ಹಾಗೆಯೇ ಅಶ್ಶೂರಿನ ಅರಸನು ಐಗುಪ್ತ್ಯರನ್ನು ಬಂಧಿಸಿ ಐಥಿಯೋಪಿಯಾದ ಕೈದಿಗಳನ್ನು ಅವರು ದೊಡ್ಡವರಾಗಲಿ ಸಣ್ಣವರಾಗಲಿ ಬಟ್ಟೆ ಕೆರಗಳಿಲ್ಲದೆ ಬರಿ ಕುಂಡಿಯವರಾಗಿ ಐಗುಪ್ತದ ಮಾನಭಂಗಕ್ಕೋ ಸ್ಕರ ಸೆರೆಗೆ ನಡೆಯುವಂತೆ ಮಾಡುವನು.
Cross references
ಆದದರಿಂದ ಹಾನೂನನು ದಾವೀದನ ಸೇವಕರನ್ನು ಹಿಡಿದು ಅವರ ಅರ್ಧ ಗಡ್ಡವನ್ನು ಬೋಳಿಸಿ ಅವರ ವಸ್ತ್ರಗಳನ್ನು ಮಧ್ಯದಲ್ಲಿ ಕುಂಡಿಯ ವರೆಗೆ ಕತ್ತರಿಸಿ ಅವರನ್ನು ಕಳುಹಿಸಿದನು.
ಆದದರಿಂದ ಹಾನೂ ನನು ದಾವೀದನ ಸೇವಕರನ್ನು ಹಿಡಿದು ಅವರನ್ನು ಬೋಳಿಸಿ ಅವರ ಅಂಗಿಗಳನ್ನು ಮಧ್ಯದಲ್ಲಿ ಸೊಂಟದ ಕೆಳಗಿನ ವರೆಗೂ ಕತ್ತರಿಸಿ ಅವರನ್ನು ಕಳುಹಿಸಿಬಿಟ್ಟನು.
ಚೀಯೋನ್ ಕುಮಾ ರ್ತೆಯರ ತಲೆಯ ಮೇಲ್ಭಾಗವನ್ನು ಕಜ್ಜಿಯಿಂದ ಕರ್ತನು ಹೊಡೆಯುವನು, ಅವರ ಗುಪ್ತಾಂಗಗಳನ್ನು ಬೈಲುಪಡಿಸುವನು.
ಇದ ಲ್ಲದೆ ಐಗುಪ್ತವನ್ನು ಕ್ರೂರನಾದ ಒಡೆಯನ ಕೈಗೆ ಒಪ್ಪಿಸುವೆನು; ಭಯಂಕರನಾದ ರಾಜನು ಅವರ ನ್ನಾಳುವನು ಎಂದು ಸೈನ್ಯಗಳ ಕರ್ತನಾದ ಕರ್ತನು ಹೇಳುತ್ತಾನೆ.
ಆದಾಗ್ಯೂ ಆತನು ಜ್ಞಾನಿಯಾಗಿದ್ದಾನೆ ತನ್ನ ಮಾತನ್ನು ಹಿಂತೆಗೆಯದೆ ಕೇಡನ್ನು ಬರಮಾಡು ವನು; ಆದರೆ ಕೆಡುಕರ ಮನೆತನಕ್ಕೂ ಅನ್ಯಾಯಗಾ ರರ ಸಹಾಯಕರಿಗೂ ವಿರುದ್ಧವಾಗಿ ಏಳುವನು.
ಐಗು ಪ್ತ್ಯರು ಮನುಷ್ಯಮಾತ್ರದವರೇ, ದೇವರಲ್ಲ; ಅವರ ಅಶ್ವಗಳು ಆತ್ಮವಲ್ಲ, ಮಾಂಸಮಯವೇ; ಹೀಗಿರುವದ ರಿಂದ ಕರ್ತನು ತನ್ನ ಕೈಚಾಚುವಾಗ ಸಹಾಯ ಮಾಡಿ ದವನು ಮತ್ತು ಸಹಾಯಪಡೆದವನೂ ಬಿದ್ದುಹೋಗು ವನು, ಅಂತೂ ಎಲ್ಲರೂ ಒಟ್ಟಿಗೆ ಲಯವಾಗುವರು.
ನಿನ್ನ ಬೆತ್ತಲೆತನವು ಮುಚ್ಚಲ್ಪಡದೇ ಇದ್ದದರಿಂದ ನೀನು ನಾಚಿಕೆಗೆ ಈಡಾಗುವಿ, ನಾನು ನಿನ್ನನ್ನು ಮನುಷ್ಯನಂತೆ ಸಂದಿಸದೆ ನಿನಗೆ ಮುಯ್ಯಿ ತೀರಿಸುವೆನು.
ಅನ್ಯರ ವ್ಯರ್ಥ ವಿಗ್ರಹಗಳಲ್ಲಿ ಮಳೆ ಕೊಡಬಲ್ಲವು ಗಳು ಉಂಟೋ? ಅಥವಾ ಆಕಾಶವು ಜಡಿ ಮಳೆ ಯನ್ನು ಕೊಡುವದಕ್ಕಾಗುವದೋ? ನಮ್ಮ ದೇವ ರಾಗಿರುವ ಕರ್ತನು ನೀನೇ ಅಲ್ಲವೋ? ಆದದರಿಂದ ನಿನ್ನನ್ನು ನಿರೀಕ್ಷಿಸುವೆವು; ನೀನೇ ಇವುಗಳನ್ನೆಲ್ಲಾ ಮಾಡುತ್ತೀ.
ತಹಪನೇಸಿನಲ್ಲಿಯೂ ನಾನು ಐಗುಪ್ತದ ನೊಗ ಗಳನ್ನು ಮುರಿಯುವಾಗ ಹಗಲು ಕತ್ತಲಾಗುವದು. ಅದರ ಶಕ್ತಿಯ ಮದವು ಅಡಗಿ ಹೋಗುವದು, ಅದನ್ನು ಮೇಘವು ಮುಚ್ಚುವದು. ಅದರ ಕುಮಾರಿ ಯರು ಸೆರೆಗೆ ಹೋಗುವರು.
ಶಾಫೀರಿನ ನಿವಾಸಿಯೇ, ನಾಚಿಕೆ ಮುಚ್ಚದೆ ಹಾದುಹೋಗು; ಬೇತೇಚೆಲಿನ ಗೋಳಾಟದಲ್ಲಿ ಚಾನಾನಿನ ನಿವಾಸಿ ಮುಂದೆ ಬರಲಿಲ್ಲ; ಅವನು ನಿಮ್ಮಿಂದ ತನ್ನ ಸ್ಥಾನವನ್ನು ತಕ್ಕೊಳ್ಳುವನು.
ಆದರೆ ಅದು ಸೆರೆಯಾಗಿ ದೇಶಾಂತರಕ್ಕೆ ಹೋಯಿತು; ಅದರ ಕೂಸುಗಳು ಸಹ ಎಲ್ಲಾ ಬೀದಿಗಳ ತುದಿಗಳಲ್ಲಿ ಜಜ್ಜ ಲ್ಪಟ್ಟವು; ಅದರ ಘನವುಳ್ಳವರಿಗೋಸ್ಕರ ಚೀಟು ಹಾಕಿದರು; ಅದರ ಮಹನೀಯರೆಲ್ಲರೂ ಸಂಕೋಲೆ ಗಳಿಂದ ಕಟ್ಟಲ್ಪಟ್ಟರು.
ನೀನು ಐಶ್ವರ್ಯವಂತ ನಾಗುವ ಹಾಗೆ ಬೆಂಕಿಯಲ್ಲಿ ಶೋಧಿಸಿದ ಚಿನ್ನವನ್ನೂ ಲಜ್ಜಾಸ್ಪದವಾದ ನಿನ್ನ ಬೆತ್ತಲೆತನ ಕಾಣಿಸದಂತೆ ಹೊದ್ದು ಕೊಳ್ಳುವದಕ್ಕಾಗಿ ಬಿಳೀ ವಸ್ತ್ರವನ್ನೂ ಕಣ್ಣು ಕಾಣುವಂತೆ ನಿನ್ನ ಕಣ್ಣುಗಳಿಗೆ ಹಚ್ಚುವದಕ್ಕಾಗಿ ಅಂಜನವನ್ನೂ ನನ್ನಿಂದ ಕೊಂಡುಕೊಳ್ಳಬೇಕೆಂದು ನಿನಗೆ ಬುದ್ಧಿ ಹೇಳುತ್ತೇ