ಎಫ್ರಾ ಯಾಮು ಪಾಪಕ್ಕಾಗಿ ಅನೇಕ ಬಲಿಪೀಠಗಳನ್ನು ಮಾಡಿ ದ್ದರಿಂದ, ಬಲಿಪೀಠಗಳು ಅವನ ಪಾಪಕ್ಕಾಗಿ ಇರುವವು.
Cross references
ಅಲ್ಲಿ ನೀವು ಮನುಷ್ಯರ ಕೈಕೆಲಸವಾದ ಅಂದರೆ ನೋಡದೆಯೂ ಕೇಳದೆಯೂ ಉಣ್ಣದೆಯೂ ಮೂಸಿ ನೋಡದೆಯೂ ಇರುವಂಥ ಮರ ಕಲ್ಲುಗಳಾದ ದೇವರುಗಳನ್ನು ಸೇವಿಸುವಿರಿ.
ಯೆರೂಸಲೇಮಿನಲ್ಲಿಯೂ ಸಮಾರ್ಯ ದಲ್ಲಿಯೂ ಹೆಚ್ಚಾಗಿದ್ದ ಅವರ ವಿಗ್ರಹಗಳು ಹಾಗೂ ಕೆತ್ತಿದ ವಿಗ್ರಹಗಳ ರಾಜ್ಯಗಳು ನನ್ನ ಕೈಗೆ ಸಿಕ್ಕಿದಂತೆ
ಇಸ್ರಾಯೇಲಿನ ನಿರೀಕ್ಷೆಯಾದ ಓ ಕರ್ತನೇ, ನಿನ್ನನ್ನು ತೊರೆದು ಬಿಟ್ಟವರೆಲ್ಲರು ನಾಚಿಕೆಗೆ ಒಳಗಾಗುವರು, ಜೀವವುಳ್ಳ ನೀರಿನ ಬುಗ್ಗೆಯಾದ ಕರ್ತನಿಂದ ತೊಲಗಿ ಹೋದವರು ದೂಳಿನಲ್ಲಿ ಬರೆಯಲ್ಪಡುವರು.
ಕರ್ತನಿಂದ ಯೆರೆವಿಾಯನಿಗೆ ಉಂಟಾದ ವಾಕ್ಯವೇನಂದರೆ--
ಅವರು ತಮ್ಮ ದೇವರ ಬಳಿಗೆ ತಿರುಗಿಕೊಳ್ಳುವ ಹಾಗೆ ತಮ್ಮ ಕ್ರಿಯೆಗಳನ್ನು ಸರಿ ಮಾಡುವದಿಲ್ಲ; ಯಾಕಂದರೆ ವ್ಯಭಿಚಾರಗಳ ಆತ್ಮವು ಅವರ ಮಧ್ಯದಲ್ಲಿ ಉಂಟು; ಅವರು ಕರ್ತನನ್ನು ತಿಳಿದುಕೊಳ್ಳಲಿಲ್ಲ.
ಇಸ್ರಾಯೇಲು ಬರಿದಾದ ದ್ರಾಕ್ಷೇಬಳ್ಳಿಯಾಗಿದೆ, ಅವನು ತನಗಾಗಿ ಫಲಫಲಿ ಸುತ್ತಾನೆ; ತನ್ನ ಬಹಳ ಫಲದ ಪ್ರಕಾರವಾಗಿ ಅವನು ಬಲಿಪೀಠಗಳನ್ನೂ ಹೆಚ್ಚಿಸಿದ್ದಾನೆ. ತನ್ನ ದೇಶದ ಒಳ್ಳೆಯ ತನದ ಪ್ರಕಾರ ಅಂದವಾದ ವಿಗ್ರಹಗಳನ್ನು ಮಾಡಿ ದ್ದಾನೆ.
ಇಸ್ರಾಯೇಲಿನ ಪಾಪವಾದ ಅವೇ ನಿನ ಉನ್ನತವಾದ ಸ್ಥಳಗಳು ಹಾಳಾಗಿಹೋಗುವವು. ಮುಳ್ಳುಗಿಡಗಳೂ ಕಳೆಗಳೂ ಬಲಿಪೀಠಗಳ ಮೇಲೆ ಬೆಳೆಯುವವು; ಅವರು ಬೆಟ್ಟಗಳಿಗೆ--ನಮ್ಮನ್ನು ಮುಚ್ಚಿರಿ, ಗುಡ್ಡಗಳೇ ನಮ್ಮ ಮೇಲೆ ಬೀಳಿರಿ ಅನ್ನುವರು.
ಗಿಲ್ಯಾದಿನಲ್ಲಿ ದುಷ್ಟತನ ಇದೆಯೋ? ನಿಶ್ಚಯವಾಗಿ ಅವೆಲ್ಲಾ ವ್ಯರ್ಥವೇ; ಅವರು ಗಿಲ್ಗಾಲಿನಲ್ಲಿ ಹೋರಿಗಳನ್ನು ಅರ್ಪಿಸುತ್ತಾರೆ, ಹೌದು, ಅವರ ಬಲಿಪೀಠಗಳು ಹೊಲದ ಸಾಲುಗಳಲ್ಲಿರುವ ಕಲ್ಲುಕುಪ್ಪೆಯ ಹಾಗಿದೆ ಎಂದು ಹೇಳಿದನು.