ಹೀಗಿರಲಾಗಿ ನಾನು ನಿನ್ನ ದಾಸನಾದ ನನ್ನ ತಂದೆಯ ಬಳಿಗೆ ಹೋಗುವ ಸಮಯದಲ್ಲಿ ಅವನ ಪ್ರಾಣವು ಹುಡುಗನ ಪ್ರಾಣದೊಂದಿಗೆ ಬಂಧಿಸಲ್ಪಟ್ಟಿದ್ದರಿಂದ
Cross references
ಆಗ ಯೋಸೇ ಫನು--ಹಾಗೆ ಮಾಡುವದು ನನಗೆ ದೂರವಾಗಿರಿಲಿ. ಯಾರ ಬಳಿಯಲ್ಲಿ ಆ ಪಾತ್ರೆಯು ಸಿಕ್ಕಿತೋ ಅವನೇ ನನಗೆ ದಾಸನಾಗಿರಲಿ. ಆದರೆ ನೀವು ಸಮಾಧಾನವಾಗಿ ನಿಮ್ಮ ತಂದೆಯ ಬಳಿಗೆ ಹೋಗಿರಿ ಅಂದನು.
ನಾವು ನಮ್ಮ ಒಡೆಯನಿಗೆಆ ಹುಡುಗನು ತನ್ನ ತಂದೆಯನ್ನು ಅಗಲಕೂಡದು. ಅವನು ತಂದೆಯನ್ನು ಬಿಟ್ಟಗಲಿದರೆ ತಂದೆಯು ಸಾಯುವನು ಎಂದು ಹೇಳಿದೆವು.
ಹುಡುಗನು ನಮ್ಮ ಸಂಗಡ ಇಲ್ಲದೆ ಹೋದರೆ ಆ ಹುಡುಗ ನಿಲ್ಲದ್ದನ್ನು ಕಂಡಾಗಲೇ ಅವನು ಸಾಯುವನು. ನಿನ್ನ ದಾಸನಾಗಿರುವ ನಮ್ಮ ತಂದೆಯ ನರೇಕೂದಲನ್ನು ದುಃಖದಿಂದ ಸಮಾಧಿಗೆ ನಿನ್ನ ದಾಸರು ಇಳಿಯ ಮಾಡುವರು.
ಹುಡುಗನು ನನ್ನ ಬಳಿಯಲ್ಲಿರದೆ ನಾನು ಹೇಗೆ ನನ್ನ ತಂದೆಯ ಬಳಿಗೆ ಹೋಗಲಿ? ಹೋದರೆ ನನ್ನ ತಂದೆಗೆ ಬರುವ ಕೇಡನ್ನು ನಾನು ನೋಡ ಬೇಕಾದೀತು ಅಂದನು.
ದಾವೀದನು ಸೌಲನ ಸಂಗಡ ಮಾತನಾಡಿ ತೀರಿಸಿದಾಗ ಯೋನಾತಾನನ ಪ್ರಾಣವು ದಾವೀದನ ಪ್ರಾಣದ ಸಂಗಡ ಒಂದಾಯಿತು. ಯೋನಾತಾನನು ಅವನನ್ನು ತನ್ನ ಪ್ರಾಣದ ಹಾಗೆಯೇ ಪ್ರೀತಿಮಾಡಿದನು.
ಈಗ ನಿನ್ನನ್ನು ಹಿಂದಟ್ಟಿ ನಿನ್ನ ಪ್ರಾಣವನ್ನು ಹುಡು ಕುವದಕ್ಕೆ ಒಬ್ಬನು ಎದ್ದಿದ್ದಾನೆ; ಆದರೂ ನನ್ನ ಒಡೆ ಯನ ಪ್ರಾಣವು ದೇವರಾದ ಕರ್ತನ ಬಳಿಯ ಜೀವದ ಕಟ್ಟಿನಲ್ಲಿ ಕಟ್ಟಲ್ಪಟ್ಟಿರುವದು; ನಿನ್ನ ಶತ್ರುಗಳ ಪ್ರಾಣವನ್ನು ಕವಣೆಯ ಮಧ್ಯದಲ್ಲಿಟ್ಟು ಎಸೆದ ಹಾಗೆಯೇ ಆತನು ಎಸೆದು ಬಿಡುವನು.
ಆಗ ಅರಸನು ನಡುಗುತ್ತಾ ಊರ ಬಾಗಲು ಮೇಲಿರುವ ಕೊಠಡಿಗೆ ಏರಿ ಹೋದನು; ಹೋಗು ವಾಗ ಅತ್ತು--ನನ್ನ ಮಗನಾದ ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನಾದ ಅಬ್ಷಾಲೋಮನೇ ನಿನಗೆ ಬದಲಾಗಿ ನಾನು ಸತ್ತಿದ್ದರೆ ಉತ್ತಮವಾಗುತ್ತಿತ್ತು. ಅಬ್ಷಾಲೋಮನೇ, ನನ್ನ ಮಗನೇ ನನ್ನ ಮಗನೇ, ಅಂದನು.