Home Bibles ☰ Books ಯೆಶಾಯ 26:14 · ಕನ್ನಡ ಬೈಬಲ್
ಯೆಶಾಯ 26:14 · ಕನ್ನಡ ಬೈಬಲ್

ಅವರು ಸತ್ತರು ಬದುಕುವ ದಿಲ್ಲ; ಆದ್ದರಿಂದ ನೀನು ಅವರನ್ನು ಸಂದರ್ಶಿಸಿ ನಾಶ ಮಾಡಿ ಅವರ ಎಲ್ಲಾ ಜ್ಞಾಪಕಗಳನ್ನು ಅಳಿಸಿಬಿಟ್ಟಿದ್ದೀ.

Cross references

ನಿರ್ಗಮಕಾಂಡ 14:30

ಆ ದಿನದಲ್ಲಿ ಕರ್ತನು ಈ ಪ್ರಕಾರ ಇಸ್ರಾಯೇಲ್ಯ ರನ್ನು ಐಗುಪ್ತ್ಯರ ಕೈಯಿಂದ ರಕ್ಷಿಸಿದನು. ಇಸ್ರಾಯೇ ಲ್ಯರು ಸಮುದ್ರತೀರದಲ್ಲಿ ಸತ್ತ ಐಗುಪ್ತ್ಯರನ್ನು ನೋಡಿ ದರು.ಐಗುಪ್ತ್ಯರ ಮೇಲೆ ಕರ್ತನು ಮಾಡಿದ ದೊಡ್ಡ ಕಾರ್ಯವನ್ನು ಇಸ್ರಾಯೇಲ್ಯರು ನೋಡಿ ಕರ್ತ ನಿಗೆ ಭಯಪಟ್ಟು ಕರ್ತನಲ್ಲಿಯೂ ಆತನ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯಿಟ್ಟರು.

ದ್ವಿತೀಯೋಪದೇಶಕಾಂಡ 4:28

ಅಲ್ಲಿ ನೀವು ಮನುಷ್ಯರ ಕೈಕೆಲಸವಾದ ಅಂದರೆ ನೋಡದೆಯೂ ಕೇಳದೆಯೂ ಉಣ್ಣದೆಯೂ ಮೂಸಿ ನೋಡದೆಯೂ ಇರುವಂಥ ಮರ ಕಲ್ಲುಗಳಾದ ದೇವರುಗಳನ್ನು ಸೇವಿಸುವಿರಿ.

ಯೋಬ 7:9

ಮೋಡವು ಕರಗಿಹೋಗುವ ಹಾಗೆಯೇ, ಪಾತಾಳಕ್ಕೆ ಇಳಿದವನು ಹಿಂತಿರುಗಿ ಬರಲಾರನು.

ಯೋಬ 18:17

ಅವನ ಜ್ಞಾಪಕವು ದೇಶದೊಳಗಿಂದ ನಾಶವಾಗುವದು; ಬೀದಿಗಳಲ್ಲಿ ಅವನಿಗೆ ಹೆಸರು ಇಲ್ಲದೆ ಇರುವದು.

ಯೋಬ 24:20

ಗರ್ಭವು ಅವನನ್ನು ಮರೆತುಬಿಡುವದು; ಹುಳವು ಅವನಲ್ಲಿ ಸವಿ ಊಟ ಹೊಂದುವದು; ಇನ್ನು ಅವನ ನೆನಪು ಇರುವದಿಲ್ಲ; ಮರದ ಹಾಗೆ ಅನ್ಯಾಯವು ಮುರಿಯಲ್ಪಡುವದು.

ಕೀರ್ತನೆಗಳು 9:6

ಓ ಶತ್ರುವೇ, ನಾಶನ ಗಳು ಸದಾಕಾಲಕ್ಕೆ ಮುಗಿದಿವೆ; ನೀನು ಪಟ್ಟಣಗಳನ್ನು ನಾಶಮಾಡಿದ್ದೀ; ಅವರ ಜ್ಞಾಪಕವು ಅವರೊಂದಿಗೆ ನಾಶವಾಯಿತು.

ಕೀರ್ತನೆಗಳು 106:28

ಬಾಳ್‌ಪೆಗೊ ಯೋರಿಗೆ ಕೂಡಿಕೊಂಡು ಸತ್ತವರಿಗೆ ಅರ್ಪಿಸಿದ ಬಲಿಗಳನ್ನು ತಿಂದು

ಕೀರ್ತನೆಗಳು 109:13

ಅವನ ಸಂತಾನವು ನಿರ್ನಾಮವಾಗಲಿ; ಎರಡನೇ ತಲಾಂತರದಲ್ಲಿ ಅವರ ಹೆಸರು ಅಳಿದು ಹೋಗಲಿ.

ಸಾಮೇತಿಗಳು 10:7

ನೀತಿ ವಂತರ ಸ್ಮರಣೆಯು ಧನ್ಯಕರವಾಗಿದೆ; ದುಷ್ಟರ ಹೆಸರು ಕೊಳೆಯುತ್ತದೆ.

ಯೆಶಾಯ 8:19

ಲೊಚಗುಟ್ಟುವ ಪಿಸುಮಾತಾಡುವ ಮಂತ್ರಗಾರ ರನ್ನೂ ಕಣಿಹೇಳುವವರನ್ನೂ ಹುಡುಕಿರಿ ಎಂದು ಅವರು ನಿಮಗೆ ಹೇಳುವಾಗ ಜನರು ತಮ್ಮ ದೇವರನ್ನೇ ಹುಡುಕುವದಿಲ್ಲವೋ? ಜೀವಿತರಿಗಾಗಿ ಸತ್ತವರಲ್ಲಿ ಹೋಗುವದುಂಟೋ?

ಯೆಶಾಯ 10:3

ವಿಚಾರಣೆಯ ದಿನದಲ್ಲಿಯೂ ದೂರ ದಿಂದ ಬರುವ ನಾಶನದಲ್ಲಿಯೂ ನೀವು ಏನು ಮಾಡು ವಿರಿ? ಸಹಾಯಕ್ಕಾಗಿ ನೀವು ಯಾರ ಬಳಿಗೆ ಓಡುವಿರಿ? ನಿಮ್ಮ ವೈಭವವನ್ನು ಎಲ್ಲಿ ಬಿಡುವಿರಿ?

ಯೆಶಾಯ 14:19

ಆದರೆ ನೀನು ಅಸಹ್ಯವಾದ ಕೊಂಬೆಯಂತೆಯೂ ಕತ್ತಿಯಿಂದ ತಿವಿದು ಗುಂಡಿಯ ಕಲ್ಲುಗಳ ಪಾಲಾಗಿ ಹತರಾದವರ ಉಡುಪಿನಂತೆಯೂ ಕಾಲಕೆಳಗೆ ತುಳಿಯಲ್ಪಟ್ಟ ಹೆಣ ದಂತೆಯೂ ನಿನ್ನ ಸಮಾಧಿಯೊಳಗಿಂದ ಹೊರಗೆ ಹಾಕ ಲ್ಪಟ್ಟಿದ್ದೀ.

Interlinear

Choose Theme