ಆ ದಿವಸದಲ್ಲಿ ಆಗುವದೇನಂದರೆ--ಕರ್ತನು ಉನ್ನತದಲ್ಲಿರುವ ಉನ್ನತವಾದವರ ಸೈನ್ಯವನ್ನೂ ಭೂಮಿಯ ಮೇಲಿರುವ ಭೂರಾಜರನ್ನೂ ದಂಡಿಸು ವನು.
Cross references
ಆತನು ಪ್ರಧಾನರ ಪ್ರಾಣವನ್ನು ತೆಗೆದು ಹಾಕು ತ್ತಾನೆ; ಭೂಮಿಯ ಅರಸುಗಳಿಗೆ ಭಯಂಕರ ನಾಗಿದ್ದಾನೆ.
ಉನ್ನತ ದೇವರ ಸ್ತೋತ್ರಗಳು ಅವರ ಬಾಯಿಯ ಲ್ಲಿಯೂ ಇಬ್ಬಾಯಿ ಕತ್ತಿಯು ಅವರ ಕೈಯಲ್ಲಿಯೂ ಇರಲಿ.
ಆದಕಾರಣ, ಕರ್ತನು ಚೀಯೋನ್ ಪರ್ವತದ ಮೇಲೆಯೂ ಯೆರೂಸಲೇಮಿನ ಮೇಲೆಯೂ ತನ್ನ ಕಾರ್ಯಗಳನ್ನು ಮಾಡಿ ಮುಗಿಸಿದ ಮೇಲೆ, ಅಶ್ಶೂರದ ಅರಸನ ಹೃದಯದ ದೊಡ್ಡಸ್ತಿಕೆಯ ಫಲವನ್ನು ಅವನ ಉನ್ನತವಾದ ದೃಷ್ಟಿಯ ಘನತೆಯನ್ನು ನಾನು ದಂಡಿ ಸುವೆನು.
ಇನ್ನು ಸ್ವಲ್ಪ ಕಾಲದಲ್ಲಿ, (ನಿಮ್ಮ ಮೇಲಿನ) ಉಗ್ರವು ತೀರಿ ನನ್ನ ಕೋಪವು ಅವರ ನಾಶನಕ್ಕಾ ಗುವದು.
ಕರ್ತನು ಯಾಕೋಬ್ಯರನ್ನು ಕರುಣಿಸಿ ಮತ್ತೆ (ಇನ್ನೂ) ಇಸ್ರಾಯೇಲ್ಯರನ್ನು ಆದುಕೊಂಡು ಅವರನ್ನು ತಮ್ಮ ಸ್ವಂತ ದೇಶದಲ್ಲಿ ಸೇರಿಸಬೇಕೆಂದಿದ್ದಾನೆ. ಅನ್ಯರು ಅವರೊಂದಿಗೆ ಕೂಡಿ ಬಂದು ಯಾಕೋಬನ ಮನೆತನಕ್ಕೆ ಸೇರಿಕೊಳ್ಳುವರು.
ಈ ಪರ್ವತದಲ್ಲಿ ಕರ್ತನ ಕೈ ವಿಶ್ರ ಮಿಸಿಕೊಳ್ಳುವದು; (ನೆಲೆಯಾಗಿರುವದು) ಒಣ ಹುಲ್ಲ ನ್ನು ತಿಪ್ಪೆಗುಂಡಿಯಲ್ಲಿ ತುಳಿಯುವಂತೆ ಮೋವಾಬು ಆತನ ಕೆಳಗೆ ತುಳಿಯಲ್ಪಡುವದು.
ಕರ್ತನು ಸಕಲ ಜನಾಂಗಗಳ ಮೇಲೆ ಕೋಪಮಾಡಿ ಅವುಗಳ ಎಲ್ಲಾ ಸೈನ್ಯಗಳ ಮೇಲೆ ರೋಷಗೊಂಡು ಅವರನ್ನು ಕೊಲೆಗೆ ಈಡುಮಾಡಿ ಸಂಪೂರ್ಣವಾಗಿ ನಾಶಮಾಡಿದ್ದಾನೆ.
ಕರ್ತನ ವಾಕ್ಯವು ಬಂದು ನನಗೆ ಹೇಳಿದ್ದೇನಂದರೆ--
ಆದದರಿಂದ, ಮನುಷ್ಯಪುತ್ರನೇ, ನೀನು, ಗೋಗನಿಗೆ ವಿರುದ್ಧವಾಗಿ ಪ್ರವಾದಿಸಿ, ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳು --ಇಗೋ, ಮೇಷಕ್ ಮತ್ತು ತೂಬಲಿಗೆ ಮುಖ್ಯ ಪ್ರಭುವಾದ ಓ ಗೋಗನೇ, ನಾನು ನಿನಗೆ ವಿರೋಧ ವಾಗಿದ್ದೇನೆ;
ನೀನು ತೆರೆದ ಬಯಲಿನ ಮೇಲೆ ಬೀಳುವಿ; ನಾನೇ ಇದನ್ನು ಹೇಳಿರುವೆನು ಎಂದು ದೇವರಾದ ಕರ್ತನು ಹೇಳುತ್ತಾನೆ.
ಜನಾಂಗಗಳಲ್ಲಿ ಇದನ್ನು ಘೋಷಿಸಿರಿ; ಯುದ್ಧವನ್ನು ಸಿದ್ಧಮಾಡಿರಿ, ಶೂರರನ್ನು ಎಬ್ಬಿಸಿರಿ; ಯುದ್ಧಸ್ಥರೆಲ್ಲರು ಸವಿಾಪಕ್ಕೆ ಬರಲಿ.
ಐಗುಪ್ತವು ಹಾಳಾಗು ವದು; ಎದೋಮು ಹಾಳಾದ ಅರಣ್ಯವಾಗುವದು; ಅವರು ಯೆಹೂದನ ಮಕ್ಕಳನ್ನು ಬಲಾತ್ಕಾರಮಾಡಿ ತಮ್ಮ ದೇಶದಲ್ಲಿ ಅಪರಾಧವಿಲ್ಲದ ರಕ್ತವನ್ನು ಚೆಲ್ಲಿ ದರು.
ಹೇಗಂದರೆ, ಯೆಹೂದದ ಅಧಿಪತಿಯಾದ ಜೆರುಬ್ಬಾಬೆಲನಿಗೆ ನೀನು ಹೇಳತಕ್ಕದ್ದೇನಂದರೆ--ನಾನು ಆಕಾಶಗಳನ್ನೂ ಭೂಮಿಯನ್ನೂ ಕದಲಿಸುವೆನು.
ಯೆರೂಸಲೇಮಿಗೆ ವಿರೋಧವಾಗಿ ದಂಡುಕಟ್ಟಿ ಕೊಂಡಿರುವ ಎಲ್ಲಾ ಜನಗಳನ್ನು ಕರ್ತನು ವ್ಯಾಧಿ ಯಿಂದ ಬಾಧಿಸುವನು; ಹೀಗೆಯೇ ಅವರು ಕಾಲಿನ ಮೇಲೆ ನಿಲ್ಲುವಾಗ ಅವರ ಶರೀರವು ಕ್ಷಯಿಸಿಹೋಗು ವದು; ಅವರ ಕಣ್ಣುಗಳು ಗುಣಿಗಳಲ್ಲಿ ಇಂಗಿಹೋಗು ವವು; ಅವರ ನಾಲಿಗೆ ಅವರ ಬಾಯಲ್ಲಿ ಕ್ಷಯಿಸಿ ಹೋಗುವದು.
ಆಕಾಶವು ಸುರುಳಿಯ ಹಾಗೆ ಸುತ್ತಲ್ಪಟ್ಟು ಹೋಗಿ ಬಿಟ್ಟಿತು; ಎಲ್ಲಾ ಬೆಟ್ಟಗಳೂ ದ್ವೀಪಗಳೂ ತಮ್ಮ ತಮ್ಮ ಸ್ಥಳಗಳಿಂದ ಚದರಿದವು.
ಇವರು ಕುರಿಮರಿಯಾದಾತನ ಮೇಲೆ ಯುದ್ಧ ಮಾಡುವರು, ಆದರೆ ಕುರಿಮರಿ ಯಾದಾತನು ಅವರನ್ನು ಜಯಿಸುವನು; ಯಾಕಂದರೆ ಆತನು ಕರ್ತರ ಕರ್ತನೂ ರಾಜಾಧಿರಾಜನು ಆಗಿದ್ದಾನೆ. ಇದಲ್ಲದೆ ಆತನೊಂದಿಗೆ ಇರುವವರು ಕರೆಯಲ್ಪಟ್ಟ ವರೂ ಆಯಲ್ಪಟ್ಟವರೂ ನಂಬಿಗಸ್ತರು ಆಗಿದ್ದಾರೆ.
ಅವಳೊಂದಿಗೆ ಜಾರತ್ವ ಮಾಡಿ ವೈಭವದಲ್ಲಿ ಬದುಕಿದ ಭೂರಾಜರು ಅವಳ ದಹನದ ಹೊಗೆಯನ್ನು ನೋಡು ವಾಗ ಅವಳಿಗಾಗಿ ಗೋಳಾಡುತ್ತಾ ಪ್ರಲಾಪಿಸುವರು.
ರಾಜರ ಮಾಂಸವನ್ನೂ ಸೈನ್ಯಾಧಿಪತಿ ಗಳ ಮಾಂಸವನ್ನೂ ಪರಾಕ್ರಮಶಾಲಿಗಳ ಮಾಂಸವನ್ನೂ ಕುದುರೆಗಳ ಮಾಂಸವನ್ನೂ ಅವುಗಳ ಮೇಲೆ ಕೂತವರ ಮಾಂಸವನ್ನೂ ಮತ್ತು ಸ್ವತಂತ್ರರೂ ದಾಸರೂ ಚಿಕ್ಕವರೂ ದೊಡ್ಡವರೂ ಇವರೆಲ್ಲರ ಮಾಂಸವನ್ನೂ ತಿನ್ನುವದಕ್ಕೆ ಬನ್ನಿರಿ ಎಂದು ಹೇಳಿದನು.