Home Bibles ಯೆಶಾಯ 28:1 · ಕನ್ನಡ ಬೈಬಲ್
ಯೆಶಾಯ 28:1 · ಕನ್ನಡ ಬೈಬಲ್

ಎಫ್ರಾಯಾಮ್ಯರ ಕುಡುಕರ ಗರ್ವದ ಕಿರೀಟಕ್ಕೆ ಅಯ್ಯೋ! ದ್ರಾಕ್ಷಾರಸದಿಂದ ಅಮಲೇರಿದವರ ಕೊಬ್ಬುಳ್ಳ ತಗ್ಗಿನ ತಲೆಯ ಮೇಲಿ ರುವ ಅವರ ಅಹಂಕಾರದ ಕಿರೀಟವು ಬಾಡಿದ ಹೂವಾಗಿದೆ.

Cross references

2 ಅರಸುಗಳು 14:25

ಇದ ಲ್ಲದೆ ಇಸ್ರಾಯೇಲಿನ ದೇವರಾದ ಕರ್ತನು ಗತ್‌ಹೇಫೆ ರಿನವನಾದ ಪ್ರವಾದಿಯಾಗಿರುವ ಅಮಿತ್ತೈನ ಮಗ ನಾದ ಯೋನನೆಂಬ ತನ್ನ ಸೇವಕನ ಮುಖಾಂತರ ಹೇಳಿದ ವಾಕ್ಯದ ಪ್ರಕಾರವೇ ಅವನು ಹಮಾತಿನ ಪ್ರವೇಶ ಮೊದಲುಗೊಂಡು ಬಯಲಿನ ಸಮುದ್ರದ ವರೆಗೂ ಇರುವ ಇಸ್ರಾಯೇಲಿನ ಮೇರೆಯನ್ನು ತಿರಿಗಿ ತಕ್ಕೊಂಡನು.

2 ಅರಸುಗಳು 15:29

ಇಸ್ರಾಯೇಲಿನ ಅರಸನಾದ ಪೆಕಹನ ದಿವಸಗಳಲ್ಲಿ ಅಶ್ಶೂರದ ಅರಸ ನಾದ ತಿಗ್ಲತ್ಪಿಲೆಸೆರನು ಬಂದು ನೆಫ್ತಾಲಿಯ ದೇಶವಾದ ಇಯ್ಯೋನನ್ನೂ ಅಬೇಲ್ಬೆತ್ಮಾಕವನ್ನೂ ಯಾನೋಹ ವನ್ನೂ ಕೆದೆಷನ್ನೂ ಹಾಚೋರನ್ನೂ ಗಿಲ್ಯಾದನ್ನೂ ಗಲಿಲಾಯವನ್ನೂ ಹಿಡುಕೊಂಡು ಜನರನ್ನು ಸೆರೆಯಾಗಿ ಅಶ್ಯೂರಿಗೆ ಒಯ್ದನು.

2 ಅರಸುಗಳು 18:10

ಮೂರು ವರುಷವಾದ ತರುವಾಯ ಅವರು ಅದನ್ನು ತೆಗೆದುಕೊಂಡರು. ಇಸ್ರಾಯೇಲಿನ ಅರಸನಾಗಿರುವ ಹೋಶೇಯನ ಆಳ್ವಿಕೆಯ ಒಂಭತ್ತನೇ ವರುಷವಾದ ಹಿಜ್ಕೀಯನ ಆರನೇ ವರುಷದಲ್ಲಿ ಸಮಾ ರ್ಯವು ತೆಗೆದುಕೊಳ್ಳಲ್ಪಟ್ಟಿತು.

2 ದಿನವೃತ್ತಾಂತ 28:6

ಅವರು ತಮ್ಮ ಪಿತೃಗಳ ಕರ್ತನಾದ ದೇವರನ್ನು ಬಿಟ್ಟದ್ದರಿಂದ ರೆಮಲ್ಯನ ಮಗ ನಾದ ಪೆಕಹನು ಒಂದೇ ದಿವಸದೊಳಗೆ ಯೆಹೂ ದದವರಲ್ಲಿ ಲಕ್ಷದ ಇಪ್ಪತ್ತು ಸಾವಿರ ಮಂದಿಯನ್ನು ಕೊಂದುಹಾಕಿದನು; ಇವರೆಲ್ಲರು ಪರಾಕ್ರಮಶಾಲಿ ಗಳಾಗಿದ್ದರು.

2 ದಿನವೃತ್ತಾಂತ 30:6

ಅದೇ ಪ್ರಕಾರ ದೂತರು ಅರಸನ ಕೈಯಿಂದಲೂ ಅವನ ಪ್ರಧಾನರ ಕೈಯಿಂದಲೂ ಪತ್ರಗಳನ್ನು ತಕ್ಕೊಂಡು ಅರಸನ ಅಪ್ಪಣೆಯ ಪ್ರಕಾರ ಸಮಸ್ತ ಇಸ್ರಾಯೇಲ್‌ ಯೆಹೂದ ದೇಶಗಳ ಮೇಲೆ ಹೋಗಿ--ಇಸ್ರಾಯೇಲ್‌ ಮಕ್ಕಳೇ, ಅಬ್ರಹಾಮ್‌ ಇಸಾಕ್‌ ಇಸ್ರಾಯೇಲ್‌ ಕರ್ತನಾದ ದೇವರ ಕಡೆಗೆ ತಿರುಗಿರಿ. ಆಗ ಆತನೂ ಅಶ್ಶೂರಿನ ಅರಸುಗಳ ಕೈಗೆ ತಪ್ಪಿಸಿಕೊಂಡ ನಿಮ್ಮ ಉಳಿದವರ ಬಳಿಗೆ ತಿರುಗುವನು.

ಸಾಮೇತಿಗಳು 23:29

ಯಾರಿಗೆ ಅಯ್ಯೋ? ಯಾರಿಗೆ ದುಃಖ? ಯಾರಿಗೆ ಕಲಹಗಳು? ಯಾರು ಗೋಳಾಡುತ್ತಾರೆ? ಯಾರು ಸುಮ್ಮಸುಮ್ಮನೆ ಗಾಯ ಪಡುತ್ತಾರೆ? ಯಾರಿಗೆ ಕೆಂಪೇ ರಿದ ಕಣ್ಣುಗಳು?

ಯೆಶಾಯ 5:11

ಮದ್ಯಪಾನವನ್ನು ಅತಿಯಾಗಿ ಕುಡಿಯಲು ಬೆಳ ಗಿನ ಜಾವದಲ್ಲಿ ಎದ್ದು ರಾತ್ರಿಯ ವರೆಗೂ ದ್ರಾಕ್ಷಾ ರಸದಿಂದ ಅಮಲೇರಿದವರಾಗಿ ಕಾಲ ಕಳೆಯುವವರಿಗೆ ಅಯ್ಯೋ!

ಯೆಶಾಯ 5:22

ದ್ರಾಕ್ಷಾರಸ ಕುಡಿಯುವದರಲ್ಲಿ ಶೂರರೂ ಮದ್ಯ ಮಿಶ್ರಣಗಳಲ್ಲಿ ಸಾಹಸಿಗಳೂ

ಯೆಶಾಯ 7:8

ದಮಸ್ಕವು ಸಿರಿ ಯಾದ ತಲೆಯಾಗಿದೆ ಮತ್ತು ದಮಸ್ಕದ ತಲೆಯು ರೆಚೀನ; ಅರುವತ್ತೈದು ವರುಷಗಳೊಳಗೆ ಎಫ್ರಾಯಾ ಮ್ಯರು ಭಂಗಪಟ್ಟು ಜನಾಂಗವೆನಿಸಿಕೊಳ್ಳರು.

ಯೆಶಾಯ 7:9

ಎಫ್ರಾ ಯಾಮಿನ ತಲೆ ಸಮಾರ್ಯ ಸಮಾರ್ಯದ ತಲೆ ರೆಮಲ್ಯನ ಮಗನು. ನೀವು ನಂಬದೆ ಹೋದರೆ ನೀವು ನಿಜವಾಗಿಯೂ ನೆಲೆಗೊಳ್ಳುವದಿಲ್ಲ ಎಂಬದೇ.

ಯೆಶಾಯ 8:4

ಆ ಮಗುವು--ಅಪ್ಪಾ, ಅಮ್ಮಾ ಎಂದು ಕೂಗಬಲ್ಲವನಾಗುವದರ ಮುಂಚೆ ಅಶ್ಯೂರದ ಅರಸ ನು ದಮಸ್ಕದ ಆಸ್ತಿಯನ್ನೂ ಸಮಾರ್ಯದ ಸೂರೆ ಯನ್ನೂ ತೆಗೆದುಕೊಂಡು ಹೋಗುವನು ಅಂದನು.

ಯೆಶಾಯ 9:8

ಕರ್ತನು ಯಾಕೋಬನಿಗೆ ಒಂದು ಮಾತನ್ನು ಹೇಳಿ ಕಳುಹಿಸಿದನು; ಅದು ಇಸ್ರಾಯೇಲ್ಯರ ಮೇಲೆ ಹೊಳೆಯಿತು.

ಯೆಶಾಯ 9:9

ಇಟ್ಟಿಗೆಗಳು ಬಿದ್ದುಹೋದರೂ ಕೆತ್ತಿದ ಕಲ್ಲುಗಳಿಂದ ಕಟ್ಟುವೆವು;

ಯೆಶಾಯ 9:11

ಹೀಗಿರುವದರಿಂದ ಕರ್ತನು ರೆಚೀ ನನ ವೈರಿಗಳನ್ನು ಅವನಿಗೆ ವಿರೋಧವಾಗಿ ಎಬ್ಬಿಸಿ ಅವನ ಶತ್ರುಗಳಾದ ಸಿರಿಯಾದವರನ್ನು ಮುಂದೆಯೂ ಫಿಲಿಷ್ಟಿಯರನ್ನು ಹಿಂದೆಯೂ ಒಟ್ಟುಗೂಡಿಸುವನು.

ಯೆಶಾಯ 28:3

ಕುಡುಕರಾದ ಎಫ್ರಾ ಯೀಮ್ಯರ ಗರ್ವದ ಕಿರೀಟವು ಕಾಲಿನಿಂದ ತುಳಿಯ ಲ್ಪಡುವದು.

ಯೆಶಾಯ 28:7

ಆದರೆ ಇವರು ಸಹ ದ್ರಾಕ್ಷಾರಸದಿಂದ ತಪ್ಪಿ ಮಧ್ಯದಿಂದ ಮೋಸಹೋಗಿದ್ದಾರೆ; ಯಾಜಕನೂ ಪ್ರವಾದಿಯೂ ಮದ್ಯದಿಂದ ತಪ್ಪಿ ದ್ರಾಕ್ಷಾರಸದ ವಶ ವಾಗಿದ್ದು ಮದ್ಯದಿಂದ ಮೋಸಹೋಗಿದ್ದಾರೆ; ದರ್ಶನ ದಲ್ಲಿ ತಪ್ಪುತ್ತಾರೆ. ನ್ಯಾಯತೀರ್ವಿಕೆಯಲ್ಲಿ ತತ್ತರಿಸುತ್ತಾರೆ.

ಹೊಶೇಯ 4:11

ವ್ಯಭಿಚಾರವೂ ದ್ರಾಕ್ಷಾರಸವೂ ಹೊಸ ದ್ರಾಕ್ಷಾರಸವೂ ಹೃದಯವನ್ನು ಕೆಡಿಸುತ್ತದೆ.

ಹೊಶೇಯ 5:5

ಇಸ್ರಾಯೇಲಿನ ಗರ್ವವು ತನ್ನ ಮುಖದ ಮುಂದೆ ಸಾಕ್ಷಿ ಕೊಡುತ್ತದೆ. ಆದದರಿಂದ ಇಸ್ರಾಯೇಲು ಮತ್ತು ಎಫ್ರಾಯಾಮು ತಮ್ಮ ಕೆಟ್ಟ ತನದಲ್ಲಿ ಬೀಳುವವು. ಯೆಹೂದವು ಅವರೊಂದಿಗೆ ಬೀಳುವದು.

ಹೊಶೇಯ 6:10

ಇಸ್ರಾಯೇಲಿನ ಮನೆತನದವರಲ್ಲಿ ಅತಿ ಭಯಂಕರ ವಾದ ಸಂಗತಿಯನ್ನು ನೋಡಿದೆನು. ಅಲ್ಲಿ ಎಫ್ರಾಯಾ ಮಿನ ವ್ಯಭಿಚಾರವು ನಡೆಯುತ್ತದೆ; ಇಸ್ರಾಯೇಲು ಹೊಲೆಯಾಗಿದೆ.ಹಾಗೂ ಓ ಯೆಹೂದವೇ, ನಾನು ನನ್ನ ಜನರನ್ನು ಅವರ ಸೆರೆಯಿಂದ ಬರಮಾಡಿದಾಗ ಆತನು ಸುಗ್ಗಿಯನ್ನು ನಿನಗೆ ನೇಮಿಸಿದ್ದಾನೆ.

ಹೊಶೇಯ 7:5

ನಮ್ಮ ಅರಸನ ದಿನದಲ್ಲಿ ಪ್ರಧಾನರು ದ್ರಾಕ್ಷಾರಸದ ಬುದ್ದಲಿಗಳಿಂದ ಅಸ್ವಸ್ಥರಾ ಗುತ್ತಾರೆ, ಅವನು ಪರಿಹಾಸ್ಯಗಾರರ ಸಂಗಡ ತನ್ನ ಕೈಚಾಚುತ್ತಾನೆ.

ಆಮೋಸ 2:8

ಅವರು ಅಡ ಇಟ್ಟ ವಸ್ತ್ರಗಳ ಮೇಲೆ ಪ್ರತಿಯೊಂದು ಬಲಿಪೀಠಗಳ ಬಳಿಯಲ್ಲೂ ಮಲಗುತ್ತಾರೆ ಮತ್ತು ನಿಷೇಧಿಸಿದ ದ್ರಾಕ್ಷಾರಸವನ್ನು ತಮ್ಮ ದೇವರ ಆಲಯದಲ್ಲಿ ಕುಡಿ ಯುತ್ತಾರೆ. ಬಳಿಯಲ್ಲೂ ಮಲಗುತ್ತಾರೆ ಮತ್ತು ನಿಷೇಧಿಸಿದ ದ್ರಾಕ್ಷಾರಸವನ್ನು ತಮ್ಮ ದೇವರ ಆಲಯದಲ್ಲಿ ಕುಡಿ ಯುತ್ತಾರೆ.

ಆಮೋಸ 2:12

ಆದರೆ ನೀವು ನಾಜೀರರಿಗೆ ಕುಡಿ ಯಲು ದ್ರಾಕ್ಷಾರಸವನ್ನು ಕೊಟ್ಟಿರಿ; ಪ್ರವಾದಿಗಳಿಗೆಪ್ರವಾದಿಸಬೇಡಿರೆಂದು ಆಜ್ಞಾಪಿಸಿದಿರಿ.

ಆಮೋಸ 4:1

ಸಮಾರ್ಯದ ಬೆಟ್ಟದಲ್ಲಿರುವ ಬಾಷಾನಿನ ಹಸುಗಳೇ, ಬಡವರನ್ನು ಬಲಾತ್ಕಾರ ಮಾಡಿ, ದರಿದ್ರರನ್ನು ಜಜ್ಜಿ ತಮ್ಮ ಯಜಮಾನರಿಗೆ --ಪಾನವನ್ನು ತರಿಸಿರಿ, ಕುಡಿಯೋಣ ಎಂದು ಹೇಳು ವವರೇ, ಈ ವಾಕ್ಯವನ್ನು ಕೇಳಿರಿ.

ಆಮೋಸ 6:1

ಚೀಯೋನಿನಲ್ಲಿ ನಿಶ್ಚಿಂತೆಯಿಂದಿರುವವ ರಿಗೂ ಸಮಾರ್ಯ ಬೆಟ್ಟದಲ್ಲಿ ನಂಬಿಕೆ ಯಿಡುವವರಿಗೂ ಇಸ್ರಾಯೇಲಿನ ಮನೆತನದವರ ಯಾರ ಬಳಿಗೆ ಬರುತ್ತಾರೋ ಆ ಪ್ರಮುಖ ಜನಾಂಗ ದಲ್ಲಿ ಹೆಸರುಗೊಂಡವರಿಗೂ ಅಯ್ಯೋ!

ಆಮೋಸ 6:4

ದಂತದ ಮಂಚಗಳ ಮೇಲೆ ಮಲಗಿಕೊಳ್ಳು ತ್ತಾರೆ; ತಮ್ಮ ಹಾಸಿಗೆಗಳ ಮೇಲೆ ಹಾಯಾಗಿ ಒರಗಿ ಕೊಳ್ಳುತ್ತಾರೆ; ಮಂದೆಯೊಳಗಿಂದ ಕುರಿಮರಿಗಳನ್ನು, ಹಟ್ಟಿಯ ಮಂದೆಯೊಳಗಿಂದ ಕರುಗಳನ್ನು ತಿನ್ನುತ್ತಾರೆ.

ಆಮೋಸ 6:6

ದ್ರಾಕ್ಷಾರಸದ ಪಾತ್ರೆಗಳಲ್ಲಿ ಕುಡಿಯುತ್ತಾರೆ. ಶ್ರೇಷ್ಠವಾದ ಎಣ್ಣೆಗಳಿಂದ ತಮ್ಮನ್ನು ಅಭಿಷೇಕಿಸಿ ಕೊಳ್ಳುತ್ತಾರೆ. ಆದರೆ ಯೋಸೇಫನ ನಷ್ಟಕ್ಕೆ ವ್ಯಸನಪಡು ವದಿಲ್ಲ.

ಆಮೋಸ 6:8

ಸೈನ್ಯಗಳ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ದೇವರಾದ ಕರ್ತನು ತನ್ನ ಮೇಲೆ ಆಣೆಯಿಟ್ಟುಕೊಂಡಿ ದ್ದಾನೆ; ಅದೇನಂದರೆ--ನಾನು ಯಾಕೋಬಿನ ಹೆಚ್ಚಳ ವನ್ನು ಅಸಹ್ಯಿಸಿಕೊಂಡು ಅವನ ಅರಮನೆಗಳನ್ನು ಹಗೆ ಮಾಡುತ್ತೇನೆ; ಅದಕಾರಣ ಪಟ್ಟಣವನ್ನೂ ಅದರಲ್ಲಿ ರುವ ಸಮಸ್ತವನ್ನೂ ನಾನು ಒಪ್ಪಿಸಿಬಿಡುತ್ತೇನೆ.

Interlinear

Choose Theme