Home Bibles ಆದಿಕಾಂಡ 47:26 · ಕನ್ನಡ ಬೈಬಲ್
ಆದಿಕಾಂಡ 47:26 · ಕನ್ನಡ ಬೈಬಲ್

ಹೀಗೆ ಯೋಸೇಫನು ಫರೋಹನಿಗೆ ಐದನೆಯ ಪಾಲು ಆಗಬೇಕೆಂಬದನ್ನು ಐಗುಪ್ತದ ಭೂಮಿಗೆ ಇಂದಿನ ವರೆಗೂ ನೇಮಕಮಾಡಿ ಸ್ಥಾಪಿಸಿ ದನು. ವೈದಿಕರ ಭೂಮಿಯು ಮಾತ್ರ ಫರೋಹ ನದಾಗಲಿಲ್ಲ.

Cross references

ಆದಿಕಾಂಡ 14:20

ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ ಮಹೋನ್ನತ ನಾದ ದೇವರು ಸ್ತುತಿಹೊಂದಲಿ ಅಂದನು. ಅಬ್ರಾ ಮನು ಅವನಿಗೆ ಎಲ್ಲಾದರಲ್ಲಿ ದಶಮಭಾಗವನ್ನು ಕೊಟ್ಟನು.

ಆದಿಕಾಂಡ 28:22

ಇದಲ್ಲದೆ ಸ್ತಂಭವಾಗಿ ನಾನು ನಿಲ್ಲಿಸಿದ ಈ ಕಲ್ಲು ದೇವರ ಮನೆಯಾಗಿರುವದು. ಆಗ ನೀನು ನನಗೆ ಕೊಡುವದ ರಲ್ಲೆಲ್ಲಾ ಹತ್ತರಲ್ಲಿ ಒಂದು ಭಾಗವನ್ನು ನಿನಗೆ ನಾನು ಖಂಡಿತವಾಗಿ ಕೊಡುವೆನು ಅಂದನು.

ಆದಿಕಾಂಡ 41:34

ಫರೋಹನು ಅಧಿಕಾರಗಳನ್ನು ನೇಮಿಸಿ ದೇಶದ ಮೇಲಿಟ್ಟು ಸುಭಿಕ್ಷೆಯ ಏಳುವರುಷಗಳಲ್ಲಿ ಐಗುಪ್ತದೇಶದ ಐದರಲ್ಲಿ ಒಂದು ಭಾಗ ಬೆಳೆಯನ್ನು ತಕ್ಕೊಳ್ಳಲಿ.

ಆದಿಕಾಂಡ 47:22

ವೈದಿಕರ ಭೂಮಿಯನ್ನು ಮಾತ್ರ ಅವನು ಕೊಂಡು ಕೊಳ್ಳಲಿಲ್ಲ. ಯಾಕಂದರೆ ಫರೋಹನು ವೈದಿಕರಿಗೆ ಭಾಗಗಳನ್ನು ನೇಮಿಸಿದ್ದನು. ಅವನು ಅವರಿಗೆ ನೇಮಿಸಿದ್ದನ್ನು ಅವರು ಊಟಮಾಡುತ್ತಿದ್ದರು; ಆದ ದರಿಂದ ಅವರು ತಮ್ಮ ಭೂಮಿಗಳನ್ನು ಮಾರಲಿಲ್ಲ.

ಲೇವ್ಯಕಾಂಡ 27:30

ಭೂಮಿಯ ಬೀಜದಲ್ಲಾಗಲಿ ಮರದ ಫಲದ ಲ್ಲಾಗಲಿ ಹತ್ತನೇ ಪಾಲೆಲ್ಲಾ ಕರ್ತನದೇ. ಅದು ಕರ್ತನಿಗೆ ಪರಿಶುದ್ಧವಾದದ್ದು.

ಅಂಕೆಗಳ ಪುಸ್ತಕ 18:21

ಇಗೋ, ಅವರು ಸಭೆಯ ಗುಡಾರದ ಸೇವೆಯನ್ನು ಮಾಡುವದರಿಂದ ನಾನು ಲೇವಿಯ ಮಕ್ಕಳಿಗೆ ಅವರ ಸೇವೆಗೋಸ್ಕರ ಇಸ್ರಾ ಯೇಲ್ಯರಲ್ಲಿ ಹತ್ತನೆಯ ಒಂದು ಪಾಲನ್ನೆಲ್ಲಾ ಸ್ವಾಸ್ತ್ಯ ಕ್ಕಾಗಿ ಕೊಟ್ಟಿದ್ದೇನೆ.

ದ್ವಿತೀಯೋಪದೇಶಕಾಂಡ 14:22

ನೀನು ಬಿತ್ತುವದರಿಂದ ಹೊಲದಲ್ಲಿ ವರುಷ ವರುಷಕ್ಕೆ ಬರುವ ಹುಟ್ಟುವಳಿಯಿಂದ ದಶಮಾಂಶವನ್ನು ತಪ್ಪದೆ ಕೊಡಬೇಕು.

ದ್ವಿತೀಯೋಪದೇಶಕಾಂಡ 26:12

ಹತ್ತನೆಯ ಪಾಲನ್ನು ಕೊಡುವ ವರುಷವಾಗಿರುವ ಮೂರನೆಯ ವರುಷದಲ್ಲಿ ನೀನು ನಿನ್ನ ಎಲ್ಲಾ ಹುಟ್ಟು ವಳಿಯ ಹತ್ತನೇ ಪಾಲನ್ನು ಕೊಟ್ಟು ತೀರಿಸಿದ ಮೇಲೆ ಲೇವಿಗೂ ಪರವಾಸಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಕೊಡಬೇಕು; ಅವನು ನಿನ್ನ ಬಾಗಲುಗಳಲ್ಲಿ ತಿಂದು ತೃಪ್ತಿ ಹೊಂದಲಿ.

ಎಜ್ರಾ 7:24

ಇದಲ್ಲದೆ ಯಾಜಕರೂ ಲೇವಿ ಯರೂ ಹಾಡುಗಾರರೂ ದ್ವಾರಪಾಲಕರೂ ನೆತಿನಿ ಯರೂ ಮೊದಲಾದ ದೇವರ ಆಲಯದ ಸೇವಕರನ್ನು ಕುರಿತು ಏನಂದರೆ--ಅವರ ಮೇಲೆ ತೆರಿಗೆಯನ್ನಾದರೂ ಕಪ್ಪವನ್ನಾದರೂ ಸುಂಕವನ್ನಾದರೂ ಹೊರಿಸಲು ಅಪ್ಪಣೆ ಇಲ್ಲವೆಂದು ನಿಮಗೆ ತಿಳಿಸುತ್ತೇನೆ.

ಯೆಹೆಜ್ಕೇಲ 7:24

ಆದ ಕಾರಣ ನಾನು ಅನ್ಯಜನಾಂಗಗಳಲ್ಲಿ ಕೆಟ್ಟವರನ್ನು ತರುತ್ತೇನೆ ಮತ್ತು ಅವರು ಅವರ ಮನೆಗಳನ್ನು ವಶ ಪಡಿಸಿಕೊಳ್ಳುವರು; ನಾನು ಬಲಿಷ್ಠರ ಅಟ್ಟಹಾಸವನ್ನು ನಿಲ್ಲಿಸುತ್ತೇನೆ ಮತ್ತು ಅವರ ಪರಿಶುದ್ಧ ಸ್ಥಳಗಳು ಅಪವಿತ್ರವಾಗುವವು.

Interlinear

Choose Theme