Home Bibles ☰ Books ಆದಿಕಾಂಡ 4:12 · ಕನ್ನಡ ಬೈಬಲ್
ಆದಿಕಾಂಡ 4:12 · ಕನ್ನಡ ಬೈಬಲ್

ನೀನು ಭೂಮಿಯನ್ನು ವ್ಯವಸಾಯಮಾಡುವಾಗ ಇನ್ನು ಮೇಲೆ ಅದು ತನ್ನ ಸಾರವನ್ನು ಕೊಡುವದಿಲ್ಲ. ನೀನು ಭೂಮಿಯಲ್ಲಿ ಅಲೆದಾಡುವವನಾಗಿಯೂ ತಿರುಗಾಡು ವವನಾಗಿಯೂ ಇರುವಿ ಅಂದನು.

Cross references

ಆದಿಕಾಂಡ 3:17

ಆದಾಮನಿಗೆ ಆತನು--ನೀನು ನಿನ್ನ ಹೆಂಡತಿಯ ಮಾತನ್ನು ಕೇಳಿ ತಿನ್ನಬಾರದೆಂದು ನಾನು ನಿನ ಆಜ್ಞಾಪಿಸಿದ ಮರದ ಫಲವನ್ನು ತಿಂದಕಾರಣ ನಿನ್ನ ನಿಮಿತ್ತ ಭೂಮಿಯು ಶಪಿಸಲ್ಪಟ್ಟಿದೆ; ನಿನ್ನ ಜೀವನದ ದಿನಗಳಲ್ಲೆಲ್ಲಾ ದುಃಖದಲ್ಲೇ ನೀನು ಅದರ ಫಲವನ್ನು ತಿನ್ನುವಿ.

ಆದಿಕಾಂಡ 4:14

ಇಗೋ, ನೀನು ಈ ದಿನ ನನ್ನನ್ನು ಈ ಸ್ಥಳದಿಂದ ಹೊರಡಿಸಿದ್ದೀ, ನಿನ್ನ ಮುಖಕ್ಕೆ ನಾನು ಮರೆಯಾಗಿರಬೇಕು; ಭೂಮಿಯಲ್ಲಿ ಅಲೆಯು ವವನೂ ತಿರುಗಾಡುವವನೂ ಆಗಿರಬೇಕು; ಇದಲ್ಲದೆ ನನ್ನನ್ನು ಕಂಡವರೆಲ್ಲಾ ಕೊಲ್ಲುವರು ಅಂದನು.

ಲೇವ್ಯಕಾಂಡ 26:20

ಆಗ ನಿಮ್ಮ ಶಕ್ತಿಯು ವ್ಯರ್ಥವಾಗಿ ಮುಗಿದು ಹೋಗುವದು. ನಿಮ್ಮ ಭೂಮಿಯು ತನ್ನ ಬೆಳೆಯನ್ನೂ ಮರಗಳ ಫಲಗಳನ್ನೂ ಕೊಡದೆ ಇರುವದು.

ಲೇವ್ಯಕಾಂಡ 26:36

ನಿಮ್ಮಲ್ಲಿ ಯಾರಾರು ಉಳಿದು ಶತ್ರುಗಳ ದೇಶದ ಲ್ಲಿರುವರೋ ಅವರ ಹೃದಯಗಳಲ್ಲಿ ಅಧೈರ್ಯವನ್ನು ಹುಟ್ಟಿಸುವೆನು; ಬಡಿದಾಡುವ ಎಲೆಯ ಶಬ್ದವು ಅವರನ್ನು ಓಡಿಸುವದು, ಕತ್ತಿಗೆ ಓಡಿಹೋದ ಹಾಗೆ ಓಡಿಹೋಗು ವರು; ಓಡಿಸುವವನಿಲ್ಲದೆ ಬೀಳುವರು.

ದ್ವಿತೀಯೋಪದೇಶಕಾಂಡ 28:23

ನಿನ್ನ ತಲೆಯ ಮೇಲಿರುವ ಆಕಾಶವು ತಾಮ್ರ ವಾಗಿಯೂ ನಿನ್ನ ಕೆಳಗಿರುವ ಭೂಮಿಯು ಕಬ್ಬಿಣ ವಾಗಿಯೂ ಇರುವವು.

ದ್ವಿತೀಯೋಪದೇಶಕಾಂಡ 28:65

ಈ ಜನಾಂಗಗಳಲ್ಲಿ ನಿನಗೆ ನೆಮ್ಮದಿ ಇರುವದಿಲ್ಲ; ನಿನ್ನ ಅಂಗಾಲಿಗೆ ವಿಶ್ರಾಂತಿ ಆಗುವದಿಲ್ಲ; ಅಲ್ಲಿ ಕರ್ತನು ನಿನಗೆ ನಡುಗುವ ಹೃದಯವನ್ನೂ ಕ್ಷೀಣಿಸುವ ಕಣ್ಣುಗಳನ್ನೂ ಕುಗ್ಗಿದ ಮನಸ್ಸನ್ನೂ ಕೊಡು ವನು.

ಕೀರ್ತನೆಗಳು 107:34

ಫಲ ವುಳ್ಳ ಭೂಮಿಯನ್ನು ಬಂಜರಾಗಿಯೂ ಅದರ ನಿವಾಸಿ ಗಳ ಕೆಟ್ಟತನಕ್ಕೋಸ್ಕರ ಮಾರ್ಪಡಿಸುತ್ತಾನೆ.

ಕೀರ್ತನೆಗಳು 109:10

ಅವನ ಮಕ್ಕಳು ಅಲೆದು ಅಲೆದು ಭಿಕ್ಷೆಬೇಡಿ ತಮ್ಮ ಹಾಳು ಸ್ಥಳಗಳೊಳಗಿಂದ ರೊಟ್ಟಿಯನ್ನು ಹುಡುಕಲಿ.

ಸಾಮೇತಿಗಳು 28:17

ಒಬ್ಬ ಮನುಷ್ಯನ ರಕ್ತಕ್ಕೆ ಬಲಾತ್ಕಾರ ಮಾಡುವವನು ಕುಣಿಗೆ ಹಾರುವನು; ಅವನನ್ನು ಯಾವನೂ ತಡೆಯದಿರಲಿ.

ಯೆರೆಮಿಯ 20:3

ಆಗ ಯೆರೆವಿಾಯನು ಅವರಿಗೆ ಹೇಳಿದ್ದೇನಂ ದರೆ--ಚಿದ್ಕೀಯನಿಗೆ ಹೀಗೆ ಹೇಳಿರಿ--

ಹೊಶೇಯ 9:17

ನನ್ನ ದೇವರು ಅವರನ್ನು ತಳ್ಳಿಬಿಡುವನು; ಅವರು ಆತನಿಗೆ ಕಿವಿಗೊಡಲಿಲ್ಲ; ಅವರು ಜನಾಂಗಗಳಲ್ಲಿ ಅಲೆದಾಡುವವರಾಗಿರುವರು.

ರೋಮಾಪುರದವರಿಗೆ 8:20

ಸೃಷ್ಟಿಯು ವ್ಯರ್ಥತ್ವಕ್ಕೆ ಒಳಗಾದದ್ದು ಸ್ವೇಚ್ಛೆಯಿಂದಲ್ಲ, ಅದನ್ನು ಒಳಪಡಿಸಿದಾತನ ಮುಖಾಂ ತರ ನಿರೀಕ್ಷೆಯಲ್ಲಿಯೇ.

Interlinear

Choose Theme