Home Bibles ☰ Books ಆದಿಕಾಂಡ 48:2 · ಕನ್ನಡ ಬೈಬಲ್
ಆದಿಕಾಂಡ 48:2 · ಕನ್ನಡ ಬೈಬಲ್

ಆಗ ಒಬ್ಬನು ಯಾಕೋಬನಿಗೆ--ಇಗೋ, ನಿನ್ನ ಮಗನಾದ ಯೋಸೇ ಫನು ನಿನ್ನ ಬಳಿಗೆ ಬರುತ್ತಾನೆ ಎಂದು ತಿಳಿಸಿದಾಗ ಇಸ್ರಾಯೇಲನು ಚೇತರಿಸಿಕೊಂಡು ಹಾಸಿಗೆಯ ಮೇಲೆ ಕೂತುಕೊಂಡನು.

Cross references

ದ್ವಿತೀಯೋಪದೇಶಕಾಂಡ 3:28

ಆದರೆ ಯೆಹೋಶು ವನಿಗೆ ಆಜ್ಞಾಪಿಸಿ ಅವನಿಗೆ ದೃಢಮಾಡಿ ಬಲಪಡಿಸು; ಅವನು ಈ ಜನರ ಮುಂದೆ ದಾಟಿಹೋಗಿ ನೀನು ನೋಡುವ ದೇಶವನ್ನು ಅವರಿಗೆ ಸ್ವಾಸ್ತ್ಯ ವಾಗಿ ಹೊಂದುವಂತೆ ಮಾಡುವನು ಎಂದು ಹೇಳಿದನು.ಆಗ ನಾವು ಬೇತ್‌ಪೆಗೋರಿಗೆ ಎದುರಾಗಿರುವ ತಗ್ಗಿನಲ್ಲಿ ವಾಸವಾಗಿದ್ದೆವು.

1 ಸಮುವೇಲ 23:16

ಆಗ ಸೌಲನ ಮಗನಾದ ಯೋನಾತಾನನು ಎದ್ದು ಅರಣ್ಯದಲ್ಲಿರುವ ದಾವೀದನ ಬಳಿಗೆ ಹೋಗಿ ದೇವರಲ್ಲಿ ಅವನ ಕೈಯನ್ನು ಬಲಪಡಿಸಿ ಅವನಿಗೆ--ಭಯಪಡಬೇಡ;

ನೆಹೆಮ್ಯ 2:18

ನನ್ನ ಮೇಲೆ ಒಳ್ಳೇದಾಗಿದ್ದ ನನ್ನ ದೇವರ ಕೈಯನ್ನೂ ಅರಸನು ನನಗೆ ಹೇಳಿದ ಮಾತುಗಳನ್ನೂ ಅವರಿಗೆ ತಿಳಿಸಿದೆನು. ಆಗ ಅವರು--ನಾವು ಎದ್ದು ಕಟ್ಟುವೆವು ಎಂದು ಹೇಳಿ ತಮ್ಮ ಕೈಗಳನ್ನು ಈ ಒಳ್ಳೇ ಕೆಲಸಕ್ಕೆ ಬಲಪಡಿಸಿದರು.

ಕೀರ್ತನೆಗಳು 41:3

ಹಾಸಿಗೆಯ ಮೇಲೆ ಕ್ಷೀಣಿಸುವ ವನನ್ನು ಕರ್ತನು ಬಲಪಡಿಸುವನು. ನೀನು ಅವನ ರೋಗದಲ್ಲಿ ಹಾಸಿಗೆಯನ್ನು ಸರಿಮಾಡುವಿ.

ಸಾಮೇತಿಗಳು 23:15

ನನ್ನ ಮಗನೇ, ನಿನ್ನ ಹೃದಯವು ಜ್ಞಾನ ವುಳ್ಳದ್ದಾಗಿದ್ದರೆ ನನ್ನ ಹೃದಯವು ಹೌದು, ನನ್ನದೇ ಹರ್ಷಿಸುವದು.

ಎಫೆಸದವರಿಗೆ 6:10

ಕಡೇದಾಗಿ ನನ್ನ ಸಹೋದರರೇ, ಕರ್ತನಲ್ಲಿಯೂ ಆತನ ಅತ್ಯಧಿಕವಾದ ಶಕ್ತಿಯಲ್ಲಿಯೂ ಬಲಗೊಳ್ಳಿರಿ.

Interlinear

Choose Theme