Home Bibles ☰ Books ಯೆಶಾಯ 33:22 · ಕನ್ನಡ ಬೈಬಲ್
ಯೆಶಾಯ 33:22 · ಕನ್ನಡ ಬೈಬಲ್

ಕರ್ತನು ನಮ್ಮ ನ್ಯಾಯಾ ಧಿಪತಿಯಾಗಿದ್ದಾನೆ, ಕರ್ತನು ನಮಗೆ ಆಜ್ಞೆ ಕೊಡು ವಾತನು, ಕರ್ತನೇ ನಮ್ಮ ರಾಜನು; ಆತನೇ ನಮ್ಮನ್ನು ರಕ್ಷಿಸುವನು.

Cross references

ಆದಿಕಾಂಡ 18:25

ಆ ಪ್ರಕಾರ ಮಾಡಿ ನೀತಿವಂತರನ್ನು ದುಷ್ಟರ ಸಂಗಡ ಕೊಲ್ಲುವದು ನಿನಗೆ ದೂರವಾಗಿರಲಿ; ಹಾಗೆ ನೀತಿವಂತರನ್ನು ದುಷ್ಟರಿಗೆ ಸಮಾನಮಾಡುವದು ನಿನಗೆ ದೂರ ವಾಗಿರಲಿ; ಭೂಲೋಕಕ್ಕೆಲ್ಲಾ ನ್ಯಾಯಾಧಿಪತಿಯಾಗಿ ರುವಾತನು ನ್ಯಾಯವಾದದ್ದನ್ನು ಮಾಡದೆ ಇರುವನೇ ಅಂದನು.

ದ್ವಿತೀಯೋಪದೇಶಕಾಂಡ 33:2

ಕರ್ತನು ಸೀನಾಯಿ ಬೆಟ್ಟದಿಂದ ಬಂದನು, ಸೇಯಾರಿನಿಂದ ಅವರಿಗೆ ಉದಯಿಸಿದನು. ಪಾರಾನ್‌ ಬೆಟ್ಟದಿಂದ ಪ್ರಕಾಶಿಸಿದನು, ಹತ್ತು ಸಾವಿರ ಪರಿಶುದ್ಧರ ಸಂಗಡ ಬಂದನು. ಆತನ ಬಲಪಾರ್ಶ್ವದಿಂದ ಅವರಿಗೆ ಬೆಂಕಿಯ ನ್ಯಾಯಪ್ರಮಾಣವು ಹೊರಟಿತು.

1 ಸಮುವೇಲ 12:12

ಆದರೆ ಅಮ್ಮೋನನ ಮಕ್ಕಳ ಅರಸನಾದ ನಾಹಾಷನು ನಿಮಗೆ ವಿರೋಧವಾಗಿ ಯುದ್ಧ ಮಾಡಲು ಬರುವದನ್ನು ನೋಡಿದಾಗ ನಿಮ್ಮ ದೇವರಾದ ಕರ್ತನೇ ನಿಮಗೆ ಅರಸನಾಗಿದ್ದರೂ ನೀವು ನನಗೆ--ಹಾಗೆ ಬೇಡ; ಒಬ್ಬ ಅರಸನು ನಮ್ಮನ್ನು ಆಳಬೇಕು ಅಂದಿರಿ.

ನೆಹೆಮ್ಯ 10:14

ಜನರ ಮುಖ್ಯಸ್ಥರು--ಪರೋಷನು, ಪಹತ್‌ ಮೋವಾಬನು ಏಲಾಮನು,

ಕೀರ್ತನೆಗಳು 44:4

ಓ ದೇವರೇ, ನೀನೇ ನನ್ನ ಅರಸನು; ಯಾಕೋಬ ನಿಗೆ ಬಿಡುಗಡೆಗಳನ್ನು ಆಜ್ಞಾಪಿಸು.

ಕೀರ್ತನೆಗಳು 44:5

ನಿನ್ನಿಂದ ನಮ್ಮ ವೈರಿಗಳನ್ನು ದೊಬ್ಬುವೆವು; ನಿನ್ನ ಹೆಸರಿನಲ್ಲಿ ನಮ್ಮ ಎದುರಾಳಿಗಳನ್ನು ತುಳಿಯುವೆವು.

ಕೀರ್ತನೆಗಳು 50:6

ಆಕಾಶಗಳು ಆತನ ನೀತಿ ಯನ್ನು ಪ್ರಕಟಿಸುತ್ತವೆ; ದೇವರು ತಾನೇ ನ್ಯಾಯಾಧಿ ಪತಿಯಾಗಿದ್ದಾನೆ. ಸೆಲಾ.

ಕೀರ್ತನೆಗಳು 74:12

ದೇವರು ಪೂರ್ವದಿಂದಲೂ ನನ್ನ ಅರಸನೂ ಭೂಮಿಯ ಮಧ್ಯದಲ್ಲಿ ರಕ್ಷಣೆಯನ್ನು ಮಾಡುವಾತನೂ ಆಗಿದ್ದಾನೆ.

ಕೀರ್ತನೆಗಳು 75:7

ಆದರೆ ದೇವರು ನ್ಯಾಯತೀರಿಸುವಾ ತನಾಗಿದ್ದಾನೆ; ಒಬ್ಬನನ್ನು ತಗ್ಗಿಸುತ್ತಾನೆ; ಇನ್ನೊಬ್ಬನನ್ನು ಎತ್ತುತ್ತಾನೆ.

ಕೀರ್ತನೆಗಳು 89:18

ನಮ್ಮ ಗುರಾಣಿಯು ಕರ್ತನೇ; ನಮ್ಮ ಅರಸನು ಇಸ್ರಾಯೇಲಿನ ಪರಿಶುದ್ಧನೇ.

ಕೀರ್ತನೆಗಳು 98:9

ಆತನು ಭೂಮಿಗೆ ನ್ಯಾಯ ತೀರಿಸಲು ಬರುತ್ತಾನೆ. ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ನ್ಯಾಯದಲ್ಲಿಯೂ ತೀರ್ಪು ಕೊಡುವನು.

ಕೀರ್ತನೆಗಳು 147:19

ಆತನು ಯಾಕೋಬರಿಗೆ ತನ್ನ ವಾಕ್ಯವನ್ನೂ ಇಸ್ರಾಯೇಲಿಗೆ ನಿಯಮಗಳನ್ನೂ ನ್ಯಾಯವಿಧಿಗಳನ್ನೂ ತಿಳಿಸುತ್ತಾನೆ.ಯಾವ ಜನಾಂಗಕ್ಕಾದರೂ ಆತನು ಹೀಗೆ ಮಾಡ ಲಿಲ್ಲ; ನ್ಯಾಯವಿಧಿಗಳನ್ನು ಅವರು ತಿಳುಕೊಳ್ಳುವದಿಲ್ಲ. ನೀವು ಕರ್ತನನ್ನು ಸ್ತುತಿಸಿರಿ.

ಯೆಶಾಯ 11:4

ಆದರೆ ಬಡವರಿಗೆ ನೀತಿಯಿಂದ ನ್ಯಾಯತೀರಿಸುವನು; ಭೂಮಿಯ ದೀನರಿಗೆ ನ್ಯಾಯ ವಾಗಿ ತೀರ್ಪುಮಾಡುವನು; ಭೂಮಿಯನ್ನು ತನ್ನ ಬಾಯಿಯ ಕೋಲಿನಿಂದ ಹೊಡೆಯುವನು, ತನ್ನ ತುಟಿಗಳ ಉಸಿರಿನಿಂದ ದುಷ್ಟರನ್ನು ಹತಮಾಡುವನು.

Interlinear

Choose Theme