Home Bibles ಆದಿಕಾಂಡ 38:29 · ಕನ್ನಡ ಬೈಬಲ್
ಆದಿಕಾಂಡ 38:29 · ಕನ್ನಡ ಬೈಬಲ್

ಆ ಮಗುವು ತನ್ನ ಕೈಯನ್ನು ಹಿಂದಕ್ಕೆ ಎಳೆದಾಗ ಇಗೋ, ಅವನ ಸಹೋದರನು ಹೊರಗೆ ಬಂದನು. ಆಗ ಅವಳು--ನೀನು ಛೇದಿಸಿದ್ದೇನು? ಈ ದೋಷವು ನಿನ್ನ ಮೇಲೆ ಇರಲಿ ಅಂದಳು.ಹೀಗೆ ಅವನಿಗೆ ಪೆರೆಚ್‌ ಎಂದು ಹೆಸರಾಯಿತು. ತರುವಾಯ ತನ್ನ ಕೈಯಲ್ಲಿ ಕೆಂಪು ನೂಲು ಇದ್ದ ಅವನ ಸಹೋದರನು ಹೊರಗೆ ಬಂದನು. ಅವನಿಗೆ ಜೆರಹ ಎಂದು ಹೆಸರಾಯಿತು.

Cross references

ಆದಿಕಾಂಡ 46:12

ಯೆಹೂದನ ಮಕ್ಕಳು: ಏರ್‌ ಓನಾನ್‌ ಶೇಲಾಹ ಪೆರೆಚ್‌ ಜೆರಹ. ಆದರೆ ಏರನೂ ಓನಾನನೂ ಕಾನಾನ್‌ ದೇಶದಲ್ಲಿ ಸತ್ತರು. ಪೆರೆಚನ ಮಕ್ಕಳು: ಹೆಚ್ರೋನ್‌ ಹಾಮೂಲ್‌ ಎಂಬವರು.

ಅಂಕೆಗಳ ಪುಸ್ತಕ 26:20

ಕುಟುಂಬಗಳ ಪ್ರಕಾರ ಯೆಹೂದನ ಕುಮಾರರು; ಶೇಲಹನಿಂದ ಶೇಲಹ್ಯರ ಕುಟುಂಬ;

ರೂತ 4:12

ಈ ಹುಡುಗಿಯಿಂದ ಕರ್ತನು ನಿನಗೆ ಕೊಡುವ ಸಂತಾನದಿಂದ ನಿನ್ನ ಮನೆಯೂ ತಾಮರಳು ಯೂದ ನಿಗೆ ಹೆತ್ತ ಪೆರೆಚನ ಮನೆಯ ಹಾಗೆಯೇ ಆಗಲಿ ಅಂದರು.

1 ದಿನವೃತ್ತಾಂತ 2:4

ಅವನ ಸೊಸೆಯಾದ ತಾಮಾ ರಳು ಅವನಿಗೆ ಪೆರೆಚನನ್ನೂ, ಜೆರಹನನ್ನೂ ಹೆತ್ತಳು. ಯೆಹೂದನ ಕುಮಾರರೆಲ್ಲರೂ ಐದು ಮಂದಿ.

1 ದಿನವೃತ್ತಾಂತ 9:4

ಊತೈನ ಮಗನಾದ ಅವ್ಮೆಾಹೂ ದನು; ಇವನು ಒಮ್ರಿಯ ಮಗನು; ಇವನು ಇಮ್ರಿಯ ಮಗನು; ಇವನು ಬಾನೀಯನ ಮಗನು; ಇವನು ಯೆಹೂದನ ಮಗನಾದ ಪೆರೆಚನ ಸಂತಾನದವನು.

ನೆಹೆಮ್ಯ 11:4

ಯೆರೂಸಲೇಮಿನೊಳಗೆ ಯೂದನ ಮಕ್ಕಳಲ್ಲಿಯೂ ಬೆನ್ಯಾವಿಾನನ ಮಕ್ಕಳಲ್ಲಿಯೂ ಕೆಲ ವರು ವಾಸವಾಗಿದ್ದರು.

ನೆಹೆಮ್ಯ 11:6

ಯೆರೂ ಸಲೇಮಿನಲ್ಲಿ ವಾಸವಾಗಿರುವ ಪೆರೆಚನ ಕುಮಾರರೆಲ್ಲಾ ನಾನೂರ ಅರವತ್ತೆಂಟು ಮಂದಿ. ಇವರು ಪರಾಕ್ರಮಶಾಲಿಗಳು.

ಮತ್ತಾಯ 1:3

ಯೂದನಿಂದ ತಾಮಾರಳಲ್ಲಿ ಪೆರೆಚನೂ ಜೆರಹನೂ ಹುಟ್ಟಿದರು; ಪೆರೆಚನಿಂದ ಹೆಚ್ರೋಮನು ಹುಟ್ಟಿದನು; ಹೆಚ್ರೋಮನಿಂದ ಅರಾಮನು ಹುಟ್ಟಿ ದನು;

ಲೂಕ 3:33

ಇವನು ಅಮ್ಮಿನಾದಾಬನ ಮಗನು; ಇವನು ಅರಾಮನ ಮಗನು; ಇವನು ಎಸ್ರೋಮನ ಮಗನು; ಇವನು ಪೆರೆಸನ ಮಗನು; ಇವನು ಯೂದನ ಮಗನು;

Interlinear

Choose Theme