Home Bibles ಹೆಬ್ರಿಯರಿಗೆ 13:23 · ಕನ್ನಡ ಬೈಬಲ್
ಹೆಬ್ರಿಯರಿಗೆ 13:23 · ಕನ್ನಡ ಬೈಬಲ್

ನಮ್ಮ ಸಹೋದರನಾದ ತಿಮೊಥೆಯನಿಗೆ ಬಿಡುಗಡೆಯಾಯಿತೆಂಬದು ನಿಮಗೆ ತಿಳಿದಿರಲಿ; ಅವನು ಬೇಗ ಬಂದರೆ ನಾನು ಅವನೊಂದಿಗೆ ಬಂದು ನಿಮ್ಮನ್ನು ಕಾಣುವೆನು.

Cross references

ಅಪೋಸ್ತಲರ ಕೃತ್ಯಗಳು 16:1

ತರುವಾಯ ಅವನು ದೆರ್ಬೆ ಮತ್ತು ಲುಸ್ತ್ರಕ್ಕೆ ಬಂದನು; ಅಲ್ಲಿ ಇಗೋ, ನಂಬಿಕೊಂಡಿದ್ದ ಯೆಹೂದ್ಯ ಸ್ತ್ರೀಯ ಮಗನಾದ ತಿಮೊಥೆಯನೆಂಬ ಹೆಸರುಳ್ಳ ಒಬ್ಬ ಶಿಷ್ಯನಿದ್ದನು. ಅವನ ತಂದೆಯು ಗ್ರೀಕನು.

ರೋಮಾಪುರದವರಿಗೆ 15:25

ಆದರೆ ಈಗ ಪರಿಶುದ್ಧರಿಗೆ ಸೇವೆಮಾಡುವದಕ್ಕೋಸ್ಕರ ನಾನು ಯೆರೂಸಲೇಮಿಗೆ ಹೋಗುತ್ತೇನೆ.

ರೋಮಾಪುರದವರಿಗೆ 15:28

ನಾನು ಈ ಕೆಲಸವನ್ನು ತೀರಿಸಿಕೊಂಡು ಈ ಫಲವನ್ನು ಭದ್ರವಾಗಿ ಅಲ್ಲಿಯವರ ವಶಕ್ಕೆ ಕೊಟ್ಟಮೇಲೆ ನಿಮ್ಮ ಮಾರ್ಗವಾಗಿ ಸ್ಪೇನಿಗೆ ಬರುವೆನು.

1 ತೆಸಲೋನಿಕದವರಿಗೆ 3:2

ನಿಮ್ಮನ್ನು ದೃಢಪಡಿಸುವದಕ್ಕೂ ನಿಮ್ಮ ನಂಬಿಕೆಯ ವೃದ್ಧಿಗಾಗಿ ನಿಮ್ಮನ್ನು ಆದರಿಸುವದಕ್ಕೂ ನಮ್ಮ ಸಹೋದರನೂ ದೇವರ ಸೇವಕನೂ ಕ್ರಿಸ್ತನ ಸುವಾರ್ತೆಯಲ್ಲಿ ನಮ್ಮ ಜೊತೆ ಸೇವಕನೂ ಆಗಿರುವ ತಿಮೊಥೆಯನನ್ನು ಕಳುಹಿಸಿದೆವು.

1 ತಿಮೋಥೆಯ 6:12

ನಂಬಿಕೆಯ ಶ್ರೇಷ್ಠ ಹೋರಾಟವನ್ನು ಮಾಡು, ನಿತ್ಯಜೀವವನ್ನು ಹಿಡಿದುಕೋ; ಅದಕ್ಕಾಗಿಯೇ ನೀನು ಕರೆಯಲ್ಪಟ್ಟಿದ್ದೀ. ನೀನು ಅನೇಕ ಸಾಕ್ಷಿಗಳ ಮುಂದೆ ಒಳ್ಳೇ ಅರಿಕೆಯನ್ನು ಮಾಡಿದ್ದೀಯಲ್ಲಾ.

2 ತಿಮೋಥೆಯ 1:8

ಹೀಗಿರುವದರಿಂದ ನಮ್ಮ ಕರ್ತನ ಸಾಕ್ಷಿಯ ವಿಷಯದಲ್ಲಿಯೂ ಆತನ ಸೆರೆಯವನಾದ ನನ್ನ ವಿಷಯದಲ್ಲಿಯೂ ನೀನು ನಾಚಿಕೆಪಡದೆ ದೇವರ ಬಲಕ್ಕನು ಸಾರವಾಗಿ ಸುವಾರ್ತೆಯ ನಿಮಿತ್ತ ಉಂಟಾಗುವ ಶ್ರಮೆಗಳಲ್ಲಿ ಪಾಲುಗಾರನಾಗಿರು.

ಫಿಲೇಮೋನ 1:1

ಯೇಸು ಕ್ರಿಸ್ತನ ಸೆರೆಯವನಾಗಿರುವ ಪೌಲನೂ ನಮ್ಮ ಸಹೋದರನಾದ ತಿಮೊಥೆಯನೂ ನಮಗೆ ಅತಿ ಪ್ರಿಯನೂ ಜೊತೆಗೆಲಸದವನೂ ಆಗಿರುವ ಫಿಲೆ ಮೋನನಿಗೂ

ಫಿಲೇಮೋನ 1:22

ಇದಲ್ಲದೆ ನಿಮ್ಮ ಪ್ರಾರ್ಥನೆಗಳ ಮುಖಾಂತರ ನಾನು ನಿಮ್ಮ ಬಳಿಗೆ ಬರುವದಕ್ಕೆ ಅನುಗ್ರಹವಾಗುವ ದೆಂದು ನನಗೆ ನಿರೀಕ್ಷೆ ಉಂಟು; ಆದಕಾರಣ ನನ ಗೋಸ್ಕರ ಇಳುಕೊಳ್ಳುವ ಸ್ಥಳವನ್ನು ಸಿದ್ಧಮಾಡು.

ಪ್ರಕಟನೆ 7:14

ಅದಕ್ಕೆ ನಾನು ಅಯ್ಯಾ, ನೀನೇ ಬಲ್ಲೆ ಅಂದೆನು. ಅವನು ನನಗೆ--ಇವರು ಮಹಾಸಂಕಟದೊಳಗಿಂದ ಬಂದವರು; ಕುರಿಮರಿಯಾ ದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಬೆಳ್ಳಗೆ ಮಾಡಿದ್ದಾರೆ.

Interlinear

Choose Theme