Home Bibles ಆದಿಕಾಂಡ 45:22 · ಕನ್ನಡ ಬೈಬಲ್
ಆದಿಕಾಂಡ 45:22 · ಕನ್ನಡ ಬೈಬಲ್

ಅವರೆಲ್ಲರಿಗೆ ಒಂದೊಂದು ಜೊತೆ ವಸ್ತ್ರಗಳನ್ನೂ ಬೆನ್ಯಾವಿಾನನಿಗೆ ಮುನ್ನೂರು ಬೆಳ್ಳಿಯ ನಾಣ್ಯಗಳನ್ನೂ ಐದು ಜೊತೆ ವಸ್ತ್ರಗಳನ್ನೂ ಕೊಟ್ಟನು.

Cross references

ಆದಿಕಾಂಡ 43:34

ಯೋಸೇಫನು ತನ್ನ ಮುಂದಿಟ್ಟಿದ್ದ ಆಹಾರವನ್ನು ಕಳುಹಿಸಿದಾಗ ಬೆನ್ಯಾವಿಾನನಿಗೆ ಕಳುಹಿಸಿದ ಆಹಾರವು ಅವರೆಲ್ಲರ ಆಹಾರಗಳಿಗಿಂತ ಐದರಷ್ಟು ಹೆಚ್ಚಾಗಿತ್ತು. ಅವರು ಅವನ ಸಂಗಡ ಪಾನಮಾಡಿ ಸಂತೋಷದಿಂದ ಇದ್ದರು.

ನ್ಯಾಯಾಧಿಪತಿಗಳು 14:12

ಅವರಿಗೆ ಸಂಸೋನನು--ನಾನು ನಿಮಗೆ ಒಂದು ಒಗಟನ್ನು ಹೇಳುವೆನು; ನೀವು ಅದನ್ನು ಔತಣದ ಈ ಏಳು ದಿವಸಗಳಲ್ಲಿ ಗ್ರಹಿಸಿಕೊಂಡು ನನಗೆ ಅದರ ಅರ್ಥವನ್ನು ನಿಜವಾಗಿ ಹೇಳಿದರೆ ನಾನು ನಿಮಗೆ ಮೂವತ್ತು ದುಪ್ಪಟಿಗಳನ್ನೂ ಮೂವತ್ತು ದುಸ್ತು ವಸ್ತ್ರಗಳನ್ನೂ ಕೊಡುವೆನು.

ನ್ಯಾಯಾಧಿಪತಿಗಳು 14:19

ಕರ್ತನ ಆತ್ಮವು ಅವನ ಮೇಲೆ ಬಂದದ್ದ ರಿಂದ ಅವನು ಅಷ್ಕೆಲೋನಿಗೆ ಹೋಗಿ ಆ ಊರಿನಲ್ಲಿ ಮೂವತ್ತು ಜನರನ್ನು ವಧಿಸಿ ಸುಲುಕೊಂಡು ಒಗಟನ್ನು ತಿಳಿಸಿದವರಿಗೆ ದುಸ್ತುವಸ್ತ್ರಗಳನ್ನು ಕೊಟ್ಟನು.ಅವನು ಕೋಪಗೊಂಡು ತನ್ನ ತಂದೆಯ ಮನೆಗೆ ಹೊರಟು ಹೋದನು. ಆದರೆ ಸಂಸೋನನ ಹೆಂಡತಿಯು ಅವನ ಸ್ನೇಹಿತನಾಗಿದ್ದ ಒಬ್ಬನಿಗೆ ಕೊಡಲ್ಪಟ್ಟಳು.

2 ಅರಸುಗಳು 5:5

ಆದದರಿಂದ ಅರಾಮ್ಯರ ಅರಸನು--ನೀನು ಹೋಗಿ ಬಾ; ನಾನು ಇಸ್ರಾಯೇಲಿನ ಅರಸನಿಗೆ ಪತ್ರವನ್ನು ಕಳುಹಿಸುವೆನು ಅಂದನು. ಹಾಗೆಯೇ ಅವನು ಹತ್ತು ತಲಾಂತು ಬೆಳ್ಳಿಯನ್ನೂ ಆರು ಸಾವಿರ ಬಂಗಾರದ ನಾಣ್ಯಗಳನ್ನೂ ಹತ್ತು ದುಸ್ತು ಬಟ್ಟೆ ಗಳನ್ನೂ ತೆಗೆದುಕೊಂಡು ಹೋದನು.

2 ಅರಸುಗಳು 5:22

ಅವನುಕ್ಷೇಮ; ಇಗೋ, ಪ್ರವಾದಿಗಳ ಮಕ್ಕಳಲ್ಲಿ ಇಬ್ಬರು ಯೌವನಸ್ಥರು ಎಫ್ರಾಯಾಮ್‌ ಬೆಟ್ಟದಿಂದ ಈಗಲೇ ನನ್ನ ಬಳಿಗೆ ಬಂದಿದ್ದಾರೆ; ನೀನು ದಯಮಾಡಿ ಅವರಿಗೆ ಒಂದು ತಲಾಂತು ಬೆಳ್ಳಿಯನ್ನೂ ಎರಡು ದುಸ್ತು ಬಟ್ಟೆ ಗಳನ್ನೂ ಕೊಡಬೇಕೆಂದು ನಿನಗೆ ಹೇಳು ಎಂದು ನನ್ನ ಯಜಮಾನನು ಕಳುಹಿಸಿದ್ದಾನೆ ಅಂದನು.

ಪ್ರಕಟನೆ 6:11

ಅವರಲ್ಲಿ ಒಬ್ಬೊಬ್ಬನಿಗೆ ಬಿಳೀ ನಿಲುವಂಗಿಗಳು ಕೊಡಲ್ಪಟ್ಟಿದ್ದವು. ಇದಲ್ಲದೆ ಅವರ ಹಾಗೆ ಅವರ ಜೊತೆ ಸೇವಕರ ಮತ್ತು ಅವರ ಸಹೋದರರ ಕೊಲೆಯು ಪೂರೈಸುವ ತನಕ ಇನೂ ಸ್ವಲ್ಪ ಕಾಲ ವಿಶ್ರಮಿಸಿಕೊಂಡಿರಬೇಕೆಂದು ಅವರಿಗೆ ಹೇಳಲ್ಪಟ್ಟಿತು.

Interlinear

Choose Theme