Home Bibles ☰ Books ಯೆಶಾಯ 29:3 · ಕನ್ನಡ ಬೈಬಲ್
ಯೆಶಾಯ 29:3 · ಕನ್ನಡ ಬೈಬಲ್

ಅದು ನನಗೆ ಅರೀಯೇಲಾಗಿಯೇ ಪರಿಣಮಿಸುವದು. ಸುತ್ತಲೂ ದಂಡಿಳಿಸಿ ನಿನಗೆ ವಿರುದ್ಧವಾಗಿ ಕೋಟೆಗಳನ್ನು ಎಬ್ಬಿಸಿ ದಿಬ್ಬಹಾಕಿ ನಿನ್ನ ಮೇಲೆ ಮುತ್ತಿಗೆ ಹಾಕುವೆನು.

Cross references

2 ಅರಸುಗಳು 18:17

ಅಶ್ಶೂರಿನ ಅರಸನು ಲಾಕೀಷಿನಿಂದ ತರ್ತಾನ ನನ್ನೂ ರಬ್ಸಾರೀಸನನ್ನೂ ರಬ್ಷಾಕೆಯನ್ನೂ ದೊಡ್ಡ ದಂಡನ್ನೂ ಯೆರೂಸಲೇಮಿನಲ್ಲಿದ್ದ ಅರಸನಾದ ಹಿಜ್ಕೀ ಯನ ಬಳಿಗೆ ಕಳುಹಿಸಿದನು. ಅವರು ಯೆರೂಸಲೇಮಿಗೆ ಬಂದು ಅರಸನ ಹೊಲದ ರಾಜ ಮಾರ್ಗದಲ್ಲಿರುವ ಮೇಲಿನ ಕೆರೆಯ ಕಾಲುವೆಯ ಬಳಿಯಲ್ಲಿ ನಿಂತರು. ಅವರು ಅರಸನನ್ನು ಕರೇ ಕಳುಹಿಸಿದರು.

2 ಅರಸುಗಳು 19:32

ಆದ ದರಿಂದ ಕರ್ತನು ಅಶ್ಶೂರಿನ ಅರಸನನ್ನು ಕುರಿತು ಹೇಳುವದೇನಂದರೆ--ಅವನು ಈ ಪಟ್ಟಣದಲ್ಲಿ ಬರು ವದಿಲ್ಲ; ಅಲ್ಲಿ ಬಾಣವನ್ನು ಎಸೆಯುವದಿಲ್ಲ; ಗುರಾಣಿ ಹಿಡಿದುಕೊಂಡು ಅದರ ಮುಂದೆ ಸೇರುವದಿಲ್ಲ; ಅದಕ್ಕೆ ವಿರೋಧವಾಗಿ ದಿನ್ನೆಯನ್ನು ಹಾಕುವದಿಲ್ಲ.

2 ಅರಸುಗಳು 24:11

ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಪಟ್ಟಣಕ್ಕೆ ವಿರೋಧವಾಗಿ ಬಂದನು; ಅವನ ಸೇವಕರು ಅದನ್ನು ಮುತ್ತಿಗೆ ಹಾಕಿದರು.

2 ಅರಸುಗಳು 25:1

ಅವನ ಆಳಿಕೆಯ ಒಂಭತ್ತನೇ ವರುಷದ ಹತ್ತನೇ ತಿಂಗಳಿನ ಹತ್ತನೇ ದಿವಸದಲ್ಲಿ ಏನಾಯಿತಂದರೆ, ಬಾಬೆಲಿನ ಅರಸನಾದ ನೆಬೂಕ ದ್ನೆಚರನು ತಾನೂ ತನ್ನ ಎಲ್ಲಾ ಸೈನ್ಯವೂ ಯೆರೂಸ ಲೇಮಿನ ಮೇಲೆ ಬಂದು ಅದಕ್ಕೆ ಎದುರಾಗಿ ದಂಡಿಳಿದು ಅದರ ಸುತ್ತಲೂ ದಿಣ್ಣೆಗಳನ್ನು ಹಾಕಿದರು.

ಯೆಶಾಯ 1:8

ಚೀಯೋನ್‌ ಕುಮಾರಿಯು ದ್ರಾಕ್ಷೇತೋಟ ದಲ್ಲಿರುವ ಗುಡಿಸಲಿನ ಹಾಗೆಯೂ ಸೌತೆಯ ತೋಟ ದಲ್ಲಿರುವ ಮನೆಯ ಹಾಗೆಯೂ ಮುತ್ತಿಗೆ ಹಾಕಲಟ್ಟಿರುವ ಪಟ್ಟಣದ ಹಾಗೆಯೂ ಬಿಡಲ್ಪಟ್ಟಿದ್ದಾಳೆ.

ಯೆಹೆಜ್ಕೇಲ 21:22

ಅವನು ಬಲಗೈಯಲ್ಲಿ ಯೆರೂಸಲೇಮಿಗಾದ ಶಕುನವು ಇತ್ತು. ಬಡಿಯುವ ಆಯುಧಗಳನ್ನಿಟ್ಟು ಬಾಯಿಬಿಟ್ಟು ಸಂಹಾರ ಧ್ವನಿಗೈದು ಆರ್ಭಟದಿಂದ ಬಾಗಿಲುಗಳ ಎದುರಾಗಿ ಬಡಿಯುವ ಆಯುಧಗಳನ್ನಿಟ್ಟು ಮೊಹರ್ಚೆಯನ್ನು ಹಾಕಿ ಕೋಟೆ ಯನ್ನು ಕಟ್ಟಿದ್ದು ಸೂಚನೆಯಾಗಿದೆ.

ಮತ್ತಾಯ 22:7

ಆದರೆ ಅರಸನು ಅದನ್ನು ಕೇಳಿ ಕೋಪೋದ್ರೇಕವುಳ್ಳವನಾಗಿ ತನ್ನ ಸೈನ್ಯಗಳನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹ ರಿಸಿ ಅವರ ಪಟ್ಟಣವನ್ನು ಸುಟ್ಟುಬಿಟ್ಟನು.

ಲೂಕ 19:43

ಯಾಕಂದರೆ ನಿನ್ನ ಶತೃಗಳು ನಿನ್ನ ಸುತ್ತಲೂ ಕಂದಕವನ್ನು ತೋಡಿ ಎಲ್ಲಾ ಕಡೆಯಲ್ಲಿಯೂ ನಿನ್ನನ್ನು ಮುತ್ತಿಗೆ ಹಾಕಿ ಪ್ರತಿಯೊಂದು ಕಡೆಯಿಂದಲೂ ನಿನ್ನನ್ನು ಒಳಗೆ ಇರಿಸುವ ದಿನಗಳು ನಿನ್ನ ಮೇಲೆ ಬರುವವು.

Interlinear

Choose Theme