Home Bibles ಹೆಬ್ರಿಯರಿಗೆ 9:21 · ಕನ್ನಡ ಬೈಬಲ್
ಹೆಬ್ರಿಯರಿಗೆ 9:21 · ಕನ್ನಡ ಬೈಬಲ್

ಇದಲ್ಲದೆ ಗುಡಾರದ ಮೇಲೆಯೂ ಸೇವೆಗೆ ಬೇಕಾಗಿರುವ ಎಲ್ಲಾ ಉಪ ಕರಣಗಳ ಮೇಲೆಯೂ ರಕ್ತವನ್ನು ಪ್ರೋಕ್ಷಿಸಿದನು.

Cross references

ನಿರ್ಗಮಕಾಂಡ 29:12

ನೀನು ಹೋರಿಯ ರಕ್ತವನ್ನು ತೆಗೆದುಕೊಂಡು ನಿನ್ನ ಬೆರಳಿನಿಂದ ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ ರಕ್ತವನ್ನೆಲ್ಲಾ ಯಜ್ಞವೇದಿಯ ಅಡಿಯಲ್ಲಿ ಸುರಿಯಬೇಕು.

ನಿರ್ಗಮಕಾಂಡ 29:20

ತರುವಾಯ ನೀನು ಅದನ್ನು ವಧಿಸಿ ಅದರ ರಕ್ತವನ್ನು ಆರೋನನ ಮತ್ತು ಅವನ ಕುಮಾರರ ಬಲ ಕಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆರಳಿಗೂ ಹಚ್ಚಿ ಮಿಕ್ಕ ರಕ್ತವನ್ನು ಯಜ್ಞವೇದಿಯ ಸುತ್ತಲೂ ಚಿಮುಕಿಸಬೇಕು.

ನಿರ್ಗಮಕಾಂಡ 29:36

ಪಾಪದ ಯಜ್ಞವಾದ ಹೋರಿಯನ್ನು ಪ್ರತಿದಿನ ಪ್ರಾಯಶ್ಚಿತ್ತಕ್ಕಾಗಿ ತಂದು ಯಜ್ಞವೇದಿಗಾಗಿ ಪ್ರಾಯ ಶ್ಚಿತ್ತ ಮಾಡಿದ ಮೇಲೆ ಅದರ ದೋಷವನ್ನು ಪರಿ ಹರಿಸಿ ಅದನ್ನು ಪವಿತ್ರಮಾಡುವದಕ್ಕೆ ಅದನ್ನು ಅಭಿಷೇಕಿಸಬೇಕು.

ಲೇವ್ಯಕಾಂಡ 8:15

ಆಗ ಅವನು ಅದನ್ನು ವಧಿಸಿ ದನು; ಮೋಶೆಯು ಅದರ ರಕ್ತವನ್ನು ತೆಗೆದುಕೊಂಡು ಯಜ್ಞವೇದಿಯ ಮೇಲಿರುವ ಕೊಂಬುಗಳಿಗೆ ಸುತ್ತಲೂ ತನ್ನ ಬೆರಳಿನಿಂದ ಹಚ್ಚಿ ಯಜ್ಞವೇದಿಯನ್ನು ಶುದ್ಧೀಕರಿಸಿ ಉಳಿದ ರಕ್ತವನ್ನು ಯಜ್ಞವೇದಿಯ ಅಡಿಯಲ್ಲಿ ಹೊಯ್ದನು. ಅದರ ಮೇಲೆ ಸಂಧಾನಮಾಡುವದಕ್ಕಾಗಿ ಅದನ್ನು ಪವಿತ್ರಮಾಡಿದನು.

ಲೇವ್ಯಕಾಂಡ 8:19

ಮೋಶೆಯು ಅದನ್ನು ವಧಿಸಿ ರಕ್ತವನ್ನು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಿ

ಲೇವ್ಯಕಾಂಡ 9:8

ಆದದರಿಂದ ಆರೋನನು ಯಜ್ಞವೇದಿಯ ಕಡೆಗೆ ಹೋಗಿ ತನಗಾಗಿ ಪಾಪದ ಬಲಿಯ ಕರುವನ್ನು ವಧಿಸಿದನು.

ಲೇವ್ಯಕಾಂಡ 9:18

ಅವನು ಜನರಿಗಾಗಿ ಹೋರಿಯನ್ನೂ ಟಗರನ್ನೂ ಸಮಾಧಾನ ಬಲಿಗಳ ಯಜ್ಞಕ್ಕಾಗಿ ವಧಿಸಿದನು; ಆರೋನನ ಕುಮಾರರು ರಕ್ತವನ್ನು ಅವನ ಬಳಿಗೆ ತರಲು ಅವನು ಅದನ್ನು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಿದನು.

ಲೇವ್ಯಕಾಂಡ 16:14

ಆ ಹೋರಿಯ ರಕ್ತದಿಂದ ತೆಗೆದು ಕೊಂಡು ಕೃಪಾಸನದ ಮೇಲೆ ಪೂರ್ವಕ್ಕೆ ತನ್ನ ಬೆರಳಿನಿಂದ ಚಿಮುಕಿಸಬೇಕು; ಕೃಪಾಸನದ ಮುಂದೆ ಆ ರಕ್ತವನ್ನು ತನ್ನ ಬೆರಳಿನಿಂದ ಏಳು ಸಾರಿ ಚಿಮುಕಿಸಬೆಕು.

2 ದಿನವೃತ್ತಾಂತ 29:19

ಇದಲ್ಲದೆ ಅರಸನಾದ ಆಹಾಜನು ಆಳಿದಾಗ ತನ್ನ ಅಕೃತ್ಯದಿಂದ ಬಿಸಾಡಿದ ಎಲ್ಲಾ ಸಾಮಾನುಗಳನ್ನು ಸಿದ್ಧ ಮಾಡಿ ಪರಿಶುದ್ಧಮಾಡಿದೆವು; ಇಗೋ, ಅವು ಕರ್ತನ ಬಲಿಪೀಠದ ಮುಂದಿರುತ್ತವೆ ಎಂದು ಹೇಳಿದರು.

ಯೆಹೆಜ್ಕೇಲ 43:18

ಅವನು ನನಗೆ ಹೇಳಿದ್ದೇನಂದರೆ--ಮನುಷ್ಯ ಪುತ್ರನೇ, ದೇವರಾದ ಕರ್ತನು ಹೀಗೆ ಹೇಳುತ್ತಾನೆ; ಯಜ್ಞವೇದಿಯನ್ನು ಮಾಡುವ ದಿನದಲ್ಲಿ ಅದರ ಮೇಲೆ ದಹನಬಲಿಗಳನ್ನು ಅರ್ಪಿಸಿ ರಕ್ತವನ್ನು ಚಿಮುಕಿಸಬೇಕು; ಇವು ಅಲ್ಲಿನ ನಿಯಮಗಳಾಗಿವೆ.

Interlinear

Choose Theme