ಅವರು ಐಗುಪ್ತದಿಂದ ತಂದಿದ್ದ ಧಾನ್ಯವು ತೀರಿದ ಮೇಲೆ ಅವರ ತಂದೆ ಅವರಿಗೆ--ತಿರಿಗಿ ಹೋಗಿ ನಮಗಾಗಿ ಸ್ವಲ್ಪ ಆಹಾರವನ್ನು ಕೊಂಡುಕೊಳ್ಳಿರಿ ಅಂದನು.
Cross references
ಐಗುಪ್ತದಲ್ಲಿ ಧಾನ್ಯ ಉಂಟೆಂದುಯಾಕೋಬನು ತಿಳಿದಾಗ ಅವನು ತನ್ನ ಕುಮಾರರಿಗೆನೀವು ಒಬ್ಬರನ್ನೊಬ್ಬರು ನೋಡಿಕೊಳ್ಳು ವದೇನು ಅಂದನು.
ಅವನು--ಇಗೋ, ಐಗುಪ್ತದಲ್ಲಿ ಧಾನ್ಯ ಉಂಟೆಂದು ನಾನು ಕೇಳಿದ್ದೇನೆ. ನಾವು ಸಾಯದೆ ಬದುಕುವಂತೆ ನೀವು ಅಲ್ಲಿಗೆ ಇಳಿದು ಹೋಗಿ ನಮಗಾಗಿ ಅಲ್ಲಿಂದ ಧಾನ್ಯವನ್ನು ಕೊಂಡು ಕೊಳ್ಳಿರಿ ಅಂದನು.
ನೀನು ನಮ್ಮ ತಮ್ಮನನ್ನು ನಮ್ಮ ಸಂಗಡ ಕಳುಹಿಸಿದರೆ ನಾವು ಇಳಿದುಹೋಗಿ ನಿನಗಾಗಿ ಆಹಾರವನ್ನು ಕೊಂಡುಕೊಳ್ಳುತ್ತೇವೆ.
ಅಯ್ಯಾ, ನಾವು ಆಹಾರವನ್ನು ಕೊಂಡುಕೊಳ್ಳುವದಕ್ಕೆ ಮೊದಲ ನೆಯ ಸಾರಿ ಇಳಿದು ಬಂದದ್ದು ನಿಜವೇ.
ನಮ್ಮ ತಂದೆಯು--ನೀವು ತಿರಿಗಿಹೋಗಿ ನಮಗೆ ಸ್ವಲ್ಪ ಆಹಾರವನ್ನು ಕೊಂಡು ಕೊಳ್ಳಿರಿ ಅಂದನು.
ಕಳವಳದಿಂದ ಕೂಡಿದ ದೊಡ್ಡ ಸಂಪತ್ತಿ ಗಿಂತ ಕರ್ತನ ಭಯದಿಂದ ಕೂಡಿದ ಸ್ವಲ್ಪವೇ ಉತ್ತಮ ವಾಗಿದೆ.
ನಾಶನಕ್ಕೆ ಮುಂದಾಗಿ ಗರ್ವ ಹೋಗು ತ್ತದೆ; ಬೀಳುವಿಕೆಯ ಮುಂಚೆ ಜಂಬದ ಮನಸ್ಸು.
ಆಕೆಯು ಯೋಚಿಸಿ ಹೊಲವನ್ನು ಕೊಂಡುಕೊಳ್ಳುತ್ತಾಳೆ; ತನ್ನ ಕೈಕೆಲಸದ ಫಲದಿಂದ ಆಕೆಯು ದ್ರಾಕ್ಷಾಲತೆಗಳನ್ನು ನೆಡುತ್ತಾಳೆ.
ಯಾವನಾದರೂ ಸ್ವಂತದವರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ನಂಬಿಕೆಯನ್ನು ಅಲ್ಲಗಳೆ ದವನು ನಂಬದವನಿಗಿಂತ ಕೆಟ್ಟವನೂ ಆಗಿದ್ದಾನೆ.
ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ.