ಇವು ಯಾವಾತನ ವಿಷಯ ದಲ್ಲಿ ಹೇಳಲ್ಪಟ್ಟಿವೆಯೋ ಆತನು ಬೇರೊಂದು ಗೋತ್ರಕ್ಕೆ ಸಂಬಂಧಪಟ್ಟವನು; ಆ ಗೋತ್ರದವರಲ್ಲಿ ಒಬ್ಬನೂ ಯಜ್ಞವೇದಿಯ ಬಳಿಯಲ್ಲಿ ಸೇವೆಮಾಡಿದ್ದಿಲ್ಲ.
Cross references
ಆರೋನನ ಸಂತಾನವಲ್ಲದ ಪರಕೀಯನು ಕರ್ತನ ಸಮ್ಮುಖದಲ್ಲಿ ಧೂಪವನ್ನು ಅರ್ಪಿಸುವದಕ್ಕೆ ಸವಿಾಪಿಸದ ಹಾಗೆಯೂ ಕೋರಹನೂ ಅವನ ಸಮೂಹವೂ ಇದ್ದ ಪ್ರಕಾರ ಇರದ ಹಾಗೆಯೂ ಕರ್ತನು ಮೋಶೆಯಿಂದ ಹೇಳಿಸಿದ ಪ್ರಕಾರ ಇಸ್ರಾಯೇಲ್ ಮಕ್ಕಳಿಗೆ ಇದು ಜ್ಞಾಪಕ ವಾಗಿರುವದು ಅಂದನು.
ಆಗ ಏನಾಗುವ ದಂದರೆ, ನಾನು ಯಾವನನ್ನು ಆದುಕೊಳ್ಳುತ್ತೇನೋ ಆ ಮನುಷ್ಯನ ಕೋಲು ಚಿಗುರುವದು. ಹೀಗೆ ಇಸ್ರಾ ಯೇಲ್ ಮಕ್ಕಳು ನಿಮಗೆ ವಿರೋಧವಾಗಿ ಗುಣುಗುಟ್ಟು ವದನ್ನು ನಾನು ನಿಲ್ಲಿಸಿಬಿಡುವೆನು ಅಂದನು.
ಆದರೆ ಅವನು ಬಲ ಹೊಂದಿದ ಮೇಲೆ ಅವನ ಹೃದಯವು ನಾಶನಕ್ಕೆ ಎತ್ತಲ್ಪಟ್ಟಿತು. ಏನಂದರೆ, ಅವನು ಧೂಪಪೀಠದ ಮೇಲೆ ಧೂಪ ಸುಡುವದಕ್ಕೆ ಕರ್ತನ ಆಲಯದಲ್ಲಿ ಪ್ರವೇಶಿಸಿ ತನ್ನ ದೇವರಾದ ಕರ್ತ ನಿಗೆ ವಿರೋಧವಾಗಿ ಅಪರಾಧ ಮಾಡಿದನು.
ಲೇವಿಯ ಯಾಜಕತ್ವದಿಂದ ಸಂಪೂರ್ಣ ಸಿದ್ಧಿ ಉಂಟಾಗಿದ್ದರೆ ಆರೋನನ ತರಹದವನಾಗಿರದೆ ಮೆಲ್ಕಿ ಜೆದೇಕನ ತರಹದ ಬೇರೊಬ್ಬ ಯಾಜಕನು ಎದ್ದೇಳು ವದು ಅವಶ್ಯವೇನಿತ್ತು? (ಅದರಲ್ಲಿ ಜನರು ನ್ಯಾಯ ಪ್ರಮಾಣವನ್ನು ಹೊಂದಿದರು).
ನಮ್ಮ ಕರ್ತನು ಯೂದಾ ಗೋತ್ರದಲ್ಲಿ ಜನಿಸಿದಾತನೆಂಬದು ಸ್ಪಷ್ಟವಾಗಿದೆಯಷ್ಟೆ; ಈ ಗೋತ್ರದ ವಿಷಯದಲ್ಲಿ ಮೋಶೆಯು ಯಾಜಕರ ಸಂಬಂಧವಾಗಿ ಏನೂ ಹೇಳಲಿಲ್ಲ.