ಇಷ್ಟೇ ಅಲ್ಲದೆ ಕರ್ತನು ತನ್ನ ಜನರ ವ್ರಣವನ್ನು ಕಟ್ಟಿ ಅವರ ಪೆಟ್ಟಿನಗಾಯವನ್ನು ವಾಸಿಮಾಡುವ ದಿನದಲ್ಲಿ ಚಂದ್ರನ ಬೆಳಕು ಸೂರ್ಯನ ಬೆಳಕಿನ ಹಾಗೆಯೂ ಮತ್ತು ಸೂರ್ಯನ ಬೆಳಕು ಏಳರಷ್ಟು ಹೆಚ್ಚಾಗಿ ಏಳು ದಿನಗಳ ಬೆಳಕಿ ನಂತಾಗುವದು.
Cross references
ನಾನು ಆತನೇ ಎಂದೂ ನನ್ನ ಹಾಗೆ ಬೇರೆ ದೇವರಿಲ್ಲವೆಂದೂ ಈಗ ನೋಡಿರಿ; ನಾನೇ ಸಾಯಿಸು ತ್ತೇನೆ, ಬದುಕಿಸುತ್ತೇನೆ; ಗಾಯ ಮಾಡುತ್ತೇನೆ, ನಾನೇ ಸ್ವಸ್ಥ ಮಾಡುತ್ತೇನೆ. ನನ್ನ ಕೈಯಿಂದ ತಪ್ಪಿಸುವವನು ಯಾರೂ ಇಲ್ಲ.
ಆತನೇ ನೋಯಿಸುತ್ತಾನೆ, ಕಟ್ಟುವವನು ಆತನೇ; ಆತನು ಗಾಯ ಮಾಡುತ್ತಾನೆ; ಆತನ ಕೈಗಳು ಸ್ವಸ್ಥಮಾಡುತ್ತವೆ.
ನೀವು ಹೆಚ್ಚೆಚ್ಚಾಗಿ ತಿರುಗಿಬಿದ್ದು ಯಾಕೆ ನೀವು ಇನ್ನು ಹೊಡೆಯಿಸಿಕೊಳ್ಳುತ್ತೀರಿ. ತಲೆ ಯೆಲ್ಲಾ ರೋಗ, ಹೃದಯವೆಲ್ಲಾ ದುರ್ಬಲ.
ನನ್ನ ಪರಿಶುದ್ಧ ಪರ್ವತದ ಲ್ಲೆಲ್ಲಾ ಕೇಡನ್ನಾಗಲಿ ನಾಶವನ್ನಾಗಲಿ ಯಾರೂ ಮಾಡು ವದಿಲ್ಲ; ಸಮುದ್ರವು ನೀರಿನಿಂದ ಮುಚ್ಚಿಕೊಂಡಿರು ವಂತೆ ಕರ್ತನ ತಿಳುವಳಿಕೆಯು ಭೂಮಿಯಲ್ಲಿ ತುಂಬಿ ಕೊಂಡಿರುವದು.
ಆಮೇಲೆ ಚೀಯೋನ್ ಪರ್ವತ ದಲ್ಲಿಯೂ ಯೆರೂಸಲೇಮಿನಲ್ಲಿಯೂ ತನ್ನ ಪೂರ್ವಿ ಕರ (ಪರಿವಾರದವರ) ಮುಂದೆ ಮಹಿಮೆಯಿಂದ ಆಳುವಾಗ ಚಂದ್ರನಿಗೆ ಅವಮಾನವಾಗುವದು, ಸೂರ್ಯನು ನಾಚಿಕೆ(ಲಜ್ಜೆ)ಪಡುವನು.
ಇನ್ನು ಮೇಲೆ ಸೂರ್ಯನು ನಿನಗೆ ಹಗಲಿ ನಲ್ಲಿ ಬೆಳಕಾಗಿರುವದಿಲ್ಲ, ಚಂದ್ರನು ಪ್ರಕಾಶಕ್ಕಾಗಿ ನಿನಗೆ ಬೆಳಕು ಕೊಡುವದಿಲ್ಲ; ಆದರೆ ಕರ್ತನು ನಿನಗೆ ನಿತ್ಯವಾದ ಬೆಳಕಾಗಿರುವನು. ನಿನ್ನ ದೇವರು ನಿನ್ನ ಪ್ರಭೆಯಾಗಿರುವನು.
ನಿನ್ನ ಅಂತ್ಯದಲ್ಲಿ ನಿರೀಕ್ಷೆ ಉಂಟೆಂದು ಕರ್ತನು ಅನ್ನುತ್ತಾನೆ; ನಿನ್ನ ಮಕ್ಕಳು ತಮ್ಮ ಮೇರೆಗೆ ತಿರುಗಿ ಬರುವರು.
ಸಮಾಧಾನದಲ್ಲಿ ಸಾಯುವಿ; ಹಿಂದೆ ಇದ್ದ ಪೂರ್ವದ ಅರಸನಾದ ನಿನ್ನ ಪಿತೃಗಳನ್ನು ಸುಟ್ಟ ಪ್ರಕಾರ ನಿನಗೋಸ್ಕರ (ಸುಗಂಧ ಗಳನ್ನು) ಸುಡುವರು; ಹಾ, ಒಡೆಯನೇ, ಎಂದು ಹೇಳಿ ನಿನಗೋಸ್ಕರ ಗೋಳಾಡುವರು; ನಾನೇ ವಾಕ್ಯವನ್ನು ನುಡಿದಿದ್ದೇನೆಂದು ಕರ್ತನು ಅನ್ನುತ್ತಾನೆ.
ಯೆರೂಸಲೇಮಿನ ಕುಮಾರ್ತೆಯೇ, ನಾನು ಯಾವದನ್ನು ನಿನಗೆ ಸಾಕ್ಷಿಯ ನ್ನಾಗಿಡಲಿ? ಯಾವದನ್ನು ನಿನಗೆ ಸಮಾನ ಮಾಡಲಿ? ಚೀಯೋನಿನ ಮಗಳಾದ ಕನ್ಯೆಯೇ, ನಿನ್ನನ್ನು ಆದರಿಸುವ ಹಾಗೆ ನಾನು ಯಾವದನ್ನು ನಿನಗೆ ಸಮಾನಮಾಡಲಿ? ನಿನ್ನ ಮುರಿಯುವಿಕೆಯು ಸಮುದ್ರದ ಹಾಗೆ ದೊಡ್ಡ ದಾಗಿದೆ, ನಿನ್ನನ್ನು ಗುಣಪಡಿಸುವವರು ಯಾರು?
ಬನ್ನಿರಿ ನಾವು ಕರ್ತನ ಕಡೆಗೆ ತಿರುಗಿ ಕೊಳ್ಳೋಣ ಯಾಕಂದರೆ ಆತನು ಸೀಳಿ ಬಿಟ್ಟಿದ್ದಾನೆ, ನಮ್ಮನ್ನು ಸ್ವಸ್ಥ ಮಾಡುತ್ತಾನೆ; ಆತನು ಹೊಡೆದಿದ್ದಾನೆ; ಆತನು ನಮ್ಮನ್ನು ಕಟ್ಟುತ್ತಾನೆ.
ಆ ದಿನದಲ್ಲಿ ಬಿದ್ದ ದಾವೀದನ ಗುಡಾರವನ್ನು ನಾನು ನಿಲ್ಲಿಸಿ ಅದರ ಹರಕುಗಳನ್ನು ಮುಚ್ಚುವೆನು. ಅವನ ಹಾಳಾದದ್ದನ್ನು ಎಬ್ಬಿಸಿ ಹಿಂದಿನ ದಿವಸಗಳಲ್ಲಿ ಮಾಡಿದ ಹಾಗೆ ಕಟ್ಟುವೆನು.
ಆ ದಿನದಲ್ಲಿ ಕರ್ತನು ಯೆರೂಸಲೇಮಿನ ನಿವಾಸಿಗಳನ್ನು ಕಾಪಾಡುವನು; ಆ ದಿನದಲ್ಲಿ ಅವರೊಳಗೆ ಬಲಹೀನನು ದಾವೀದನ ಹಾಗೆಯೂ ದಾವೀದನ ಮನೆತನದವರು ದೇವರ ಹಾಗೆಯೂ ಅಂದರೆ ಅವರ ಮುಂದೆ ಕರ್ತನ ದೂತನ ಹಾಗೆಯೂ ಇರುವರು.
ಆದರೆ ಕರ್ತನಿಗೆ ತಿಳಿದಿರುವ ಒಂದು ದಿನ ಇರುವದು, ಅದು ಹಗಲೂ ಅಲ್ಲ, ರಾತ್ರಿಯೂ ಅಲ್ಲ; ಆದರೆ ಸಾಯಂಕಾಲದ ಸಮಯದಲ್ಲಿ ಬೆಳಕು ಇರುವದು.
ಆದದರಿಂದ ಕ್ರಿಸ್ತನ ಬೋಧನೆಯ ಮೂಲ ಪಾಠಗಳನ್ನು ಬಿಟ್ಟು ನಿರ್ಜೀವ ಕ್ರಿಯೆಗಳಿಂದ ಮಾನಸಾಂತರವೂ ದೇವರ ಮೇಲಣ ನಂಬಿಕೆಯೂ
ಪಟ್ಟಣದಲ್ಲಿ ಬೆಳಕನ್ನು ಕೊಡು ವದಕ್ಕಾಗಿ ಸೂರ್ಯನಾಗಲಿ ಚಂದ್ರನಾಗಲಿ ಬೇಕಾಗಿಲ್ಲ. ಯಾಕಂದರೆ ಅದಕ್ಕೆ ದೇವರ ಪ್ರಭಾವವೇ ಬೆಳಕನ್ನು ಕೊಟ್ಟಿತು; ಕುರಿಮರಿಯಾದಾತನೇ ಅದರ ದೀಪ.
ಅಲ್ಲಿ ಇನ್ನು ರಾತ್ರಿ ಇರುವದಿಲ್ಲ; ಅವರಿಗೆ ದೀಪವಾಗಲಿ ಸೂರ್ಯನ ಬೆಳಕಾಗಲಿ ಬೇಕಾಗಿರುವ ದಿಲ್ಲ; ಯಾಕಂದರೆ ದೇವರಾದ ಕರ್ತನೇ ಅವರಿಗೆ ಬೆಳಕನ್ನು ಕೊಡುವನು. ಅವರು ಯುಗಯುಗಾಂತರ ಗಳಲ್ಲಿಯೂ ಆಳುವರು.