Home Bibles ಹೆಬ್ರಿಯರಿಗೆ 10:20 · ಕನ್ನಡ ಬೈಬಲ್
ಹೆಬ್ರಿಯರಿಗೆ 10:20 · ಕನ್ನಡ ಬೈಬಲ್

ಹೇಗೆಂದರೆ, ಆತನು ನಮಗೋಸ್ಕರ ಪ್ರತಿಷ್ಠಿಸಿದ ಮತ್ತು ಹೊಸ ಜೀವವುಳ್ಳ ದಾರಿಯಲ್ಲಿ ಆತನ ಶರೀರವೆಂಬ ತೆರೆಯ ಮುಖಾಂತರವೇ ಇದಾಯಿತು.

Cross references

ನಿರ್ಗಮಕಾಂಡ 26:31

ನೀಲಿ ಧೂಮ್ರ ರಕ್ತವರ್ಣಗಳಿರುವ ನಯವಾದ ನಾರುಗಳಿಂದ ಹೊಸೆದ ತೆರೆಯನ್ನು ಮಾಡಬೇಕು. ಕೌಶಲ್ಯದಿಂದ ಮಾಡಿದ ಕೆರೂಬಿಗಳುಳ್ಳದ್ದನ್ನಾಗಿ ಅದನ್ನು ಮಾಡಬೇಕು.

ನಿರ್ಗಮಕಾಂಡ 36:35

ನೀಲಿ, ಧೂಮ್ರ, ರಕ್ತವರ್ಣ, ನಯವಾಗಿ ಹೊಸೆದ ನಾರುಗಳಿಂದ ತೆರೆಯನ್ನು ಮಾಡಿದನು. ಅದರ ಮೇಲೆ ಕುಶಲ ಕೆಲಸದಿಂದ ಕೆರೂಬಿಗಳನ್ನು ಮಾಡಿದನು.

ಲೇವ್ಯಕಾಂಡ 16:2

ಆಗ ಕರ್ತನು ಮೋಶೆಗೆ--ಅವನು ಸಾಯದಂತೆ ಮಂಜೂಷದ ಮೇಲಿರುವ ಕರುಣಾಸನದ ಮುಂದಿ ರುವ ಪರದೆಯ ಒಳಗೆ ಪರಿಶುದ್ಧವಾದ ಸ್ಥಳಕ್ಕೆ ಎಲ್ಲಾ ಸಮಯಗಳಲ್ಲಿ ಬಾರದಿರಲಿ; ಕರುಣಾಸನದ ಮೇಲೆ ಮೇಘದೊಳಗೆ ನಾನು ಪ್ರತ್ಯಕ್ಷನಾಗುವೆನು.

ಲೇವ್ಯಕಾಂಡ 16:15

ತರುವಾಯ ಅವನು ಜನರಿಗೋಸ್ಕರ ಪಾಪಬಲಿ ಯಾಗಿರುವ ಆಡನ್ನು ವಧಿಸಿ ಅದರ ರಕ್ತವನ್ನು ತೆರೆಯ ಒಳಗಡೆ ತಂದು ಹೋರಿಯ ರಕ್ತದಿಂದ ಮಾಡಿ ದಂತೆಯೇ ಕೃಪಾಸನದ ಮೇಲೆಯೂ ಮುಂದೆಯೂ ಚಿಮುಕಿಸಬೇಕು.

ಲೇವ್ಯಕಾಂಡ 21:23

ಆದರೆ ಅವನು ಕಳಂಕವುಳ್ಳವನಾದದರಿಂದ ತೆರೆಯ ಒಳಕ್ಕೆ ಹೋಗ ಬಾರದು ಇಲ್ಲವೆ ಯಜ್ಞವೇದಿಯ ಸವಿಾಪಕ್ಕೂ ಬರಬಾರದು. ಹೀಗೆ ಅವನು ನನ್ನ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಬಾರದು; ಅವರನ್ನು ಶುದ್ಧೀಕರಿಸುವ ಕರ್ತನು ನಾನೇ.ಮೋಶೆಯು ಅದನ್ನು ಆರೋನ ನಿಗೂ ಅವನ ಕುಮಾರರಿಗೂ ಇಸ್ರಾಯೇಲ್‌ ಎಲ್ಲಾ ಮಕ್ಕಳಿಗೂ ಹೇಳಿದನು.

ಮತ್ತಾಯ 27:51

ಆಗ ಇಗೋ, ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೆ ಹರಿದು ಎರಡು ಭಾಗವಾಯಿತು; ಭೂಮಿಯು ಕಂಪಿಸಿತು; ಮತ್ತು ಬಂಡೆ ಗಳು ಸೀಳಿದವು;

ಮಾರ್ಕ 15:38

ಆಗ ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೂ ಹರಿದು ಎರಡು ಭಾಗವಾಯಿತು.

ಲೂಕ 23:45

ಇದಲ್ಲದೆ ಸೂರ್ಯನು ಕತ್ತಲಾದನು; ದೇವಾಲಯದ ತೆರೆಯು ಮಧ್ಯದಲ್ಲಿ ಹರಿಯಿತು.

ಯೋಹಾನ 6:51

ಪರಲೋಕದಿಂದ ಇಳಿದುಬಂದ ಜೀವದ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಎಂದೆಂದಿಗೂ ಬದುಕುವನು; ನಾನು ಕೊಡುವ ರೊಟ್ಟಿಯು ನನ್ನ ಮಾಂಸವೇ; ಅದನ್ನು ನಾನು ಲೋಕದ ಜೀವಕ್ಕಾಗಿ ಕೊಡುವೆನು ಅಂದನು.

ಯೋಹಾನ 10:7

ಯೇಸು ತಿರಿಗಿ ಅವರಿಗೆ--ನಾನು ನಿಮಗೆ ನಿಜ ನಿಜವಾಗಿ ಹೇಳುತ್ತೇನೆ, ಕುರಿಗಳಿಗೆ ನಾನೇ ಬಾಗ ಲಾಗಿದ್ದೇನೆ.

ಯೋಹಾನ 10:9

ನಾನೇ ಆಬಾಗಲು; ನನ್ನ ಮೂಲಕವಾಗಿ ಯಾವನಾದರೂ ಪ್ರವೇಶಿಸಿದರೆ ಅವನು ರಕ್ಷಣೆ ಹೊಂದುವನು; ಇದ ಲ್ಲದೆ ಅವನು ಒಳಗೆ ಹೋಗುತ್ತಾನೆ, ಹೊರಗೆ ಬರು ತ್ತಾನೆ ಮತ್ತು ಮೇವನ್ನು ಕಂಡುಕೊಳ್ಳುತ್ತಾನೆ.

ಯೋಹಾನ 14:6

ಯೇಸು ಅವನಿಗೆ--ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ.

ಎಫೆಸದವರಿಗೆ 2:15

ಆತನು ಇದ್ದ ದ್ವೇಷವನ್ನು ಅಂದರೆ ಶಾಸನಗಳ ಆಜ್ಞೆಗಳುಳ್ಳ ನ್ಯಾಯಪ್ರಮಾಣವನ್ನು ತನ್ನ ಶರೀರದ ಮೂಲಕ ರದ್ದುಗೊಳಿಸಿ ಸಮಾಧಾನ ಮಾಡುವವನಾಗಿ ಉಭಯರನ್ನು ತನ್ನಲ್ಲಿ ಒಬ್ಬ ನೂತನ ಪುರಷನನ್ನಾಗಿ ಮಾಡಿದನು.

1 ತಿಮೋಥೆಯ 3:16

ದೇವಭಕ್ತಿಯ ಮರ್ಮವು ಮಹತ್ವವುಳ್ಳದ್ದೆಂಬದು ತರ್ಕವಿಲ್ಲದ್ದು, ಅದು ಯಾವದಂದರೆ--ದೇವರು ಶರೀರಧಾರಿಯಾಗಿ ಪ್ರತ್ಯಕ್ಷನಾದನು; ಆತ್ಮಸಂಬಂಧವಾಗಿ ನೀತಿವಂತನೆಂದು ನಿರ್ಣಯಿಸಲ್ಪಟ್ಟನು; ದೂತ ರಿಗೆ ಕಾಣಿಸಿಕೊಂಡನು; ಅನ್ಯಜನರಿಗೆ ಸಾರಲ್ಪಟ್ಟನು; ಲೋಕದಲ್ಲಿ ನಂಬಲ್ಪಟ್ಟನು; ಮಹಿಮೆಗೆ ಸೇರಿಸಲ

ಹೆಬ್ರಿಯರಿಗೆ 6:19

ಆ ನಿರೀಕ್ಷೆಯು ನಮ್ಮ ಪ್ರಾಣಕ್ಕೆ ಲಂಗರದ ಹಾಗಿದ್ದು ಖಂಡಿತವಾದದ್ದೂ ಸ್ಥಿರವಾದದ್ದೂ ಆಗಿದೆ. ಅದು ತೆರೆಯೊಳಗಿರುವಲ್ಲಿಗೆ ಪ್ರವೇಶಿಸುವಂಥದು.ಯೇಸು ಸದಾಕಾಲವೂ ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿ ಮಾಡಲ್ಪಟ್ಟು ನಮಗೋಸ್ಕರ ಮುಂದಾಗಿ ಅದರೊಳಗೆ ಪ್ರವೇಶಿಸಿದ್ದಾನೆ.

ಹೆಬ್ರಿಯರಿಗೆ 9:3

ಎರಡನೆಯ ತೆರೆಯ ಆಚೆಯಲ್ಲಿ ಅತಿಪವಿತ್ರ ಸ್ಥಳವೆನಿಸಿಕೊಳ್ಳುವ ಇನ್ನೊಂದು ಗುಡಾರವಿತ್ತು;

ಹೆಬ್ರಿಯರಿಗೆ 9:8

ಮೊದಲನೆಯ ಗುಡಾರವು ಇನ್ನೂ ಇರುವ ತನಕ ಅತಿ ಪರಿಶುದ್ಧ ಸ್ಥಳಕ್ಕೆ ಹೋಗುವ ಮಾರ್ಗವು ಇದುವರೆಗೂ ಪ್ರಕಟವಾಗಿಲ್ಲಿವೆಂಬದನ್ನು ಪವಿತ್ರಾತ್ಮನು ವ್ಯಕ್ತಪಡಿಸುತ್ತಾನೆ.

1 ಪೇತ್ರ 3:18

ಕ್ರಿಸ್ತನು ಸಹ ನೀತಿವಂತ ನಾಗಿದ್ದು ಅನೀತಿವಂತರಾದ ನಮ್ಮನ್ನು ದೇವರ ಬಳಿಗೆ ತರುವದಕ್ಕಾಗಿ ಪಾಪನಿವಾರಣೆಗೋಸ್ಕರ ಒಂದೇ ಸಾರಿ ಬಾಧೆಪಟ್ಟು ಶರೀರದಲ್ಲಿ ಕೊಲ್ಲಲ್ಪಟ್ಟನು, ಆತ್ಮನಿಂದ ಬದುಕುವವನಾದನು.

1 ಯೋಹಾನ 4:2

ಯೇಸು ಕ್ರಿಸ್ತನು ಶರೀರದಲ್ಲಿ ಬಂದನೆಂದು ಒಪ್ಪಿಕೊಳ್ಳುವ ಪ್ರತಿಯೊಂದು ಆತ್ಮವು ದೇವರಿಗೆ ಸಂಬಂಧಪಟ್ಟದ್ದಾಗಿದೆ; ಇದರಿಂದ ನೀವು ಈ ಆತ್ಮನು ದೇವರಾತ್ಮನೆಂದು ತಿಳಿದುಕೊಳ್ಳು ತ್ತೀರಿ.

2 ಯೋಹಾನ 1:7

ಶರೀರದಲ್ಲಿ ಬಂದಿರುವ ಯೇಸು ಕ್ರಿಸ್ತನ್ನು ಒಪ್ಪದೆ ಇರುವ ಮೋಸಗಾರರು ಅನೇಕ ಮಂದಿ ಹೊರಟು ಲೋಕದೊಳಗೆ ಹೋಗಿದ್ದಾರೆ. ಇಂಥವನೇ ಮೋಸಗಾರನೂ ಕ್ರಿಸ್ತ ವಿರೋಧಿಯೂ ಆಗಿದ್ದಾನೆ.

Interlinear

Choose Theme