ಸಿಮೆಯೋನನ ಮಕ್ಕಳು: ಯೆಮೂವೇಲ್ ಯಾವಿಾನ್ ಓಹದ್ ಯಾಕೀನ್ ಚೋಹರ್ ಕಾನಾನ್ಯಳ ಮಗನಾದ ಸೌಲ ಎಂಬವರು.
Cross references
ಇಸಾಕನು ಯಾಕೋಬನನ್ನು ಕರೆದು ಆಶೀರ್ವದಿಸಿ ಅವನಿಗೆ ಆಜ್ಞಾಪಿಸಿದ್ದೇ ನಂದರೆ--ಕಾನಾನ್ಯರ ಕುಮಾರ್ತೆಗಳಲ್ಲಿ ನೀನು ಹೆಂಡತಿ ಯನ್ನು ತಕ್ಕೊಳ್ಳಬಾರದು.
ಮತ್ತೆ ಆಕೆಯು ಗರ್ಭಿಣಿಯಾಗಿ ಮಗನನ್ನು ಹೆತ್ತು--ನಾನು ತಾತ್ಸಾರ ಮಾಡಲ್ಪಟ್ಟೆನೆಂದು ಕರ್ತನು ಕೇಳಿ ಇವನನ್ನು ನನಗೆ ಕೊಟ್ಟಿದ್ದಾನೆ ಎಂದು ಹೇಳಿ ಅವನಿಗೆ ಸಿಮೆಯೋನ ಎಂದು ಹೆಸರಿಟ್ಟಳು.
ಮೂರನೆಯ ದಿನದಲ್ಲಿ ಅವರಿಗೆ ನೋವು ಉಂಟಾದಾಗ ಯಾಕೋಬನ ಮಕ್ಕಳಲ್ಲಿ ಇಬ್ಬರು ಅಂದರೆ ದೀನಳ ಸಹೋದರರಾದ ಸಿಮೆಯೋನನೂ ಲೇವಿಯೂ ತಮ್ಮ ತಮ್ಮ ಕತ್ತಿಗಳನ್ನು ತಕ್ಕೊಂಡು ಧೈರ್ಯವಾಗಿ ಪಟ್ಟಣಕ್ಕೆ ಬಂದು ಗಂಡಸರನ್ನೆಲ್ಲಾ ಕೊಂದುಹಾಕಿದರು.
ಆಗ ಯಾಕೋಬನು ಸಿಮೆಯೋನನಿಗೂ ಲೇವಿಗೂ ಹೇಳಿದ್ದೇನಂದರೆ--ನೀವು ನನ್ನನ್ನು ದೇಶದ ನಿವಾಸಿಗಳಾದ ಕಾನಾನ್ಯರಿಗೂ ಪೆರಿಜೀಯರಿಗೂ ದುರ್ವಾಸನೆಯಾಗುವಂತೆ ಮಾಡಿ ನನ್ನನ್ನು ಕಳವಳಪಡಿ ಸಿದಿರಿ; ನಾನು ಸ್ವಲ್ಪ ಮಂದಿಯುಳ್ಳವನು, ಹೀಗಿರುವಲ್ಲಿ ಅವರು ನನಗೆ ವಿರೋಧವಾಗಿ ಕೂಡಿಕೊಂಡು ನನ್ನನ್ನು ಕೊಲ್ಲುವರು. ಆಗ ನಾನೂ ನನ್ನ ಮನೆಯವರೂ ನಾಶವಾಗುವೆವು ಅಂದನು.ಆದರೆ ಅವರುನಮ್ಮ ತಂಗಿಯೊಂದಿಗೆ ಸೂಳೆಯಂತೆ ವರ್ತಿಸಬಹುದೋ ಅಂದರು.
ಸಿಮೆಯೋ ನನೂ ಲೇವಿಯೂ ಸಹೋದರರು; ಕ್ರೂರತ್ವದ ಆಯುಧಗಳು ಅವರ ನಿವಾಸಗಳಲ್ಲಿ ಇವೆ.
ಸಿಮೆಯೋನನ ಕುಮಾರರು: ಯೆಮೂಯೇಲ್, ಯಾವಿಾನ್ ಓಹದ್ ಯಾಕೀನ್ ಚೋಹರ್ ಮತ್ತು ಕಾನಾನ್ಯಳ ಮಗನಾದ ಸೌಲ: ಇವರೇ ಸಿಮೆಯೋನನ ಗೋತ್ರಗಳು.
ಸಿಮೆಯೋನ್ ಗೋತ್ರದಿಂದ ಚೂರೀಷದ್ದೈಯನ ಮಗನಾದ ಶೆಲುವಿಾಯೇಲ್,
ಸಿಮೆಯೋನನ ಮಕ್ಕಳು, ಅವರ ಗೋತ್ರಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರ ವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದ ಗಂಡಸರೆಲ್ಲರು
ಅವನ ಬಳಿ ಯಲ್ಲಿ ಇಳುಕೊಳ್ಳುವವರು ಸಿಮೆಯೋನನ ಗೋತ್ರ ದವರು; ಸಿಮೆಯೋನನ ಮಕ್ಕಳಿಗೆ ಚೂರೀಷದ್ದೈಯನ ಮಗನಾದ ಶೆಲುವಿಾಯೇಲನು ಸೈನ್ಯಾಧಿಪತಿ;
ಕುಟುಂಬಗಳ ಪ್ರಕಾರ ಸಿಮೆಯೋನನ ಕುಮಾ ರರು: ನೆಮೂವೇಲನಿಂದ ನೆಮೂವೇಲ್ಯರ ಕುಟುಂಬ; ಯಾವಿಾನನಿಂದ ಯಾವಿಾನ್ಯರ ಕುಟುಂಬ; ಯಾಕೀನ ನಿಂದ ಯಾಕೀನ್ಯರ ಕುಟುಂಬ;
ಇಸ್ರಾಯೇಲನ ಮಕ್ಕಳು -- ರೂಬೇನನು, ಸಿಮೆಯೋನನು, ಲೇವಿಯು,
ಸಿಮೆಯೋನನ ಕುಮಾರರು -- ನೆಮೂವೇ ಲನು, ಯಾವಿಾನನು, ಯಾರೀದನು, ಜೆರಹನು, ಸೌಲನು.