ಹೌದು, ತುರಾಯಿ ಮರಗಳೂ ಲೆಬನೋನಿನ ದೇವದಾರು ಮರಗಳೂ ನೀನು ಬಿದ್ದಂದಿನಿಂದ ಕಡಿಯುವವನು ಯಾವನೂ ತಮ್ಮ ಮೇಲೆ ಬರಲಿಲ್ಲವೆಂದು ನಿನ್ನ ವಿಷಯವಾಗಿ ಉಲ್ಲಾಸಗೊಳ್ಳುತ್ತವೆ.
Cross references
ನೀವು ಆನಂದದೊಡನೆ ಹೋಗುವಿರಿ ಸಮಾಧಾನದಿಂದ ನಡಿಸಲ್ಪಡುವಿರಿ; ಪರ್ವತಗಳು ಮತ್ತು ಗುಡ್ಡಗಳು ನಿಮ್ಮ ಮುಂದೆ ಹರ್ಷಧ್ವನಿಗೈಯುವವು. ಹೊಲದ ಮರಗಳೆಲ್ಲಾ ಚಪ್ಪಾಳೆ ಹೊಡೆಯುವವು.ಮುಳ್ಳಿಗೆ ಬದಲಾಗಿ ಫರ್ (ತುರಾಯಿ) ಮರವು ಮತ್ತು ದತ್ತೂರಿಗೆ ಬದಲಾಗಿ ಸುವಾಸನೆ ಬೀರುವ ಮರವು ಹುಟ್ಟುವವು; ಅದು ಕರ್ತನ ಹೆಸರಿಗಾಗಿ ಮತ್ತು ಶಾಶ್ವತವಾದ ಗುರುತಾಗಿ ಎಂದಿಗೂ ಅಳಿಯದಿರುವದು.
ನಾನು ಅದನ್ನು ಕುಣಿಗೆ ಇಳಿಯುವವರ ಜೊತೆಗೆ ಸೇರಿಸಬೇಕೆಂದು ಪಾತಾಳಕ್ಕೆ ತಳ್ಳಿಬಿಟ್ಟಾಗ ಅದು ಬಿದ್ದ ಶಬ್ದಕ್ಕೆ ಸಕಲ ಜನಾಂಗಗಳು ನಡುಗಿದವು; ಅಧೋ ಲೋಕಕ್ಕೆ ಪಾಲಾದ ಏದೆನಿನ ಎಲ್ಲಾ ಮರಗಳು, ಲೆಬನೋನಿನ ಉತ್ತಮೋತ್ತಮವಾದ ವೃಕ್ಷಗಳು, ನೀರು ಕುಡಿಯುವವುಗಳೆಲ್ಲಾ ಕೆಳಗಿನ ಸೀಮೆಯಲ್ಲಿ ಸಂತೈಸಿ ಕೊಂಡವು.
ತುರಾಯಿ ಗಿಡವೇ, ಗೋಳಿಡು; ದೇವದಾರು ಬಿದ್ದುಹೋಯಿತು, ಬಲವಾದವುಗಳು ಹಾಳಾದವು; ಬಾಷಾನಿನ ಓಕ್ ಮರಗಳೇ, ಗೋಳಾ ಡಿರಿ; ದ್ರಾಕ್ಷೆಯ ಅಡವಿಯು ಇಳಿದು ಬಂದಿದೆ.