ಚಿಲ್ಲಾ ಸಹ ತೂಬಲ್‌ಕಾಯಿನನನ್ನು ಹೆತ್ತಳು; ಅವನು ಹಿತ್ತಾಳೆ ಕಬ್ಬಿಣ ಕೆಲಸದ ಕಲೆಯಿದ್ದವರೆಲ್ಲರಿಗೆ ಶಿಕ್ಷಣ ಕೊಡುವವನಾಗಿದ್ದನು. ತೂಬಲ್‌ಕಾಯಿನನ ಸಹೋದರಿ ನಯಮಾ ಎಂಬವಳು.
Cross references
ನೀವು ಅವರಿಂದ ತೆಗೆದುಕೊಳ್ಳಬೇಕಾದ ಕಾಣಿಕೆಗಳು: ಚಿನ್ನ ಬೆಳ್ಳಿ ತಾಮ್ರ
ಬಂಗಾರವನ್ನೂ ಬೆಳ್ಳಿಯನ್ನೂ ಹಿತ್ತಾಳೆಯನ್ನೂ ಕಬ್ಬಿಣವನ್ನೂ ತವರವನ್ನೂ ಸೀಸವನ್ನೂ ಹೊರತು
ನೀನು ಕೊರತೆಯಿಲ್ಲದೆ ರೊಟ್ಟಿ ತಿನ್ನುವ ಆ ದೇಶದಲ್ಲಿ ಯಾವದರ ಕೊರತೆ ನಿನಗೆ ಆಗದು; ಅದರ ಕಲ್ಲುಗಳು ಕಬ್ಬಿಣವಾಗಿಯೂ ಅದರ ಬೆಟ್ಟ ಗಳೊಳಗಿಂದ ತಾಮ್ರವನ್ನು ಅಗಿಯಬಹುದಾದದ್ದೂ ಆಗಿರುವ ದೇಶ.
ಕಬ್ಬಿಣವೂ ತಾಮ್ರವೂ ನಿನ್ನ ಪಾದರಕ್ಷೆಯಾಗಿರಲಿ. ನಿನ್ನ ದಿವಸಗಳ ಪ್ರಕಾರ ನಿನ್ನ ಬಲವು ಇರಲಿ ಎಂದು ಹೇಳಿದನು.
ಆದದರಿಂದ ಬಂಗಾರ ದಲ್ಲಿಯೂ ಬೆಳ್ಳಿಯಲ್ಲಿಯೂ ತಾಮ್ರದಲ್ಲಿಯೂ ಕಬ್ಬಿಣ ದಲ್ಲಿಯೂ ರಕ್ತವರ್ಣ ಲೋಹಿತವರ್ಣ ನೀಲವರ್ಣ ಗಳಲ್ಲಿಯೂ ಕೆಲಸವನ್ನು ಮಾಡಲು ಜ್ಞಾನವುಳ್ಳವನಾ ಗಿಯೂ ನನ್ನ ತಂದೆಯಾದ ದಾವೀದನು ಸಿದ್ಧ ಮಾಡಿದ ಯೆಹೂದದಲ್ಲಿಯೂ ಯೆರೂಸಲೇಮಿನಲ್ಲಿಯೂ ನನ್ನ ಬಳಿಯಲ್ಲಿರುವ ಗ್ರಹಿಕೆಯುಳ್ಳವರ ಸಂಗಡ ಕೆತ್ತಲು ತಿಳುವಳಿಕೆಯುಳ್ಳವನಾಗಿಯೂ ಇರುವವನನ್ನು ನನ್ನ ಬಳಿಗೆ ಕಳುಹಿಸು.