ನಿಮ್ಮ ತಮ್ಮನನ್ನು ನನ್ನ ಬಳಿಗೆ ಕರತನ್ನಿರಿ. ಆಗ ನಿಮ್ಮ ಮಾತುಗಳು ಸತ್ಯವೆಂದು ದೃಢವಾಗುವವು, ನೀವು ಸಾಯದೆ ಇರುವಿರಿ ಅಂದನು. ಅವರು ಹಾಗೆಯೇ ಮಾಡಿದರು.
Cross references
ಹಾಗೆಯೇ ನೋಹನು ಮಾಡಿದನು; ದೇವರು ಅವನಿಗೆ ಅಪ್ಪಣೆಕೊಟ್ಟ ಪ್ರಕಾರವೇ ಅವನು ಮಾಡಿದನು.
ನೀವು ಪರೀಕ್ಷಿಸಲ್ಪಡುವದು ಹೇಗಂದರೆ--ನಿಮ್ಮ ತಮ್ಮನನ್ನು ಇಲ್ಲಿಗೆ ತಾರದ ಹೊರತು ಫರೋಹನ ಜೀವದಾಣೆ ನೀವು ಇಲ್ಲಿಂದ ಹೊರಗೆ ಹೋಗಬಾರದು.
ಆಗ ಅವರು ತಮ್ಮ ಧಾನ್ಯವನ್ನು ಕತ್ತೆಗಳ ಮೇಲೆ ಹೇರಿಕೊಂಡು ಅಲ್ಲಿಂದ ಹೋಗಿಬಿಟ್ಟರು.
ನಿಮ್ಮ ಚಿಕ್ಕ ತಮ್ಮನನ್ನು ನನ್ನ ಬಳಿಗೆ ತನ್ನಿರಿ, ಆಗ ನೀವು ಗೂಢಚಾರರಲ್ಲವೆಂದೂ ಯಥಾರ್ಥ ರೆಂದೂ ತಿಳುಕೊಂಡು ನಿಮ್ಮ ಸಹೋದರನನ್ನು ನಿಮಗೆ ಒಪ್ಪಿಸುವೆನು. ಆಗ ನೀವು ದೇಶದಲ್ಲಿ ವ್ಯಾಪಾರ ಮಾಡಬಹುದು ಎಂದು ಹೇಳಿದನು ಅಂದರು.
ಆಗ ಯೆಹೂದನು ಅವನಿಗೆ--ಆ ಮನುಷ್ಯನು ನಮಗೆ--ನಿಮ್ಮ ತಮ್ಮನನ್ನು ನಿಮ್ಮ ಸಂಗಡ ಕರಕೊಂಡುಬಾರದ ಹೊರತು ನೀವು ನನ್ನ ಮುಖ ವನ್ನು ನೋಡಬಾರದೆಂದು ನಮಗೆ ಖಂಡಿತವಾಗಿ ಹೇಳಿದ್ದಾನೆ.
ಅವನನ್ನು ಕಳುಹಿಸದೆ ಹೋದರೆ ನಾವು ಹೋಗುವದಿಲ್ಲ; ಯಾಕಂದರೆ ಆ ಮನುಷ್ಯನು--ನಿಮ್ಮ ತಮ್ಮನು ನಿಮ್ಮ ಸಂಗಡ ಇಲ್ಲದಿದ್ದರೆ ನನ್ನ ಮುಖವನ್ನು ನೋಡಬಾರದು ಎಂದು ನಮಗೆ ಹೇಳಿದ್ದಾನೆ ಅಂದನು.
ಆಗ ಅವರು ಯೋಸೇಫನ ಮನೆಯ ಉಗ್ರಾಣಿಕನ ಬಳಿಗೆ ಹೋಗಿ ಮನೆಯ ಬಾಗಲಿನ ಮುಂದೆ ಅವನ ಸಂಗಡ ಮಾತನಾಡಿ--
ಅದಕ್ಕೆ ನೀನು ನಿನ್ನ ದಾಸರಿಗೆ--ನಾನು ಅವನನ್ನು ನೋಡುವ ಹಾಗೆ ಅವನನ್ನು ನನ್ನ ಬಳಿಗೆ ಕರಕೊಂಡು ಬನ್ನಿರಿ ಎಂದು ಹೇಳಿದಿಯಲ್ಲಾ,
ಆಗ ನೀನು ನಿನ್ನ ದಾಸರಿಗೆ--ನಿಮ್ಮ ತಮ್ಮನು ನಿಮ್ಮ ಸಂಗಡ ಇಲ್ಲಿಗೆ ಬಾರದಿದ್ದರೆ ಇನ್ನು ಮೇಲೆ ನನ್ನ ಮುಖವನ್ನು ನೋಡಬಾರದು ಎಂದು ನೀನು ಹೇಳಿದಿ.
ಆತನ ತಾಯಿಯು ಸೇವಕರಿಗೆ--ಆತನು ನಿಮಗೆ ಏನು ಹೇಳುತ್ತಾನೋ ಅದನ್ನು ಮಾಡಿರಿ ಅಂದಳು.