Home Bibles ಆದಿಕಾಂಡ 42:4 · ಕನ್ನಡ ಬೈಬಲ್
ಆದಿಕಾಂಡ 42:4 · ಕನ್ನಡ ಬೈಬಲ್

ಆದರೆ ಯಾಕೋಬನು ಯೋಸೆಫನ ತಮ್ಮನಾದ ಬೆನ್ಯಾವಿಾನ ನಿಗೆ ಕೇಡುಬಂದೀತು ಎಂದು ಹೇಳಿ ಅಣ್ಣಂದಿರ ಸಂಗಡ ಅವನನ್ನು ಕಳುಹಿಸಲಿಲ್ಲ.

Cross references

ಆದಿಕಾಂಡ 3:22

ಇದ ಲ್ಲದೆ ಕರ್ತನಾದ ದೇವರು--ಇಗೋ, ಮನುಷ್ಯನು ಒಳ್ಳೇದರ ಕೆಟ್ಟದರ ಭೇದವನ್ನು ತಿಳಿದು ನಮ್ಮಲ್ಲಿ ಒಬ್ಬನಂತಾದನು; ಈಗ ಅವನು ಕೈಚಾಚಿ ಜೀವವೃಕ್ಷದ ಫಲವನ್ನು ತೆಗೆದು ತಿಂದು ಎಂದೆಂದಿಗೂ ಬದುಕ ಬಾರದು ಅಂದನು.

ಆದಿಕಾಂಡ 11:4

ಅವರು--ಬನ್ನಿರಿ, ಭೂಮಿಯ ಮೇಲೆಲ್ಲಾ ನಾವು ಚದರಿಹೋಗದ ಹಾಗೆ ಆಕಾಶವನ್ನು ಮುಟ್ಟುವ ಒಂದು ಪಟ್ಟಣವನ್ನೂ ಗೋಪುರವನ್ನೂ ನಮಗಾಗಿ ಕಟ್ಟಿಕೊಂಡು ನಾವು ಹೆಸರನ್ನು ಪಡೆಯೋಣ ಅಂದರು;

ಆದಿಕಾಂಡ 33:1

ಯಾಕೋಬನು ಕಣ್ಣೆತ್ತಿ ನೋಡಿದಾಗ ಇಗೋ, ಏಸಾವನು ನಾನೂರು ಮಂದಿ ಮನುಷ್ಯರ ಸಂಗಡ ಬರುತ್ತಿದ್ದನು. ಆಗ ಅವನು ಲೇಯಳಿಗೂ ರಾಹೇಲಳಿಗೂ ಇಬ್ಬರು ದಾಸಿಯರಿಗೂ ಅವರವರ ಮಕ್ಕಳನ್ನು ಒಪ್ಪಿಸಿ ಅವರನ್ನು ಬೇರೆ ಬೇರೆ ಮಾಡಿದನು.

ಆದಿಕಾಂಡ 35:16

ಬೇತೇಲಿನಿಂದ ಅವರು ಪ್ರಯಾಣಮಾಡಿ ಎಫ್ರಾತೂರಿಗೆ ಇನ್ನೂ ಸ್ವಲ್ಪ ದೂರ ಇರುವಾಗ ರಾಹೇಲಳು ಪ್ರಸವವೇದನೆಪಡುತ್ತಾ ಕಷ್ಟಪಟ್ಟಳು.

ಆದಿಕಾಂಡ 42:38

ಆದರೆ ಅವನು--ನನ್ನ ಮಗನು ನಿಮ್ಮ ಸಂಗಡ ಹೋಗಬಾರದು; ಅವನ ಅಣ್ಣನು ಸತ್ತುಹೋಗಿ ಅವನೊಬ್ಬನೇ ಉಳಿದಿದ್ದಾನೆ; ನೀವು ಹೋಗುವ ಮಾರ್ಗದಲ್ಲಿ ಇವನಿಗೆ ಕೇಡು ಬಂದರೆ ಮುದಿ ಪ್ರಾಯದಲ್ಲಿ ನನ್ನನ್ನು ದುಃಖದಿಂದ ಸಮಾಧಿಗೆ ಹೋಗುವಂತೆ ಮಾಡುವಿರಿ ಅಂದನು.

ಆದಿಕಾಂಡ 43:14

ಸರ್ವಶಕ್ತನಾದ ದೇವರು ನಿಮ್ಮ ಬೇರೆ ಸಹೋದರ ನನ್ನೂ ಬೆನ್ಯಾವಿಾನನನ್ನೂ ಕಳುಹಿಸಿ ಕೊಡುವಹಾಗೆ ಆ ಮನುಷ್ಯನು ನಿಮ್ಮ ಮೇಲೆ ಕರುಣೆ ತೋರಿಸುವಂತೆ ಮಾಡಲಿ. ನಾನಂತೂ ಮಕ್ಕಳನ್ನು ಕಳಕೊಂಡವನಾಗಿರಬೇಕಾದರೆ ಹಾಗೆಯೇ ಆಗಲಿ ಅಂದನು.

ಆದಿಕಾಂಡ 43:29

ಆಗ ಅವನು ತನ್ನ ಕಣ್ಣು ಗಳನ್ನೆತ್ತಿ ತನ್ನ ತಾಯಿಯ ಮಗನೂ ತನ್ನ ತಮ್ಮನೂ ಆದ ಬೆನ್ಯಾವಿಾನನನ್ನು ನೋಡಿ--ನೀವು ನನಗೆ ಹೇಳಿದ ನಿಮ್ಮ ತಮ್ಮನು ಇವನೋ ಎಂದು ಹೇಳಿ ಅವನು--ನನ್ನ ಮಗನೇ, ದೇವರು ನಿನಗೆ ಕೃಪಾಳು ವಾಗಿರಲಿ ಅಂದನು.

ಆದಿಕಾಂಡ 44:20

ನಾವು ನಮ್ಮ ಒಡೆಯನಿಗೆ--ನಮಗೆ ಮುದುಕನಾದ ತಂದೆಯೂ ಅವನಿಗೆ ಮುದಿಪ್ರಾಯದಲ್ಲಿ ಹುಟ್ಟಿದ ಚಿಕ್ಕಮಗನೂ ಇದ್ದಾರೆ; ಅವನ ಸಹೋದರನು ಸತ್ತುಹೋಗಿದ್ದಾನೆ. ಆದದರಿಂದ ಅವನೊಬ್ಬನೇ ತನ್ನ ತಾಯಿಗೆ ಉಳಿದಿದ್ದಾನೆ. ಅವನ ತಂದೆಯು ಅವನನ್ನು ಪ್ರೀತಿ ಮಾಡುತ್ತಾನೆ ಎಂದು ಹೇಳಿದೆವು.

ಆದಿಕಾಂಡ 44:27

ಅದಕ್ಕೆ ನಿನ್ನ ದಾಸನಾದ ನನ್ನ ತಂದೆಯು--ನನ್ನ ಹೆಂಡತಿಯು ನನಗೆ ಇಬ್ಬರು ಕುಮಾರರನ್ನು ಹೆತ್ತಳೆಂಬದು ನಿಮಗೆ ತಿಳಿದಿದೆ.

ಆದಿಕಾಂಡ 44:29

(ಈಗ) ನನ್ನ ಬಳಿಯಿಂದ ಇವನನ್ನೂ ತಕ್ಕೊಂಡು ಹೋಗ ಬೇಕೆಂದಿದೀರಿ, ಅವನಿಗೂ ಕೇಡು ಬಂದರೆ ನನ್ನ ಮುದಿ ತಲೆಯನ್ನು ದುಃಖದಿಂದ ಸಮಾಧಿಗೆ ಇಳಿಯ ಮಾಡುವಿರಿ ಎಂದು ಹೇಳಿದನು.

Interlinear

Choose Theme