Home Bibles ಆದಿಕಾಂಡ 38:20 · ಕನ್ನಡ ಬೈಬಲ್
ಆದಿಕಾಂಡ 38:20 · ಕನ್ನಡ ಬೈಬಲ್

ಯೆಹೂದನು ಆ ಸ್ತ್ರೀಯ ಕೈಯಿಂದ ಈಡು ತಕ್ಕೊಳ್ಳುವದಕ್ಕೆ ತನ್ನ ಸ್ನೇಹಿತನಾದ ಅದುಲ್ಲಾಮ್ಯನ ಕೈಯಿಂದ ಮೇಕೆಯ ಮರಿಯನ್ನು ಕಳುಹಿಸಿದಾಗ ಆಕೆಯು ಸಿಗಲಿಲ್ಲ.

Cross references

ಆದಿಕಾಂಡ 20:9

ಅಬೀಮೆಲೆಕನು ಅಬ್ರಹಾ ಮನನ್ನು ಕರೆದು ಅವನಿಗೆ--ನೀನು ನಮಗೆ ಮಾಡಿ ದ್ದೇನು? ನೀನು ನನ್ನ ಮೇಲೆಯೂ ನನ್ನ ರಾಜ್ಯದ ಮೇಲೆಯೂ ದೊಡ್ಡ ಪಾಪವನ್ನು ಬರಮಾಡುವಂತೆ ನಾನು ನಿನಗೆ ಏನು ಅಪರಾಧ ಮಾಡಿದ್ದೇನೆ? ನನಗೆ ನೀನು ಮಾಡಬಾರದ ಕಾರ್ಯಗಳನ್ನು ಮಾಡಿದ್ದೀ ಅಂದನು.

ಲೇವ್ಯಕಾಂಡ 19:17

ನಿನ್ನ ಹೃದಯ ದಲ್ಲಿ ನಿನ್ನ ಸಹೋದರನನ್ನು ದ್ವೇಷಿಸಬೇಡ; ಹೇಗಾ ದರೂ ನಿನ್ನ ನೆರೆಯವನ ಪಾಪವು ನಿನ್ನ ಮೇಲೆ ಬಾರದಂತೆ ಅವನನ್ನು ತಪ್ಪದೆ ಗದರಿಸು.

ನ್ಯಾಯಾಧಿಪತಿಗಳು 14:20

ಅವನು ಕೋಪಗೊಂಡು ತನ್ನ ತಂದೆಯ ಮನೆಗೆ ಹೊರಟು ಹೋದನು. ಆದರೆ ಸಂಸೋನನ ಹೆಂಡತಿಯು ಅವನ ಸ್ನೇಹಿತನಾಗಿದ್ದ ಒಬ್ಬನಿಗೆ ಕೊಡಲ್ಪಟ್ಟಳು.

2 ಸಮುವೇಲ 13:3

ಆದರೆ ಅಮ್ನೋನನಿಗೆ ದಾವೀದನ ಸಹೋದರನಾಗಿರುವ ಶಿಮ್ಮನ ಮಗನಾದ ಯೋನಾದಾಬನೆಂಬ ಒಬ್ಬ ಸ್ನೇಹಿತನಿದ್ದನು. ಈ ಯೋನಾದಾಬನು ಮಹಾ ಕುಯುಕ್ತಿಯುಳ್ಳವನಾಗಿ ದ್ದನು.

ಲೂಕ 23:12

ಇದಲ್ಲದೆ ಪಿಲಾತನು ಹೆರೋದನು ಅದೇ ದಿನದಲ್ಲಿ ಒಬ್ಬರಿಗೊಬ್ಬರು ಸ್ನೇಹಿತರಾದರು; ಯಾಕಂ ದರೆ ಅವರಲ್ಲಿ ಮೊದಲು ಹಗೆತನವಿತ್ತು.

Interlinear

Choose Theme