನನ್ನು ರಕ್ತಮಯವಾಗಿ ಮಾಡುವೆನು; ರಕ್ತದ ಕೋಡಿಯು ನಿನ್ನನ್ನು ಬೆನ್ನಟ್ಟು ವದು; ನೀನು ರಕ್ತಸುರಿಸುವದಕ್ಕೆ ಹೇಸದೆ ಹೋದ ಕಾರಣ ರಕ್ತಪ್ರವಾಹವೇ ನಿನ್ನ ಬೆನ್ನು ಹತ್ತುವದು.

ಯೆಹೆಜ್ಕೇಲ 38:22

ನಾನು ಅವನಿಗೆ ವಿರುದ್ಧ ವಾಗಿ ವ್ಯಾಧಿಯಿಂದಲೂ ರಕ್ತದಿಂದಲೂ ವಾದಿಸು ತ್ತೇನೆ. ನಾನು ಅವನ ಮೇಲೆ ಅವನ ದಂಡುಗಳ ಮೇಲೆ ಮಳೆಯನ್ನು ಸುರಿಸುವೆನು. ಅವನೊಂದಿಗಿರುವ ಅನೇಕ ಜನರ ಮೇಲೆ ಬೆಂಕಿಯನ್ನೂ ಗಂಧಕವನ್ನೂ ನುಣುಪಾದ ಕಲ್ಲುಗಳಿಂದ ತುಂಬಿ ಹರಿಯುವಂತಹ ಮಹಾ ಮಳೆಯನ್ನು ಸುರಿಸುವೆನು.ಹೀಗೆ ನನ್ನೊಂದಿಗೆ ನಾನೇ ಹೆಚ್ಚಿಸಿಕೊಂಡು ಮತ್ತು ನನಗೆ ನಾನೇ ಪರಿಶುದ್ಧಪಡಿಸಿಕೊಂಡು ಅನೇಕ ಜನಾಂಗಗಳ ಕಣ್ಣುಗಳ ಮುಂದೆ ನಾನು ತಿಳಿಯಪಡಿಸಿಕೊಳ್ಳುತ್ತೇನೆ. ಅವರು ನಾನೇ ಕರ್ತನೆಂದು ತಿಳಿದುಕೊಳ್ಳುವರು.

ಯೆಹೆಜ್ಕೇಲ 39:4

ನೀನೂ ನಿನ್ನ ಎಲ್ಲಾ ದಳಗಳೂ ನಿನ್ನೊಂದಿಗಿರುವ ನಿನ್ನ ಜನರೂ ಇಸ್ರಾಯೇಲಿನ ಪರ್ವತಗಳ ಮೇಲೆ ಬೀಳುವಿರಿ; ಎಲ್ಲಾ ತರಹದ ಮಾಂಸ ತಿನ್ನುವ ಪಕ್ಷಿಗಳಿಗೂ ಬಯಲಿನ ಮೃಗಗಳಿಗೂ ತಿನ್ನುವಂತೆ ನಾನು ನಿನ್ನನ್ನು ಕೊಡುವೆನು.

ಯೆಹೆಜ್ಕೇಲ 39:11

ಆ ದಿನದಲ್ಲಿ ಆಗುವದೇನಂದರೆ -- ನಾನು ಗೋಗನಿಗೆ ಇಸ್ರಾಯೇಲಿನ ಸಮಾಧಿಗಳಲ್ಲಿ ಸ್ಥಳವನ್ನು ಕೊಡುತ್ತೇನೆ; ಯಾವದಂದರೆ ಸಮುದ್ರದ ಪೂರ್ವದಲ್ಲಿ ರುವ ಪ್ರಯಾಣಿಕರು ಹಾದುಹೋಗುವ ಕಣಿವೆಯೇ; ಆಗ ಅದು ಹಾದುಹೋಗುವವರನ್ನು ನಿಲ್ಲಿಸುವದು; ಅಲ್ಲಿ ಗೋಗನನ್ನೂ ಅವನ ಎಲ್ಲಾ ದಳವನ್ನೂ ಸಮಾಧಿ ಮಾಡುವರು; ಆ ಕಣಿವೆಯನ್ನು ಹಮೋನ ಗೋಗ್‌ ಎಂದು ಕರೆಯುವರು.

ಯೋವೇಲ 2:20

ಆದರೆ ಉತ್ತರ ದಿಕ್ಕಿನ ಸೈನ್ಯವನ್ನು ನಿಮಗೆ ದೂರಮಾಡಿ ಅವನನ್ನು ಒಣ ಭೂಮಿಗೂ ಅರಣ್ಯಕ್ಕೂ ಅವನ ಮುಂಭಾಗವನ್ನು ಪೂರ್ವದ ಸಮುದ್ರಕ್ಕೂ ಅವನ ಹಿಂಭಾಗವನ್ನು ಪಶ್ಚಿಮ ಸಮು ದ್ರಕ್ಕೂ ಓಡಿಸಿ ಬಿಡುವೆನು; ಅವನ ದುರ್ವಾಸನೆಯು ಏರುವದು; ಅವನ ನಾತವು ಏರುವದು; ಅವನು ದೊಡ್ಡದಾದವುಗಳನ್ನು ಮಾಡಿದ್ದಾನೆ.

ಆಮೋಸ 4:10

ಐಗುಪ್ತದ ವ್ಯಾಧಿಗಳಂಥ ವ್ಯಾಧಿಯನ್ನು ನಿಮ್ಮೊಳಗೆ ಕಳುಹಿಸಿದ್ದೇನೆ.ನಿಮ್ಮ ಕುದುರೆಗಳನ್ನು ತೆಗೆದುಕೊಂಡು ಹೋದವರ ಜೊತೆಯಲ್ಲಿ ನಿಮ್ಮ ಯೌವನಸ್ಥರನ್ನು ಕತ್ತಿಯಿಂದ ಕೊಂದುಹಾಕಿದ್ದೇನೆ. ನಿಮ್ಮ ದಂಡುಗಳ ದುರ್ವಾಸ ನೆಯು ನಿಮ್ಮ ಮೂಗುಗಳಲ್ಲಿ ಸೇರುವ ಹಾಗೆ ಮಾಡಿ ದ್ದೇನೆ. ಆದಾಗ್ಯೂ ನೀವು ನನ್ನ ಕಡೆಗೆ ಹಿಂತಿರುಗಿ ಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ.

ನಹೂಮ 3:3

ಸವಾರನು ಹತ್ತುತ್ತಾನೆ, ಕತ್ತಿಗಳು ಮಿಂಚು ತ್ತವೆ. ಈಟಿಗಳು ಥಳಥಳಿಸುತ್ತವೆ, ಹತವಾದವರು ಬಹಳ; ಹೆಣಗಳು ಬಹಳ; ಶವಗಳಿಗೆ ಅಂತ್ಯವೇ ಇಲ್ಲ; ಅವರು ಶವಗಳ ಮೇಲೆ ಎಡವುತ್ತಾರೆ.

ಪ್ರಕಟನೆ 14:20

ಆ ದ್ರಾಕ್ಷೇ ತೊಟ್ಟಿಯನ್ನು ಪಟ್ಟಣದ ಹೊರಗೆ ತುಳಿದರು. ಆ ತೊಟ್ಟಿಯೊಳಗಿಂದ ರಕ್ತವು ಹೊರಟು ಕುದುರೆಗಳ ಕಡಿವಾಣಗಳನ್ನು ಮುಟ್ಟುವಷ್ಟು ಇನ್ನೂರು ಮೈಲಿ ದೂರ ಹರಿಯಿತು.

ಪ್ರಕಟನೆ 16:3

ಎರಡನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ಸಮುದ್ರದ ಮೇಲೆ ಹೊಯಿದಾಗ ಅದು ಸತ್ತವನ ರಕ್ತದ ಹಾಗಾಯಿತು; ಸಮುದ್ರದಲ್ಲಿ ಬದುಕುವ ಪ್ರತಿಯೊಂದು ಪ್ರಾಣಿಯು ಸತ್ತಿತು.

Interlinear

Choose Theme