Home Bibles ಆದಿಕಾಂಡ 38:5 · ಕನ್ನಡ ಬೈಬಲ್
ಆದಿಕಾಂಡ 38:5 · ಕನ್ನಡ ಬೈಬಲ್

ಆಕೆಯು ಮತ್ತೊಂದು ಸಾರಿ ಮಗನನ್ನು ಹೆತ್ತು ಅವನಿಗೆ ಶೇಲಹ ಎಂದು ಹೆಸರಿಟ್ಟಳು. ಆಕೆಯು ಅವನನ್ನು ಹೆತ್ತಾಗ ಯೆಹೂದನು ಕಜೀಬೂರಿನ ಲ್ಲಿದ್ದನು.

Cross references

ಆದಿಕಾಂಡ 38:11

ಆಗ ಯೆಹೂದನು ತನ್ನ ಸೊಸೆಯಾದ ತಾಮಾರ ಳಿಗೆ--ನನ್ನ ಮಗನಾದ ಶೇಲಹನು ದೊಡ್ಡವನಾಗುವ ವರೆಗೆ ವಿಧವೆಯಾಗಿದ್ದು ನಿನ್ನ ತಂದೆಯ ಮನೆಯಲ್ಲಿ ಇರು ಅಂದನು. ಯಾಕಂದರೆ ಇವನು ಸಹ ತನ್ನ ಸಹೋದರರ ಹಾಗೆ ಸತ್ತಾನೆಂದು ಅಂದುಕೊಂಡನು. ತಾಮಾರಳು ಹೋಗಿ ತನ್ನ ತಂದೆಯ ಮನೆಯಲ್ಲಿ ವಾಸಮಾಡಿದಳು.

ಆದಿಕಾಂಡ 38:26

ಆಗ ಯೆಹೂದನು ಅವುಗಳನ್ನು ಗುರುತಿಸಿ--ಆಕೆಯು ನನಗಿಂತ ನೀತಿವಂತಳು, ಯಾಕಂದರೆ ನಾನು ನನ್ನ ಮಗನಾದ ಶೇಲಹನಿಗೆ ಅವಳನ್ನು ಕೊಡಲಿಲ್ಲ ಅಂದನು. ಅವನು ಮತ್ತೆ ಆಕೆಯನ್ನು ಅರಿಯಲಿಲ್ಲ.

ಆದಿಕಾಂಡ 46:12

ಯೆಹೂದನ ಮಕ್ಕಳು: ಏರ್‌ ಓನಾನ್‌ ಶೇಲಾಹ ಪೆರೆಚ್‌ ಜೆರಹ. ಆದರೆ ಏರನೂ ಓನಾನನೂ ಕಾನಾನ್‌ ದೇಶದಲ್ಲಿ ಸತ್ತರು. ಪೆರೆಚನ ಮಕ್ಕಳು: ಹೆಚ್ರೋನ್‌ ಹಾಮೂಲ್‌ ಎಂಬವರು.

ಅಂಕೆಗಳ ಪುಸ್ತಕ 26:19

ಯೆಹೂದನ ಕುಮಾರರು: ಏರನೂ ಓನಾನನೂ; ಆದರೆ ಏರನೂ ಓನಾನನೂ ಕಾನಾನ್‌ ದೇಶದಲ್ಲಿ ಸತ್ತರು.

ಅಂಕೆಗಳ ಪುಸ್ತಕ 26:20

ಕುಟುಂಬಗಳ ಪ್ರಕಾರ ಯೆಹೂದನ ಕುಮಾರರು; ಶೇಲಹನಿಂದ ಶೇಲಹ್ಯರ ಕುಟುಂಬ;

1 ದಿನವೃತ್ತಾಂತ 2:3

ಯೆಹೂದನ ಮಕ್ಕಳು -- ಏರನು, ಓನಾನನು, ಶೇಲಾಹನು ಈ ಮೂವರು ಅವನಿಗೆ ಶೂನನ ಮಗ ಳಾದ ಕಾನಾನ್‌ ದೇಶದವಳಿಂದ ಹುಟ್ಟಿದರು. ಆದರೆ ಯೆಹೂದನ ಚೊಚ್ಚಲ ಮಗನಾದ ಏರನು ಕರ್ತನ ಸಮ್ಮುಖದಲ್ಲಿ ಕೆಟ್ಟವನಾದದರಿಂದ ಆತನು ಅವನನ್ನು ಕೊಂದುಹಾಕಿದನು.

1 ದಿನವೃತ್ತಾಂತ 4:21

ಯೆಹೂದನ ಮಗನಾದ ಶೇಲನ ಕುಮಾರರು --ಲೇಕಾಹ್ಯದ ತಂದೆಯಾದ ಏರನು, ಮರೇಷದ ತಂದೆಯಾದ ಲದ್ದನು, ಬೇತಪ್ಬೇವನ ಮನೆಯವರಾಗಿ ರುವ ನಾರುಗಳಿಂದ ನಯವಾದ ಕೆಲಸಮಾಡಿದವರ ಮನೆಯ ಸಂತತಿಗಳು.

Interlinear

Choose Theme