ಆದದರಿಂದ ಕೆಲವರು ಅದರಲ್ಲಿ ಪ್ರವೇಶಿ ಸಲೇಬೇಕೆಂಬದು ಇನ್ನೂ ಇರುವದರಿಂದ ಯಾರಿಗೆ ಮೊದಲು ಅದು ಸಾರಲ್ಪಟ್ಟಿತೋ ಅವರು ಅಪ ನಂಬಿಕೆಯ ನಿಮಿತ್ತ ಒಳಗೆ ಪ್ರವೇಶಿಸಲಿಲ್ಲ.
Cross references
ನಾನು ಅವರನ್ನು ವ್ಯಾಧಿಯಿಂದ ಹೊಡೆದು ನಿರ್ಮೂಲಮಾಡಿ ನಿನ್ನನ್ನು ಅವರಿಗಿಂತ ದೊಡ್ಡದಾದ ಬಲವುಳ್ಳ ಜನಾಂಗವನ್ನಾಗಿ ಮಾಡುವೆನು ಅಂದನು.
ಆದರೆ ಸುಲಿಗೆಯಾಗುವರೆಂದು ನೀವು ಹೇಳಿದ ನಿಮ್ಮ ಮಕ್ಕಳನ್ನು ಅಲ್ಲಿಗೆ ತರುವೆನು; ನೀವು ಅಲಕ್ಷ್ಯ ಮಾಡಿದ ದೇಶವನ್ನು ಅವರು ಅನುಭವಿಸುವರು.
ನಾನು ಆದುಕೊಂಡವರಿಗೆ ನಿಮ್ಮ ಹೆಸರನ್ನು ಶಾಪವಾಗಿ ಉಳಿ ಸುವಿರಿ; ಕರ್ತನಾದ ಯೆಹೋವನು ನಿಮ್ಮನ್ನು ಕೊಂದು ಹಾಕಿ, ತನ್ನ ಸೇವಕರಿಗೆ ಬೇರೆ ಹೆಸರನ್ನು ಇಡುವನು.
ಆದದರಿಂದ ನಾನು ನಿಮಗೆ ಹೇಳುವದೇನಂದರೆ--ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಾಂಗಕ್ಕೆ ಕೊಡಲ್ಪಡುವದು.
ಆದದರಿಂದ ನೀವು ಹೆದ್ದಾರಿಗಳಿಗೆ ಹೊರಟುಹೋಗಿ ಕಂಡವರನ್ನೆಲ್ಲಾ ಮದುವೆಗೆ ಕರೆಯಿರಿ ಅಂದನು.
ಹೀಗೆ ಆ ಸೇವಕನು ಬಂದು ತನ್ನ ಯಜಮಾನನಿಗೆ ಈ ವಿಷಯಗಳನ್ನು ತಿಳಿಸಿದನು. ಆಗ ಆ ಮನೇಯಜಮಾನನು ಕೋಪಗೊಂಡು ತನ್ನ ಸೇವಕನಿಗೆ--ನೀನು ಬೇಗನೆ ಪಟ್ಟಣದ ಬೀದಿಗಳಿಗೂ ಸಂದುಗಳಿಗೂ ಹೋಗಿ ಬಡವರನ್ನೂ ಊನವಾದ ವರನ್ನೂ ಕುಂಟರನ್ನೂ ಕುರುಡರನ್ನೂ ಇಲ್ಲಿ ಒಳಗೆ ಕರಕೆ
ಆಗ ಪೌಲನೂ ಬಾರ್ನಬನೂ ಧೈರ್ಯದಿಂದ ಮಾತನಾಡಿ--ದೇವರ ವಾಕ್ಯವನ್ನು ಮೊದಲು ನಿಮಗೇ ಹೇಳುವದು ಅವಶ್ಯವಾಗಿತ್ತು; ಆದರೆ ನೀವು ಅದನ್ನು ತಳ್ಳಿಬಿಟ್ಟು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ತೀರ್ಪು ಮಾಡಿಕೊಂಡದ್ದರಿಂದ ಇಗೋ, ನಾವು ಅನ್ಯಜನರ ಕಡೆಗೆ ಹೋಗುತ್ತೇವೆ.
ಆದಕಾರಣ ದೇವರ ರಕ್ಷಣೆಯು ಅನ್ಯಜನಾಂಗದವರಿಗೆ ಕಳುಹಿಸಲ್ಪಟ್ಟಿದೆ; ಅದನ್ನು ಅವರು ಕೇಳುವರು ಎಂಬದಾಗಿ ನಿಮಗೆ ತಿಳಿದಿರಲಿ ಅಂದನು.
ಆದರೆ ಸಹೋದರರೇ, ನಾನು ಹೇಳುವದೇ ನಂದರೆ--ಸಮಯವು ಸಂಕೋಚವಾದದ್ದರಿಂದ ಇನ್ನು ಮೇಲೆ ಹೆಂಡತಿಯುಳ್ಳವರು ಹೆಂಡತಿಯಿಲ್ಲದವ ರಂತೆಯೂ
ದೇವರು ಅನ್ಯಜನರನ್ನು ನಂಬಿಕೆಯ ಮೂಲಕ ವಾಗಿಯೇ ನೀತಿವಂತರೆಂದು ನಿರ್ಣಯಿಸುವನೆಂಬ ದಾಗಿ ಬರಹವು ಮೊದಲೇ ಕಂಡು ಅಬ್ರಹಾಮ ನಿಗೆ--ನಿನ್ನ ಮೂಲಕ ಎಲ್ಲಾ ಜನಾಂಗಗಳವರಿಗೆ ಆಶೀರ್ವಾದವುಂಟಾಗುವದೆಂಬ ಸುವಾರ್ತೆಯನ್ನು ಮುಂಚಿತವಾಗಿಯೇ ಸಾರಿತು ಎಂಬದೇ.
ತನ್ನ ವಿಶ್ರಾಂತಿಯಲ್ಲಿ ಅವರು ಸೇರುವದೇ ಇಲ್ಲವೆಂದು ಯಾರನ್ನು ಕುರಿತು ಆತನು ಪ್ರಮಾಣಮಾಡಿದನು? ನಂಬದವರ ವಿಷಯ ವಾಗಿ ಅಲ್ಲವೇ?ಅವರು ಸೇರಲಾರದೆ ಹೋದದ್ದು ಅಪನಂಬಿಕೆಯಿಂದಲೇ ಎಂದು ತಿಳಿದುಕೊಳ್ಳುತ್ತೇವೆ.
ಅವರಿಗೆ ಸುವಾರ್ತೆಯು ಸಾರೋಣವಾದಂತೆಯೇ ನಮಗೂ ಸಾರೋಣವಾಯಿತು; ಆದರೆ ಕೇಳಿದವರು ನಂಬಲಿಲ್ಲವಾದ ಕಾರಣ ಸಾರಿದ ಆ ವಾಕ್ಯದಿಂದ ಅವರಿಗೆ ಪ್ರಯೋಜನವಾಗಲಿಲ್ಲ.
ಆದದರಿಂದ ದೇವಜನರಿಗೆ ವಿಶ್ರಾಂತಿಯು ಇನ್ನೂ ಉಂಟು.