Home Bibles ಆದಿಕಾಂಡ 41:57 · ಕನ್ನಡ ಬೈಬಲ್
ಆದಿಕಾಂಡ 41:57 · ಕನ್ನಡ ಬೈಬಲ್

ಇದಲ್ಲದೆ ಭೂಮಿಯ ಮೇಲೆಲ್ಲಾ ಬರವು ಕಠಿಣವಾಗಿದ್ದದರಿಂದ ಎಲ್ಲಾ ದೇಶದವರು ಯೋಸೇಫನಿಂದ ಧಾನ್ಯವನ್ನು ಕೊಂಡುಕೊಳ್ಳುವದಕ್ಕೆ ಐಗುಪ್ತಕ್ಕೆ ಬಂದರು.

Cross references

ಆದಿಕಾಂಡ 12:10

ಆಗ ಆ ದೇಶದಲ್ಲಿ ಬರ ಉಂಟಾದದ್ದರಿಂದ ಅಬ್ರಾಮನು ಐಗುಪ್ತದಲ್ಲಿ ಪ್ರವಾಸಿಯಾಗಿರುವದಕ್ಕೆ ಇಳಿದು ಹೋದನು. ಯಾಕಂದರೆ ಬರವು ಆ ದೇಶದಲ್ಲಿ ಘೋರವಾಗಿತ್ತು.

ಆದಿಕಾಂಡ 41:54

ಯೋಸೇಫನು ಹೇಳಿದಂತೆ ಬರುವದಕ್ಕಿದ್ದ ಬರಗಾಲದ ಏಳು ವರುಷ ಗಳು ಆರಂಭವಾದವು. ಆಗ ಎಲ್ಲಾ ದೇಶಗಳಲ್ಲಿ ಬರವಿತ್ತು. ಆದರೆ ಐಗುಪ್ತದೇಶದಲ್ಲೆಲ್ಲಾ ಆಹಾರ ವಿತ್ತು.

ಆದಿಕಾಂಡ 41:56

ಭೂಮುಖದ ಮೇಲೆಲ್ಲಾ ಬರವಿತ್ತು. ಯೋಸೇಫನು ಧಾನ್ಯವಿದ್ದ ಕಣಜಗಳನ್ನೆಲ್ಲಾ ತೆರೆದು ಐಗುಪ್ತ್ಯರಿಗೆ ಮಾರಿದನು. ಆಗ ಬರವು ಐಗುಪ್ತದೇಶದಲ್ಲಿ ಕಠಿಣವಾಗಿತ್ತು.ಇದಲ್ಲದೆ ಭೂಮಿಯ ಮೇಲೆಲ್ಲಾ ಬರವು ಕಠಿಣವಾಗಿದ್ದದರಿಂದ ಎಲ್ಲಾ ದೇಶದವರು ಯೋಸೇಫನಿಂದ ಧಾನ್ಯವನ್ನು ಕೊಂಡುಕೊಳ್ಳುವದಕ್ಕೆ ಐಗುಪ್ತಕ್ಕೆ ಬಂದರು.

ಆದಿಕಾಂಡ 42:1

ಐಗುಪ್ತದಲ್ಲಿ ಧಾನ್ಯ ಉಂಟೆಂದುಯಾಕೋಬನು ತಿಳಿದಾಗ ಅವನು ತನ್ನ ಕುಮಾರರಿಗೆನೀವು ಒಬ್ಬರನ್ನೊಬ್ಬರು ನೋಡಿಕೊಳ್ಳು ವದೇನು ಅಂದನು.

ಆದಿಕಾಂಡ 42:5

ಕಾನಾನ್‌ ದೇಶದಲ್ಲಿ ಬರವಿದ್ದದರಿಂದ ಧಾನ್ಯ ವನ್ನು ಕೊಂಡುಕೊಳ್ಳುವದಕ್ಕಾಗಿ ಬರುವವರೊಂದಿಗೆ ಇಸ್ರಾಯೇಲನ ಕುಮಾರರು ಬಂದರು.

ಆದಿಕಾಂಡ 42:6

ಆಗ ಯೋಸೇಫನು ದೇಶದ ಮೇಲೆಲ್ಲಾ ಅಧಿಪತಿಯಾ ಗಿದ್ದನು. ದೇಶದ ಜನರಿಗೆಲ್ಲಾ ಧಾನ್ಯವನ್ನು ಮಾರು ವವನು ಅವನೇ ಆಗಿದ್ದನು. ಹೀಗಿರಲಾಗಿ ಯೋಸೇಫನ ಸಹೋದರರು ಬಂದು ತಮ್ಮ ಮುಖಗಳನ್ನು ನೆಲದ ಮಟ್ಟಿಗೂ ತಗ್ಗಿಸಿ ಅವನಿಗೆ ಅಡ್ಡಬಿದ್ದರು.

ಆದಿಕಾಂಡ 43:1

ದೇಶದಲ್ಲಿ ಬರವು ಘೋರವಾಗಿತ್ತು.

ಆದಿಕಾಂಡ 47:14

ಆಗ ಯೋಸೇಫನು ಐಗುಪ್ತದೇಶದಲ್ಲಿಯೂ ಕಾನಾನ್‌ದೇಶದಲ್ಲಿಯೂ ಜನರು ಕೊಂಡುಕೊಂಡ ಧಾನ್ಯಕ್ಕೆ ಬದಲಾಗಿ ಕೊಟ್ಟ ಹಣವನ್ನೆಲ್ಲಾ ಕೂಡಿಸಿ ಅದನ್ನು ಫರೋಹನ ಮನೆಗೆ ತಂದನು.

ಆದಿಕಾಂಡ 50:20

ನೀವು ನನಗೆ ವಿರೋಧವಾಗಿ ಕೇಡನ್ನು ಆಲೋಚಿ ಸಿದಿರಿ; ಆದರೆ ದೇವರು ಈಗ ಮಾಡಿದ ಹಾಗೆ ಬಹುಜನರನ್ನು ಬದುಕಿಸುವದಕ್ಕೋಸ್ಕರ ಮೇಲಿಗಾಗಿ ಆಲೋಚನೆ ಮಾಡಿದನು.

ದ್ವಿತೀಯೋಪದೇಶಕಾಂಡ 9:28

ನಮ್ಮನ್ನು ಎಲ್ಲಿಂದ ಹೊರಗೆ ಬರಮಾಡಿದಿಯೋ ಆ ದೇಶವು--ಕರ್ತನು ಅವರಿಗೆ ಹೇಳಿದ ದೇಶದಲ್ಲಿ ಅವರನ್ನು ಬರಮಾಡ ಲಾರದೆ ಇದ್ದದ್ದರಿಂದಲೂ ಅವರನ್ನು ಹಗೆಮಾಡಿದ್ದ ರಿಂದಲೂ ಅರಣ್ಯದಲ್ಲಿ ಅವರನ್ನು ಕೊಂದುಹಾಕುವ ಹಾಗೆ ಅವರನ್ನು ಹೊರಗೆ ಬರಮಾಡಿದನೆಂದು ಹೇಳಬಾರದು.ಆದಾಗ್ಯೂ ನೀನು ನಿನ್ನ ದೊಡ್ಡ ಶಕ್ತಿಯಿಂದಲೂ ಚಾಚಿದ ನಿನ್ನ ಕೈಯಿಂದಲೂ ಹೊರಗೆ ಬರಮಾಡಿದ ನಿನ್ನ ಜನವೂ ಸ್ವಾಸ್ತ್ಯವೂ ಇವರೇ ಎಂದು ಹೇಳಿದೆನು.

ಕೀರ್ತನೆಗಳು 105:16

ದೇಶದ ಮೇಲೆ ಬರವನ್ನು ಬರಮಾಡಿ ಆಹಾರ ವೆಂಬ ಊರುಕೋಲನ್ನು ಮುರಿದನು.

Interlinear

Choose Theme