ಶುದ್ಧವಾದ ಎಲ್ಲಾ ಪ್ರಾಣಿಗಳಲ್ಲಿ ಗಂಡು ಹೆಣ್ಣಾಗಿರುವ ಏಳೇಳೂ ಅಶುದ್ಧ ಪ್ರಾಣಿಗಳಲ್ಲಿ ಗಂಡು ಹೆಣ್ಣು ಎರಡೆರಡರಂತೆಯೂ ನಿನ್ನ ಬಳಿಗೆ ತೆಗೆದುಕೋ.
Cross references
ಇದಲ್ಲದೆ ಜೀವವುಳ್ಳ ಎಲ್ಲಾ ಶರೀರಗಳ ಎಲ್ಲಾ ವಿಧವಾದ ಎರಡೆರಡು ನಿನ್ನ ಸಂಗಡ ಜೀವದಲ್ಲಿ ಕಾಪಾಡುವಂತೆ ನೀನು ಅವುಗಳನ್ನು ನಾವೆಯೊಳಗೆ ತರಬೇಕು; ಅವು ಗಂಡು ಹೆಣ್ಣಾಗಿರಬೇಕು.
ಶುದ್ಧ ಪ್ರಾಣಿಗಳಲ್ಲಿಯೂ ಅಶುದ್ಧ ಪ್ರಾಣಿಗಳಲ್ಲಿಯೂ ಪಕ್ಷಿ ಗಳಲ್ಲಿಯೂ ಭೂಮಿಯ ಮೇಲೆ ಹರಿದಾಡುವವು ಗಳೆಲ್ಲವೂ
ನೋಹನು ಕರ್ತನಿಗೆ ಬಲಿಪೀಠವನ್ನು ಕಟ್ಟಿ ಶುದ್ಧವಾದ ಎಲ್ಲಾ ಪಶು ಪಕ್ಷಿಗಳಿಂದಲೂ (ಕೆಲವನ್ನು) ತೆಗೆದು ಬಲಿಪೀಠದ ಮೇಲೆ ದಹನಬಲಿಗಳನ್ನು ಅರ್ಪಿಸಿದನು.
ನೀವು ಶುದ್ಧವಾದದ್ದಕ್ಕೂ ಅಶುದ್ಧವಾದದ್ದಕ್ಕೂ ಪವಿತ್ರವಾದದ್ದಕ್ಕೂ ಅಪವಿತ್ರ ವಾದದ್ದಕ್ಕೂ ವ್ಯತ್ಯಾಸವನ್ನು ತೋರಿಸುವದಕ್ಕಾಗಿಯೂ
ಕರ್ತನು ಮೋಶೆ ಆರೋನರೊಂದಿಗೆ ಮಾತನಾಡಿ ಅವರಿಗೆ ಹೇಳಿದ್ದೇನಂದರೆ
ಅವು ನಿಮಗೆ ಅಶುದ್ಧ ವಾಗಿಯೇ ಇರುವವು; ನೀವು ಅವುಗಳ ಮಾಂಸವನ್ನು ತಿನ್ನಬಾರದು, ಅವುಗಳ ಶವಗಳು ನಿಮಗೆ ಅಶುದ್ಧ ವಾಗಿರಬೇಕು.
ಅಶುದ್ಧ ಶುದ್ಧಗಳ ನಡುವಿನ ವ್ಯತ್ಯಾಸವನ್ನೂ ಮತ್ತು ತಿನ್ನುವಂತ ಪಶು ತಿನ್ನಬಾರದ ಪಶುಗಳ ವ್ಯತ್ಯಾಸವನ್ನೂ ಹೀಗೆ ನೀವು ಮಾಡುವಿರಿ.
ನೀವು ನಿಮ್ಮ ದೇವರಾದ ಕರ್ತನ ಮಕ್ಕಳೇ. ನೀವು ಸತ್ತವರಿಗೋಸ್ಕರ ಗಾಯಮಾಡಿ ಕೊಳ್ಳಬೇಡಿರಿ. ನಿಮ್ಮ ಕಣ್ಣುಗಳ ನಡುವೆ ಬೋಳಿಸಿ ಕೊಳ್ಳಬೇಡಿರಿ.
ಅವರು ನನ್ನ ಜನರಿಗೆ ಪರಿಶುದ್ಧವಾದದ್ದಕ್ಕೂ ಅಪವಿತ್ರವಾದದ್ದಕ್ಕೂ ಹೆಚ್ಚು ಕಡಿಮೆಯನ್ನು ಬೋಧಿಸಿ, ಅವರಿಗೆ ಹೊಲೆ ಯಾದದ್ದನ್ನೂ ಶುದ್ಧವಾದದ್ದನ್ನೂ ತಿಳಿಸಬೇಕು.
ಆಕಾಶವು ತೆರೆದಿರುವದನ್ನೂ ಒಂದು ಪಾತ್ರೆ ಯಂತಿರುವ ನಾಲ್ಕು ಮೂಲೆಗಳನ್ನು ಕಟ್ಟಿದ್ದ ದೊಡ್ಡ ಜೋಳಿಗೆಯು ಭೂಮಿಯ ಮೇಲೆ ಅವನ ಬಳಿಗೆ ಇಳಿಯುವದನ್ನೂ ಕಂಡನು.