Home Bibles ಆದಿಕಾಂಡ 48:18 · ಕನ್ನಡ ಬೈಬಲ್
ಆದಿಕಾಂಡ 48:18 · ಕನ್ನಡ ಬೈಬಲ್

ಯೋಸೇಫನು ತನ್ನ ತಂದೆಗೆ--ನನ್ನ ಅಪ್ಪಾ, ಹಾಗಲ್ಲ, ಇವನೇ ಚೊಚ್ಚಲ ಮಗನು. ಇವನ ತಲೆಯ ಮೇಲೆ ಬಲಗೈ ಇಡು ಅಂದನು.

Cross references

ಆದಿಕಾಂಡ 19:18

ಲೋಟನು ಅವರಿಗೆ--ಹಾಗಲ್ಲ, ನನ್ನ ಕರ್ತನೇ,

ಆದಿಕಾಂಡ 27:15

ತರು ವಾಯ ರೆಬೆಕ್ಕಳು ಮನೆಯಲ್ಲಿ ತನ್ನ ಬಳಿಯಲ್ಲಿದ್ದ ಹಿರೀಮಗನಾದ ಏಸಾವನ ಒಳ್ಳೇ ವಸ್ತ್ರವನ್ನು ತಕ್ಕೊಂಡು ಕಿರೀಮಗನಾದ ಯಾಕೋಬನಿಗೆ ಉಡಿಸಿದಳು.

ಆದಿಕಾಂಡ 29:26

ಅದಕ್ಕೆ ಲಾಬಾನನು--ಹಿರಿಯಳಿಗಿಂತ ಮುಂಚೆ ಕಿರಿಯಳನ್ನು ಕೊಡುವದು ನಮ್ಮ ದೇಶದಲ್ಲಿ ಇಲ್ಲ.

ಆದಿಕಾಂಡ 43:33

ಅವರು ಚೊಚ್ಚಲನಾದವನು ತನ್ನ ಚೊಚ್ಚಲತನದ ಪ್ರಕಾರವೂ ಕಿರಿಯನು ತನ್ನ ಕಿರಿತನದ ಪ್ರಕಾರವೂ ಅವನ ಮುಂದೆ ಕೂತಿರುವಾಗ ಆ ಮನುಷ್ಯರು ತಮ್ಮ ತಮ್ಮೊಳಗೆ ಆಶ್ಚರ್ಯಪಟ್ಟರು.ಯೋಸೇಫನು ತನ್ನ ಮುಂದಿಟ್ಟಿದ್ದ ಆಹಾರವನ್ನು ಕಳುಹಿಸಿದಾಗ ಬೆನ್ಯಾವಿಾನನಿಗೆ ಕಳುಹಿಸಿದ ಆಹಾರವು ಅವರೆಲ್ಲರ ಆಹಾರಗಳಿಗಿಂತ ಐದರಷ್ಟು ಹೆಚ್ಚಾಗಿತ್ತು. ಅವರು ಅವನ ಸಂಗಡ ಪಾನಮಾಡಿ ಸಂತೋಷದಿಂದ ಇದ್ದರು.

ಆದಿಕಾಂಡ 49:3

ರೂಬೇನನೇ, ನೀನು ನನ್ನ ಚೊಚ್ಚಲ ಮಗನು, ನನ್ನ ಶಕ್ತಿಯೂ ನನ್ನ ಬಲದ ಆರಂಭವೂ ಔನ್ಯತ್ಯಾತಿ ಶಯವೂ ಬಲಾತಿಶಯವೂ ನೀನೇ.

ನಿರ್ಗಮಕಾಂಡ 10:11

ಹಾಗೆ ಮಾಡದೆ ಈಗ ಗಂಡಸರಾದ ನೀವು ಹೋಗಿ ಕರ್ತನಿಗೆ ಸೇವೆಮಾಡಿರಿ; ಇದನ್ನೇ ನೀವು ಬಯಸಿದಿರಿ ಅಂದನು. ತರುವಾಯ ಅವರು ಫರೋಹನ ಎದುರಿನಿಂದ ಹೊರದೂಡಲ್ಪಟ್ಟರು.

ಮತ್ತಾಯ 25:9

ಆದರೆ ಬುದ್ಧಿವಂತೆಯರು ಪ್ರತ್ಯುತ್ತರ ವಾಗಿ--ಹಾಗಲ್ಲ, ಅದು ನಮಗೂ ನಿಮಗೂ ಸಾಲದೆ ಹೋದೀತು; ಆದದರಿಂದ ನೀವು ಮಾರು ವವರ ಬಳಿಗೆ ಹೋಗಿ ನಿಮಗೋಸ್ಕರ ಕೊಂಡು ಕೊಳ್ಳಿರಿ ಅಂದರು.

ಅಪೋಸ್ತಲರ ಕೃತ್ಯಗಳು 10:14

ಅದಕ್ಕೆ ಪೇತ್ರನು--ಕರ್ತನೇ, ಹಾಗಲ್ಲ, ನಾನೆಂದೂ ಹೊಲೆಯಾದ ಪದಾರ್ಥವನ್ನಾಗಲೀ ಅಶುದ್ಧ ಪದಾ ರ್ಥವನ್ನಾಗಲೀ ತಿಂದವನಲ್ಲ ಅಂದನು.

ಅಪೋಸ್ತಲರ ಕೃತ್ಯಗಳು 11:8

ಆದರೆ ನಾನು--ಕರ್ತನೇ, ಹಾಗಲ್ಲ; ಹೊಲೆಯಾದ ದ್ದಾಗಲೀ ಅಶುದ್ಧವಾದದ್ದಾಗಲೀ ಯಾವದೂ ಯಾವ ಸಮಯದಲ್ಲೂ ನನ್ನ ಬಾಯೊಳಗೆ ಸೇರಲಿಲ್ಲ ಎಂದು ಹೇಳಿದೆನು;

Interlinear

Choose Theme