ಇದಲ್ಲದೆ ಗೋಷೆನಿಗೆ ಮಾರ್ಗವನ್ನು ತೋರಿ ಸುವ ಹಾಗೆ ಅವನು ಯೆಹೂದನನ್ನು ತನ್ನ ಮುಂದಾಗಿ ಯೋಸೇಫನ ಬಳಿಗೆ ಕಳುಹಿಸಿದನು. ಅವರು ಗೋಷೆನ್ ದೇಶಕ್ಕೆ ಬಂದರು.
Cross references
ಅವನು ತನಗಿದ್ದದ್ದನ್ನೆಲ್ಲಾ ತೆಗೆದು ಕೊಂಡು ಓಡಿಹೋದನು. ಅವನು ಎದ್ದು ಗಿಲ್ಯಾದ್ ಪರ್ವತಕ್ಕೆ ಅಭಿಮುಖನಾಗಿ ನದಿಯನ್ನು ದಾಟಿದನು.
ಯೆಹೂದನು ತನ್ನ ತಂದೆಯಾದ ಇಸ್ರಾಯೇಲನಿಗೆ--ಆ ಹುಡುಗ ನನ್ನು ನನ್ನ ಸಂಗಡ ಕಳುಹಿಸು; ನಾವು ಹೊರಟು ಹೋಗುವೆವು. ನಾವೂ ನೀನೂ ನಮ್ಮ ಮಕ್ಕಳೂ ಸಾಯದೆ ಬದುಕುವೆವು.
ಯೆಹೂದನು--ನಾವು ನಮ್ಮ ಒಡೆಯ ನಿಗೆ ಏನು ಹೇಳೋಣ? ಏನು ಮಾತನಾಡೋಣ? ಹೇಗೆ ನಮ್ಮನ್ನು ನಾವು ನಿರ್ದೋಷಿಗಳೆಂದು ತೋರಿಸಿ ಕೊಳ್ಳೋಣ? ನಿನ್ನ ದಾಸರ ಪಾಪವನ್ನು ದೇವರು ಕಂಡುಕೊಂಡಿದ್ದಾನೆ. ಇಗೋ, ಪಾತ್ರೆಯು ಯಾರ ಬಳಿಯಲ್ಲಿ ಸಿಕ್ಕಿತೋ ಅವನೂ ನಾವೂ ನಮ್ಮ ಒಡೆಯ ನಿಗೆ ದಾಸರಾಗಿದ್ದೇವೆ ಅಂದನು.
ಗೋಷೆನ್ ದೇಶದಲ್ಲಿ ನೀನು ವಾಸವಾಗಿದ್ದು ನಿನ್ನ ಮಕ್ಕಳೂ ಮೊಮ್ಮಕ್ಕಳೂ ದನ ಕುರಿಗಳೂ ನಿನಗಿದ್ದದ್ದೆಲ್ಲವೂ ನನ್ನ ಸವಿಾಪ ದಲ್ಲಿರಬೇಕು;
ಗೋಷೆನ್ ದೇಶದಲ್ಲಿ ವಾಸವಾಗಿರು ವಂತೆ ನೀವು ಅವನಿಗೆ--ಚಿಕ್ಕಂದಿನಿಂದ ಇಂದಿನ ವರೆಗೂ ನಿನ್ನ ದಾಸರಾದ ನಾವೂ ನಮ್ಮ ತಂದೆಗಳೂ ಮಂದೆಯನ್ನು ಕಾಯುವವರಾಗಿದ್ದೇವೆ ಎಂದು ಹೇಳ ಬೇಕು. ಯಾಕಂದರೆ ಕುರಿಕಾಯುವವರೆಲ್ಲಾ ಐಗುಪ್ತ್ಯ ರಿಗೆ ಅಸಹ್ಯವಾಗಿದ್ದಾರೆ ಅಂದನು.
ಯೆಹೂದನೇ, ನಿನ್ನ ಸಹೋದರರು ನಿನ್ನನ್ನು ಹೊಗಳು ವರು. ನಿನ್ನ ಕೈ ನಿನ್ನ ಶತ್ರುಗಳ ಕುತ್ತಿಗೆಯ ಮೇಲಿರುವದು, ನಿನ್ನ ತಂದೆಯ ಮಕ್ಕಳು ನಿನಗೆ ಅಡ್ಡ ಬೀಳುವರು.