Home Bibles ಆದಿಕಾಂಡ 37:24 · ಕನ್ನಡ ಬೈಬಲ್
ಆದಿಕಾಂಡ 37:24 · ಕನ್ನಡ ಬೈಬಲ್

ಅವನನ್ನು ತಕ್ಕೊಂಡು ತಗ್ಗಿನಲ್ಲಿ ಹಾಕಿದರು; ಆ ತಗ್ಗು ನೀರಿಲ್ಲದೆ ಬರಿದಾಗಿತ್ತು.

Cross references

ಆದಿಕಾಂಡ 42:21

ಆಗ ಅವರು--ನಿಶ್ಚಯವಾಗಿ ನಮ್ಮ ಸಹೋದರನ ಅಪರಾಧವು ನಮ್ಮ ಮೇಲೆ ಇದೆ. ಅವನು ನಮ್ಮನ್ನು ಬೇಡಿಕೊಂಡಾಗ ಅವನ ಪ್ರಾಣ ಸಂಕಟವನ್ನು ನೋಡಿಯೂ ಕೇಳದೆ ಹೋದೆವು. ಆದಕಾರಣ ಈ ಸಂಕಟವು ನಮ್ಮ ಮೇಲೆ ಬಂದಿತು ಎಂದು ಅಂದುಕೊಂಡರು.

ಕೀರ್ತನೆಗಳು 35:7

ಕಾರಣವಿಲ್ಲದೆ ಅವರು ನನಗೋಸ್ಕರ ತಮ್ಮ ಬಲೆಯನ್ನು ಕುಣಿಯಲ್ಲಿ ಅಡಗಿಸಿಟ್ಟಿದ್ದಾರೆ; ಕಾರಣವಿಲ್ಲದೆ ನನ್ನ ಪ್ರಾಣಕೋಸ್ಕರ ಅದನ್ನು ಅಗೆದಿದ್ದಾರೆ.

ಕೀರ್ತನೆಗಳು 40:2

ಆತನು ನನ್ನನ್ನು ನಾಶನದ ಕುಣಿಯಿಂದಲೂ ಮತ್ತು ಬುರುದೆಯ ಕೆಸರಿನಿಂದಲೂ ಎತ್ತಿ ನನ್ನ ಪಾದಗಳನ್ನು ಬಂಡೆಯ ಮೇಲೆ ನಿಲ್ಲಿಸಿ ನನ್ನ ಹೆಜ್ಜೆಗಳನ್ನು ಸ್ಥಿರಪಡಿಸಿದನು.

ಕೀರ್ತನೆಗಳು 88:6

ಕೆಳಗಿನ ಆಳವಾದ ಕುಣಿಯಲ್ಲಿಯೂ ಕತ್ತಲೆಯಲ್ಲಿಯೂ ಅಗಾಧಗಳಲ್ಲಿಯೂ ನನ್ನನ್ನು ಇಟ್ಟಿದ್ದಿ.

ಕೀರ್ತನೆಗಳು 88:8

ನನ್ನ ಪರಿಚಿತರನ್ನು ನನಗೆ ದೂರಮಾಡಿದ್ದೀ; ನನ್ನನ್ನು ಅವ ರಿಗೆ ಅಸಹ್ಯ ಮಾಡಿದ್ದೀ; ಮುಚ್ಚಲ್ಪಟ್ಟಿದ್ದೇನೆ, ಹೊರಗೆ ಬರಲಾರೆನು.

ಕೀರ್ತನೆಗಳು 130:1

ಓ ಕರ್ತನೇ, ಆಗಾಧಗಳೊಳಗಿಂದ ನಿನಗೆ ಕೂಗುತ್ತೇನೆ.

ಯೆರೆಮಿಯ 38:6

ಬಾಬೆಲಿನ ಅರಸನು ಚಿದ್ಕೀಯನ ಕುಮಾರರನ್ನು ರಿಬ್ಲದಲ್ಲಿ ಅವನ ಕಣ್ಣುಗಳ ಮುಂದೆ ಕೊಂದುಹಾಕಿದನು; ಯೆಹೂದದ ಘನವುಳ್ಳವರೆಲ್ಲ ರನ್ನು ಸಹ ಬಾಬೆಲಿನ ಅರಸನು ಕೊಂದುಹಾಕಿದನು.

ವಿಲಾಪಗಳು 3:52

ನನ್ನ ಶತ್ರುಗಳು ಕಾರಣವಿಲ್ಲದೆ ಪಕ್ಷಿಯಂತೆ ನನ್ನನ್ನು ಕಠೋರವಾಗಿ ಹಿಂದಟ್ಟಿ ಬೇಟೆಯಾಡಿದರು.

ವಿಲಾಪಗಳು 4:20

ಯಾರ ವಿಷಯವಾಗಿ ನಾವು--ಅವನ ನೆರಳಿನ ಕೆಳಗೆ ಅನ್ಯ ಜನಾಂಗಗಳೊಳಗೆ ಬದುಕುವೆವು ಎಂದು ಹೇಳಿ ಕೊಂಡೆವೋ ನಮ್ಮ ಮೂಗಿನ ಉಸಿರಾದ ಆ ಕರ್ತನ ಅಭಿಷಿಕ್ತನು ಅವರ ಕುಣಿಗಳಲ್ಲಿ ಸಿಕ್ಕಿಕೊಂಡನು.

ಜೆಕರ್ಯ 9:11

ನಿನ್ನ ವಿಷಯವಾಗಿ ಸಹ ನಿನ್ನ ಒಡಂಬಡಿಕೆಯ ರಕ್ತದಿಂದ, ನಿನ್ನ ಸೆರೆಯವರನ್ನು ನೀರಿಲ್ಲದ ಕುಣಿಯೊ ಳಗಿಂದ ಕಳುಹಿಸಿಬಿಡುತ್ತೇನೆ.

Interlinear

Choose Theme