Home Bibles ಆದಿಕಾಂಡ 47:4 · ಕನ್ನಡ ಬೈಬಲ್
ಆದಿಕಾಂಡ 47:4 · ಕನ್ನಡ ಬೈಬಲ್

ಅವರು ಫರೋಹನಿಗೆ--ಈ ದೇಶದಲ್ಲಿ ಪ್ರವಾಸ ಮಾಡುವದಕ್ಕಾಗಿ ಬಂದಿದ್ದೇವೆ; ಯಾಕಂದರೆ ಕಾನಾನ್‌ ದೇಶದಲ್ಲಿ ಕ್ಷಾಮವು ಕಠಿಣವಾಗಿರುವದರಿಂದ ನಿನ್ನ ದಾಸರ ಮಂದೆಗಳಿಗೆ ಹುಲ್ಲುಗಾವಲು ಇಲ್ಲ. ಹೀಗಿರುವದರಿಂದ ನಿನ್ನ ದಾಸರು ಗೋಷೆನ್‌ ಸೀಮೆಯಲ್ಲಿ ವಾಸಮಾಡುವವರಾಗುವಂತೆ ನಿನ್ನನ್ನು ಕೇಳಿಕೊಳ್ಳುತ್ತೇವೆ ಅಂದರು.

Cross references

ಆದಿಕಾಂಡ 12:10

ಆಗ ಆ ದೇಶದಲ್ಲಿ ಬರ ಉಂಟಾದದ್ದರಿಂದ ಅಬ್ರಾಮನು ಐಗುಪ್ತದಲ್ಲಿ ಪ್ರವಾಸಿಯಾಗಿರುವದಕ್ಕೆ ಇಳಿದು ಹೋದನು. ಯಾಕಂದರೆ ಬರವು ಆ ದೇಶದಲ್ಲಿ ಘೋರವಾಗಿತ್ತು.

ಆದಿಕಾಂಡ 15:13

ಆಗ ಆತನು ಅಬ್ರಾಮನಿಗೆ--ನಿನ್ನ ಸಂತತಿ ಯವರು ತಮ್ಮದಲ್ಲದ ದೇಶದಲ್ಲಿ ಪರದೇಶಿಗಳಾಗಿದ್ದು ಅವರನ್ನು ಸೇವಿಸುವರು. ಅವರು ನಾನೂರು ವರುಷ ಗಳು ನಿನ್ನ ಸಂತತಿಯವರನ್ನು ಶ್ರಮೆಪಡಿಸುವರು ಎಂದು ನೀನು ಖಂಡಿತವಾಗಿಯೂ ತಿಳಿಯತಕ್ಕದ್ದು.

ಆದಿಕಾಂಡ 43:1

ದೇಶದಲ್ಲಿ ಬರವು ಘೋರವಾಗಿತ್ತು.

ಆದಿಕಾಂಡ 45:10

ಗೋಷೆನ್‌ ದೇಶದಲ್ಲಿ ನೀನು ವಾಸವಾಗಿದ್ದು ನಿನ್ನ ಮಕ್ಕಳೂ ಮೊಮ್ಮಕ್ಕಳೂ ದನ ಕುರಿಗಳೂ ನಿನಗಿದ್ದದ್ದೆಲ್ಲವೂ ನನ್ನ ಸವಿಾಪ ದಲ್ಲಿರಬೇಕು;

ಆದಿಕಾಂಡ 46:34

ಗೋಷೆನ್‌ ದೇಶದಲ್ಲಿ ವಾಸವಾಗಿರು ವಂತೆ ನೀವು ಅವನಿಗೆ--ಚಿಕ್ಕಂದಿನಿಂದ ಇಂದಿನ ವರೆಗೂ ನಿನ್ನ ದಾಸರಾದ ನಾವೂ ನಮ್ಮ ತಂದೆಗಳೂ ಮಂದೆಯನ್ನು ಕಾಯುವವರಾಗಿದ್ದೇವೆ ಎಂದು ಹೇಳ ಬೇಕು. ಯಾಕಂದರೆ ಕುರಿಕಾಯುವವರೆಲ್ಲಾ ಐಗುಪ್ತ್ಯ ರಿಗೆ ಅಸಹ್ಯವಾಗಿದ್ದಾರೆ ಅಂದನು.

ದ್ವಿತೀಯೋಪದೇಶಕಾಂಡ 26:5

ಆ ಮೇಲೆ ನೀನು ಉತ್ತರಕೊಟ್ಟು ನಿನ್ನ ದೇವರಾದ ಕರ್ತನ ಮುಂದೆ--ನನ್ನ ತಂದೆ ನಾಶ ವಾಗುವ ಅರಾಮ್ಯನಾಗಿ ಐಗುಪ್ತಕ್ಕೆ ಇಳಿದು ಹೋಗಿ ಅಲ್ಲಿ ಸ್ವಲ್ಪ ಮಂದಿಯ ಸಂಗಡ ಪರವಾಸವಾಗಿದ್ದು ಅಲ್ಲಿ ದೊಡ್ಡದಾದ, ಬಲಿಷ್ಠವಾದ, ಅಧಿಕವಾದ ಜನಾಂಗವಾದನು.

ಕೀರ್ತನೆಗಳು 105:23

ಆಗ ಇಸ್ರಾಯೇಲನು ಐಗುಪ್ತಕ್ಕೆ ಬಂದನು; ಯಾಕೋಬನು ಹಾಮನ ದೇಶದಲ್ಲಿ ಪರದೇಶಸ್ಥನಾಗಿದ್ದನು.

ಯೆಶಾಯ 52:4

ಕರ್ತನಾದ ದೇವರು ಹೀಗ ನ್ನುತ್ತಾನೆ, ನನ್ನ ಜನರು ಪೂರ್ವದಲ್ಲಿ ಇಳುಕೊಳ್ಳುವ ದಕ್ಕೆ ಐಗುಪ್ತಕ್ಕೆ ಹೋದರು; ಅಶ್ಶೂರಿನವರು ಕಾರಣ ವಿಲ್ಲದೆ ಅವರನ್ನು ಹಿಂಸಿಸಿದರು.

ಅಪೋಸ್ತಲರ ಕೃತ್ಯಗಳು 7:6

ಇದಲ್ಲದೆ ದೇವರು ಈ ರೀತಿ ಹೇಳಿ ದನು--ನಿನ್ನ ಸಂತಾನದವರು ಅನ್ಯದೇಶದಲ್ಲಿ ಪ್ರವಾಸಿ ಗಳಾಗಿರುವರು. ಆ ಅನ್ಯದೇಶದವರು ಅವರನ್ನು ದಾಸ ರನ್ನಾಗಿ ಮಾಡಿಕೊಂಡು ನಾನೂರು ವರುಷಗಳ ತನಕ ಕ್ರೂರವಾಗಿ ನಡಿಸುವರು.

ಅಪೋಸ್ತಲರ ಕೃತ್ಯಗಳು 7:11

ಆಗ ಐಗುಪ್ತ ಮತ್ತು ಕಾನಾನ್‌ ದೇಶಗಳಲ್ಲಿ ಎಲ್ಲೆಲ್ಲಿಯೂ ಬರ ಬಂದು ದೊಡ್ಡ ಸಂಕಟವಾಯಿತು; ಆಗ ನಮ್ಮ ಪಿತೃ ಗಳಿಗೆ ಆಹಾರಕ್ಕೇನೂ ಸಿಕ್ಕಲಿಲ್ಲ.

Interlinear

Choose Theme