ಕೊಯ್ಯುವವನು ಪೈರನ್ನು ಕೂಡಿಸಿ ತೆನೆಗಳನ್ನು ತನ್ನ ಕೈಯಿಂದ ಕೊಯ್ಯುವಂತೆಯೂ ರೆಫಾಯಾಮಿನ ತಗ್ಗಿನಲ್ಲಿ ತೆನೆಗಳನ್ನು ಕೂಡಿಸುವ ಹಾಗೆಯೂ ಇರುವದು.
Cross references
ಅಲ್ಲಿಂದ ಯೆಬೂಸಿ ಯರು ವಾಸವಾಗಿರುವ ಯೆರೂಸಲೇಮಿಗೆ ದಕ್ಷಿಣ ಪಾರ್ಶ್ವವಾಗಿ ಹಿನ್ನೋಮನ ತಗ್ಗನ್ನು ದಾಟಿ ಉತ್ತರಕ್ಕಿರುವ ಯೆಬೂಸಿಯರ ತಗ್ಗಿನ ಕಡೆಯಲ್ಲಿ ಪಶ್ಚಿಮಕ್ಕಾಗಿ ಹಿನ್ನೋಮ್ ತಗ್ಗಿನ ಮುಂದಿರುವ ಬೆಟ್ಟದ ತುದಿ ವರೆಗೂ
ಅಲ್ಲಿಂದ ಹಳ್ಳದ ತಗ್ಗಿನ ಉತ್ತರದಲ್ಲಿರುವ ಹಿನ್ನೋಮನ ಕುಮಾರನ ಹಳ್ಳದ ತಗ್ಗಿಗೆ ಎದುರಾದ ಬೆಟ್ಟದ ಕಡೇ ಭಾಗಕ್ಕೆ ಇಳಿದು ದಕ್ಷಿಣದಲ್ಲಿ ಯೆಬೂಸಿಯರ ಮೇರೆ ಯಾದ ಹಿನ್ನೋಮಿನ ಹಳ್ಳದ ತಗ್ಗಿಗೂ ಅಲ್ಲಿಂದ ಏನ್‌ರೋಗೆಲಿಗೂ ಏರಿ
ಆದರೆ ಫಿಲಿಷ್ಟಿಯರು ಬಂದು ರೆಫಾಯಾಮ್ ತಗ್ಗಿನಲ್ಲಿ ಇಳುಕೊಂಡರು.
ಫಿಲಿಷ್ಟಿಯರು ತಿರಿಗಿ ಬಂದು ರೆಫಾಯಾಮ್ ತಗ್ಗಿನಲ್ಲಿ ವಿಸ್ತಾರವಾಗಿ ಹರಡಿಕೊಂಡರು.
ಸಸಿಯನ್ನು ಬೆಳೆಸಲು ಬೇಲಿ ಹಾಕಿದ ದಿನದಲ್ಲಿ ಹೊತ್ತಾರೆ ನೀನು ಬಿತ್ತಿದ್ದನ್ನು ಮೊಳೆ ಯುವಂತೆ ಮಾಡುವಿ. ಆದರೆ ಬೆಳೆಯನ್ನು ಕುಪ್ಪೆಯಾಗಿ ಕೂಡಿಸುವ ದಿನವು ವ್ಯಾಧಿಯ ಮತ್ತು ವಿಪರೀತ ವ್ಯಥೆಯ ದಿನವೇ.
ಇಗೋ, ಯೆಹೂದದ ಪಟ್ಟಣಗಳನ್ನು ಹಾಳು ಮಾಡುವದಕ್ಕೂ ಘಟಸರ್ಪದ ಗುಹೆಯನ್ನಾಗಿ ಮಾಡು ವದಕ್ಕೂ ಸುದ್ದಿಯ ಶಬ್ದವೂ ಉತ್ತರ ದೇಶದಿಂದ ಮಹಾ ಗಲಭೆಯೂ ಬರುತ್ತದೆ.
ಆಗ ಅವನು ಬದುಕಿದ ದಿನಗಳೆಲ್ಲಾ ಯಾವಾಗಲೂ ಅವನ ಮುಂದೆ ಊಟಮಾಡುತ್ತಿದ್ದನು.ಅವನ ಆಹಾರದ ವಿಷಯ ವೇನಂದರೆ--ಅವನು ಬದುಕಿದ ದಿನಗಳೆಲ್ಲಾ ಅವನು ಸಾಯುವ ದಿನದವರೆಗೆ ದಿನದಿನಕ್ಕೆ ತಕ್ಕ ಆಹಾರವು ಯಾವಾಗಲೂ ಬಾಬೆಲಿನ ಅರಸನ ಕಡೆಯಿಂದ ಕೊಡಲ್ಪಡುತ್ತಿತ್ತು.
ಹಾಗೂ ಓ ಯೆಹೂದವೇ, ನಾನು ನನ್ನ ಜನರನ್ನು ಅವರ ಸೆರೆಯಿಂದ ಬರಮಾಡಿದಾಗ ಆತನು ಸುಗ್ಗಿಯನ್ನು ನಿನಗೆ ನೇಮಿಸಿದ್ದಾನೆ.
ಕುಡುಗೋಲನ್ನು ಹಾಕಿರಿ, ಬೆಳೆ ಪಕ್ವವಾಯಿತು; ಬಂದು ಇಳಿಯಿರಿ; ದ್ರಾಕ್ಷೆಯ ಅಲೆ ತುಂಬಿ ಅದೆ; ತೊಟ್ಟಿಗಳು ತುಳುಕುತ್ತವೆ; ಅವರ ಕೆಟ್ಟತನವು ಬಹಳವಾಗಿದೆ.
ಸುಗ್ಗೀಕಾಲದ ವರೆಗೆ ಎರಡೂ ಜೊತೆಯಲ್ಲಿ ಬೆಳೆಯಲಿ; ಸುಗ್ಗೀಕಾಲದಲ್ಲಿ ನಾನು ಕೊಯ್ಯುವವರಿಗೆ--ಮೊದಲು ಹಣಜಿಯನ್ನು ಕೂಡಿಸಿ ಅದನ್ನು ಸುಡುವದಕ್ಕೆ ಹೊರೆ ಕಟ್ಟಿರಿ; ಆದರೆ ಗೋದಿಯನ್ನು ನನ್ನ ಕಣಜದಲ್ಲಿ ಕೂಡಿಸಿರಿ ಎಂದು ಹೇಳುವೆನು ಅಂದನು.
ಅದನ್ನು ಬಿತ್ತಿದ ವೈರಿಯು ಸೈತಾನನೇ; ಸುಗ್ಗೀ ಕಾಲವು ಲೋಕದ ಅಂತ್ಯವಾಗಿದೆ; ಮತ್ತು ಕೊಯ್ಯುವವರು ದೂತರೇ.
ಆಗ ಮತ್ತೊಬ್ಬ ದೂತನು ಆಲಯದೊಳಗಿಂದ ಬಂದು ಮೇಘದ ಮೇಲೆ ಕೂತಿದ್ದಾತನಿಗೆ--ನಿನಗೆ ಕೊಯ್ಯುವ ಕಾಲ ಬಂದಿರುವದರಿಂದ ನಿನ್ನ ಕುಡುಗೋಲನ್ನು ಹಾಕಿ ಕೊಯ್ಯಿ; ಯಾಕಂದರೆ ಭೂಮಿಯ ಪೈರು ಮಾಗಿದೆ ಎಂದು ಮಹಾಶಬ್ದದಿಂದ ಕೂಗಿದನು.