Home Bibles ಯೆಶಾಯ 21:10 · ಕನ್ನಡ ಬೈಬಲ್
ಯೆಶಾಯ 21:10 · ಕನ್ನಡ ಬೈಬಲ್

ನಾನು ತುಳಿಯುವ ತೆನೆಯೇ, ನನ್ನ ಕಣದ ಧಾನ್ಯವೇ, ಇಸ್ರಾಯೇಲಿನ ದೇವರಾಗಿರುವ ಸೈನ್ಯಗಳ ಕರ್ತನಿಂದ ನಾನು ಕೇಳಿದ್ದನ್ನು ನಿಮಗೆ ತಿಳಿಸಿದ್ದೇನೆ.

Cross references

1 ಅರಸುಗಳು 22:14

ಅದಕ್ಕೆ ವಿಾಕಾಯೆಹು--ಕರ್ತನ ಜೀವ ದಾಣೆ, ಕರ್ತನು ನನಗೆ ಏನು ಹೇಳುವನೋ ಅದನ್ನು ಮಾತನಾಡುವೆನು ಅಂದನು. ಹೀಗೆ ಅವನು ಅರಸನ ಬಳಿಗೆ ಬಂದನು.

2 ಅರಸುಗಳು 13:7

ಆದರೂ ಯೆಹೋವಾಹಾಜನಿಗೆ ಐವತ್ತು ಕುದುರೆ ರಾಹುತ ರನ್ನೂ ಹತ್ತು ರಥಗಳನ್ನೂ ಹತ್ತು ಸಾವಿರ ಕಾಲಾಳು ಗಳನ್ನೂ ಹೊರತು ಜನರಲ್ಲಿ ಏನೂ ಬಿಡಲಿಲ್ಲ. ಯಾಕಂದರೆ ಅರಾಮ್ಯರ ಅರಸನು ಅವರನ್ನು ಸಂಹ ರಿಸಿ ತುಳಿಯಲ್ಪಟ್ಟ ಧೂಳಿನ ಹಾಗೆ ಮಾಡಿದ್ದನು.

ಯೆಶಾಯ 28:28

ರೊಟ್ಟಿಯ ಕಾಳನ್ನು ಕುಟ್ಟುವನೋ? ಅವನು ಯಾವಾಗಲೂ ಅದನ್ನು ಒಕ್ಕುವದಿಲ್ಲ; ಇಲ್ಲವೇ ಅವನ ಬಂಡಿಯ ಚಕ್ರದಿಂದ ಅದರ ಮೇಲೆ ಒಡೆಯುವದಿಲ್ಲ, ಅಥವಾ ಅವನ ಕುದುರೆ ಸವಾರರಿಂದ ಕುಣಿಸುವದಿಲ್ಲ.ಈ ವಿವೇಕವು ಸಹ ಅತಿಶಯಾಲೋಚನಾಪರನೂ ಕಾರ್ಯಸಾಧಕ ಜ್ಞಾನಶ್ರೇಷ್ಠನೂ ಆಗಿರುವ ಸೈನ್ಯಗಳ ಕರ್ತನಿಂದಲೇ ಹೊರಡುತ್ತದೆ.

ಯೆಶಾಯ 41:15

ಇಗೋ, ನಿನ್ನನ್ನು ಹದವಾದ, ಹೊಸ, ಮೊನೆಹಲ್ಲಿನ ಹಂತಿಕುಂಟೆಯನ್ನಾಗಿ (ಹೊಕ್ಕುವ ಯಂತ್ರ) ಮಾಡು ವೆನು, ನೀನು ಬೆಟ್ಟಗಳನ್ನು ಹೊಕ್ಕು ಪುಡಿಪುಡಿ ಮಾಡಿ ಗುಡ್ಡಗಳನ್ನು ಹೊಟ್ಟಿನಂತೆ ಮಾಡುವಿ.

ಯೆರೆಮಿಯ 51:33

ಆಗ ಅವನು ಬದುಕಿದ ದಿನಗಳೆಲ್ಲಾ ಯಾವಾಗಲೂ ಅವನ ಮುಂದೆ ಊಟಮಾಡುತ್ತಿದ್ದನು.ಅವನ ಆಹಾರದ ವಿಷಯ ವೇನಂದರೆ--ಅವನು ಬದುಕಿದ ದಿನಗಳೆಲ್ಲಾ ಅವನು ಸಾಯುವ ದಿನದವರೆಗೆ ದಿನದಿನಕ್ಕೆ ತಕ್ಕ ಆಹಾರವು ಯಾವಾಗಲೂ ಬಾಬೆಲಿನ ಅರಸನ ಕಡೆಯಿಂದ ಕೊಡಲ್ಪಡುತ್ತಿತ್ತು.

ಯೆಹೆಜ್ಕೇಲ 3:17

ಮನುಷ್ಯಪುತ್ರನೇ, ನಾನು ನಿನ್ನನ್ನು ಇಸ್ರಾಯೇ ಲಿನ ಮನೆಯನ್ನು ಕಾಯಲು ಕಾವಲುಗಾರನನ್ನಾಗಿ ಮಾಡಿದ್ದೇನೆ. ಆದದರಿಂದ ನನ್ನ ವಾಕ್ಯವನ್ನು ನನ್ನ ಬಾಯಿಂದ ಕೇಳಿ ನನ್ನಿಂದ ಅವರಿಗೆ ಎಚ್ಚರಿಕೆ ಕೊಡು.

ಆಮೋಸ 3:8

ಸಿಂಹವು ಗರ್ಜಿಸಿದರೆ ಭಯಪಡದೆ ಇರುವ ವರು ಯಾರು? ಕರ್ತನಾದ ದೇವರು ಮಾತನಾಡಿದರೆ ಅದನ್ನು ಪ್ರವಾದಿಸದೆ ಇರುವವರು ಯಾರು?

ಮೀಕ 4:13

ಚೀಯೋನಿನ ಕುಮಾರ್ತೆಯೇ; ಎದ್ದು ತುಳಿ. ನಿನ್ನ ಕೊಂಬನ್ನು ಕಬ್ಬಿಣವಾಗಿಯೂ ನಿನ್ನ ಗೊರಸೆಗಳನ್ನು ತಾಮ್ರವಾಗಿಯೂ ಮಾಡುವೆನು. ನೀನು ಅನೇಕ ಜನಗಳನ್ನು ಪುಡಿಪುಡಿಮಾಡುವಿ; ಮತ್ತು ಅವರ ಲಾಭವನ್ನು ಕರ್ತನಿಗೂ ಅವರ ಸಂಪತ್ತನ್ನು ಸಮಸ್ತ ಭೂಮಿಯ ಕರ್ತನಿಗೂ ಪ್ರತಿಷ್ಠೆ ಮಾಡುವೆನು.

ಹಬಕ್ಕೂಕ 3:12

ನೀನು ಸಿಟ್ಟಿನಿಂದ ದೇಶದ ಮೇಲೆ ನಡೆದುಹೋಗಿ ಕೋಪದಿಂದ ಅನ್ಯಜನಾಂಗಗಳನ್ನು ತುಳಿದುಹಾಕಿದ್ದೀ.

ಮತ್ತಾಯ 3:12

ಒನೆಯುವ ಮೊರವನ್ನು ಆತನು ತನ್ನ ಕೈಯಲ್ಲಿ ಹಿಡಿದಿದ್ದಾನೆ; ಆತನು ತನ್ನ ಕಣವನ್ನು ಸಂಪೂರ್ಣವಾಗಿ ಹಸನುಮಾಡಿ ತನ್ನ ಗೋಧಿಯನ್ನು ಕಣಜದಲ್ಲಿ ಕೂಡಿಸುವನು; ಆದರೆ ಹೊಟ್ಟನ್ನು ಆರದ ಬೆಂಕಿಯಿಂದ ಸುಟ್ಟುಬಿಡುವನು ಎಂದು ಹೇಳಿದನು.

ಅಪೋಸ್ತಲರ ಕೃತ್ಯಗಳು 20:26

ಆದಕಾರಣ ಎಲ್ಲಾ ಮನುಷ್ಯರ ರಕ್ತದ ವಿಷಯದಲ್ಲಿ ನಾನು ನಿರ್ದೋಷಿಯಾಗಿದ್ದೇನೆಂಬದಕ್ಕೆ ಈ ದಿವಸ ನೀವೇ ನನಗೆ ಸಾಕ್ಷಿಗಳು.

Interlinear

Choose Theme