Home Bibles ಹೊಶೇಯ 10:15 · ಕನ್ನಡ ಬೈಬಲ್
ಹೊಶೇಯ 10:15 · ಕನ್ನಡ ಬೈಬಲ್

ಹಾಗೆಯೇ ನಿಮ್ಮ ಬಹಳ ದುಷ್ಟತ್ವದ ನಿಮಿತ್ತ ಬೇತೇಲು ನಿಮಗೆ ಹೀಗೆ ಮಾಡುವದು. ಬೆಳಗಿನ ಜಾವದಲ್ಲಿ ಇಸ್ರಾಯೇಲಿನ ಅರಸನು ಸಂಪೂರ್ಣವಾಗಿ ಕಡಿಯಲ್ಪ ಡುವನು (ಹಾಳಾಗುವನು).

Cross references

ಯೆಶಾಯ 16:14

ಆದರೆ ಕರ್ತನು ಮಾತನಾಡಿ--ಮೂರು ವರುಷ ಗಳಲ್ಲಿ ಕೂಲಿಯಾಳಿನ ವರುಷಗಳಂತೆ ಮೋವಾಬಿನ ಮಹಿಮೆಯು ಆ ಎಲ್ಲಾ ದೊಡ್ಡ ಸಮೂಹದೊಂದಿಗೆ ತಿರಸ್ಕರಿಸಲ್ಪಡುವ ಹಾಗೆ ಉಳಿದವರು ಚಿಕ್ಕ ಗುಂಪಾಗಿ ಬಲಹೀನರಾಗುವರು ಎಂದು ಹೇಳಿದ್ದಾನೆ.

ಹೊಶೇಯ 10:3

ಅವರು--ನಮಗೆ ಅರಸನಿಲ್ಲ, ನಾವು ಕರ್ತನಿಗೆ ಭಯಪಡಲಿಲ್ಲ; ಹಾಗಾದರೆ ಅರಸನು ನಮಗೆ ಏನು ಮಾಡುವನು ಎಂದು ಅಂದುಕೊಳ್ಳುವರು.

ಹೊಶೇಯ 10:5

ಬೇತಾವೆನಿನ ಕರುಗಳ ನಿಮಿತ್ತ ಸಮಾರ್ಯದ ನಿವಾಸಿಗಳು ಭಯಪಡುವರು; ಅದರ ಮಹಿಮೆಯು ಅವರಿಂದ ಕಳೆದುಹೋದ ಕಾರಣ ಅಂದು ಅದರ ವಿಷಯದಲ್ಲಿ ಸಂತೋಷಪಟ್ಟ ಜನರೂ ಪೂಜಾರಿಗಳೂ ಗೋಳಾಡುವರು.

ಹೊಶೇಯ 10:7

ಸಮಾರ್ಯವಾದರೋ ಅದರ ಅರಸನು ನೀರಿನ ಮೇಲೆ ನೊರೆಯ ಹಾಗೆ ಅಳಿದು ಹೋಗುವನು;

ಆಮೋಸ 7:9

ಇಸಾಕನ ಉನ್ನತ ಸ್ಥಳಗಳು ನಾಶವಾಗುವವು; ಇಸ್ರಾಯೇಲ್ಯನ ಪರಿಶುದ್ಧ ಸ್ಥಳಗಳು ಹಾಳಾಗುವವು; ನಾನು ಕತ್ತಿಯೊಂದಿಗೆ ಯಾರೊ ಬ್ಬಾಮನ ಮನೆತನಕ್ಕೆ ವಿರುದ್ಧವಾಗಿ ಏಳುವೆನು ಅಂದನು.

ರೋಮಾಪುರದವರಿಗೆ 7:13

ಹಾಗಾದರೆ ಹಿತವಾದದ್ದು ನನಗೆ ಮರಣಕ್ಕೆ ಕಾರಣವಾಯಿತೋ? ಹಾಗೆ ಎಂದಿಗೂ ಅಲ್ಲ; ಆದರೆ ಪಾಪವು ಹಿತವಾದದ್ದರ ಮೂಲಕ ನನ್ನಲ್ಲಿ ಮರಣವನ್ನು ಉಂಟುಮಾಡಿದ್ದರಿಂದ ಅದು ಪಾಪವೇ ಎಂದು ಕಾಣಿಸಿಕೊಂಡಿತು. ಹೀಗೆ ಆಜ್ಞೆಯ ಮೂಲಕ ಪಾಪವು ಅತ್ಯಧಿಕವಾದ ಪಾಪವಾಗಿ ತೋರಿಬಂತು.

Interlinear

Choose Theme