Home Bibles ಆದಿಕಾಂಡ 43:12 · ಕನ್ನಡ ಬೈಬಲ್
ಆದಿಕಾಂಡ 43:12 · ಕನ್ನಡ ಬೈಬಲ್

ಇದಲ್ಲದೆ ಎರಡರಷ್ಟು ಹಣವನ್ನು ಕೈಯಲ್ಲಿ ತೆಗೆದುಕೊಂಡು ಹೋಗಿರಿ. ಅವರು ನಿಮ್ಮ ಚೀಲಗಳ ಬಾಯಲ್ಲಿ ಹಾಕಿ ಹಿಂದಕ್ಕೆ ಕಳುಹಿಸಿದ ಹಣವನ್ನು ಸಹ ತೆಗೆದುಕೊಂಡು ಹೋಗಿರಿ. ಒಂದು ವೇಳೆ ಅದು ಅವರಿಗೆ ತಿಳಿಯದೆ ಇದ್ದಿರ ಬಹುದು.

Cross references

ಆದಿಕಾಂಡ 42:25

ತರುವಾಯ ಯೋಸೇಫನು ಧಾನ್ಯವನ್ನು ತುಂಬಿಸ ಬೇಕೆಂದೂ ಒಬ್ಬೊಬ್ಬನ ಚೀಲದಲ್ಲಿ ಅವನವನ ಹಣವನ್ನು ತಿರಿಗಿ ಇಡಬೇಕೆಂದೂ ಹಾದಿಗೋಸ್ಕರ ಅವರಿಗೆ ಆಹಾರ ಸರಬರಾಜು ಮಾಡಬೇಕೆಂದೂ ಆಜ್ಞಾಪಿಸಿದನು. ಹೀಗೆಯೇ ಅವನು ಅವರಿಗೆ ಮಾಡಿ ದನು.

ಆದಿಕಾಂಡ 42:35

ಇದಲ್ಲದೆ ಅವರು ತಮ್ಮ ಚೀಲಗಳನ್ನು ಬರಿದು ಮಾಡುತ್ತಿದ್ದಾಗ ಇಗೋ, ಅವನವನ ಹಣದ ಗಂಟು ಅವನವನ ಚೀಲದಲ್ಲಿ ಇತ್ತು. ಅವರೂ ಅವರ ತಂದೆಯೂ ಆ ಹಣದ ಗಂಟುಗಳನ್ನು ನೋಡಿ ಭಯಪಟ್ಟರು.

ರೋಮಾಪುರದವರಿಗೆ 12:17

ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿ ಯಾವದು ಗೌರವ ವಾದದ್ದೋ ಅದನ್ನೇ ಮಾಡುವವರಾಗಿರ್ರಿ.

ರೋಮಾಪುರದವರಿಗೆ 13:8

ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ಸಾಲವೂ ನಿಮಗೆ ಇರ ಬಾರದು. ಮತ್ತೊಬ್ಬರನ್ನು ಪ್ರೀತಿಸುವವನು ನ್ಯಾಯಪ್ರಮಾಣವನ್ನೆಲ್ಲಾ ನೆರವೇರಿಸಿದ್ದಾನೆ.

2 ಕೊರಿಂಥದವರಿಗೆ 8:21

ಯಾಕಂದರೆ ಕರ್ತನ ದೃಷ್ಟಿಯಲ್ಲಿ ಮಾತ್ರವಲ್ಲದೆ ಮನುಷ್ಯರ ದೃಷ್ಟಿಯಲ್ಲಿಯೂ ಗೌರವ ವಾದವುಗಳನ್ನು ಯೋಚನೆಗೆ ತಂದುಕೊಳ್ಳುವವರಾ ಗಿದ್ದೇವೆ.

ಫಿಲಿಪ್ಪಿಯವರಿಗೆ 4:8

ಕಡೇದಾಗಿ ಸಹೋದರರೇ, ಸತ್ಯವಾದವುಗಳು ಯಾವವೋ ಪ್ರಾಮಾಣಿಕವಾದವುಗಳು ಯಾವವೋ ನ್ಯಾಯವಾದವುಗಳು ಯಾವವೋ ಶುದ್ಧವಾದವುಗಳು ಯಾವವೋ ಪ್ರೀತಿಕರವಾದವುಗಳು ಯಾವವೋ ಮಾನ್ಯವಾದವುಗಳು ಯಾವವೋ ಅವುಗಳನ್ನು ಮತ್ತು ಸದ್ಗುಣವನ್ನೂ ಸ್ತುತ್ಯವಾದದ್ದನ್ನೂ ಯೊ

1 ತೆಸಲೋನಿಕದವರಿಗೆ 4:6

ಈ ವಿಷಯದಲ್ಲಿ ಯಾರೂ ಅತಿಕ್ರಮಿಸಿ ತನ್ನ ಸಹೋದರನನ್ನು ವಂಚಿಸಬಾರದು; ನಾವು ಮುಂಚೆ ತಿಳಿಸಿ ನಿಮಗೆ ಖಂಡಿತವಾಗಿ ಹೇಳಿದ ಪ್ರಕಾರ ಇವೆಲ್ಲವುಗಳ ವಿಷಯದಲ್ಲಿ ಕರ್ತನು ಮುಯ್ಯಿಗೆ ಮುಯ್ಯಿ ತೀರಿಸುವ ವನಾಗಿದ್ದಾನೆ.

1 ತೆಸಲೋನಿಕದವರಿಗೆ 5:21

ಆದರೆ ಎಲ್ಲವನ್ನು ಪರಿಶೋಧಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ.

ಹೆಬ್ರಿಯರಿಗೆ 13:8

ಯೇಸು ಕ್ರಿಸ್ತನು ನಿನ್ನೆ ಇದ್ದ ಹಾಗೆ ಈ ಹೊತ್ತೂ ಇದ್ದಾನೆ, ನಿರಂತರವೂ ಹಾಗೆಯೇ ಇರುವನು.

Interlinear

Choose Theme