Home Bibles ಆದಿಕಾಂಡ 36:6 · ಕನ್ನಡ ಬೈಬಲ್
ಆದಿಕಾಂಡ 36:6 · ಕನ್ನಡ ಬೈಬಲ್

ತರುವಾಯ ಏಸಾವನು ತನ್ನ ಹೆಂಡತಿಯರನ್ನೂ ಕುಮಾರ ಕುಮಾರ್ತೆಯರನ್ನೂ ತನ್ನ ಮನೆಯಲ್ಲಿದ್ದ ಎಲ್ಲಾ ಮನುಷ್ಯರನ್ನೂ ತನ್ನ ಹಿಂಡುಗಳನ್ನೂ ತನ್ನ ಎಲ್ಲಾ ದನಗಳನ್ನೂ ಕಾನಾನ್‌ ದೇಶದಲ್ಲಿ ತಾನು ಸಂಪಾದಿಸಿದ್ದ ಎಲ್ಲಾ ಸಂಪತ್ತನ್ನೂ ತೆಗೆದುಕೊಂಡು ತನ್ನ ಸಹೋದರನಾದ ಯಾಕೋಬನ ಎದುರಿನಿಂದ ಮತ್ತೊಂದು ದೇಶಕ್ಕೆ ಹೋದನು.

Cross references

ಆದಿಕಾಂಡ 12:5

ಇದಲ್ಲದೆ ಅಬ್ರಾಮನು ತನ್ನ ಹೆಂಡತಿಯಾದ ಸಾರಯಳನ್ನೂ ತನ್ನ ಸಹೋದರನ ಮಗನಾದ ಲೋಟ ನನ್ನೂ ಅವರು ಕೂಡಿಸಿಕೊಂಡಿದ್ದ ಎಲ್ಲಾ ಸಂಪತ್ತನ್ನೂ ಹಾರಾನಿನಲ್ಲಿ ಅವರು ಸಂಪಾದಿಸಿಕೊಂಡವರನ್ನೂ ತಮ್ಮ ಸಂಗಡ ಕರಕೊಂಡು ಕಾನಾನ್‌ ದೇಶಕ್ಕೆ ಹೊರಟು ಅವರು ಕಾನಾನ್‌ ದೇಶಕ್ಕೆ ಬಂದರು.

ಆದಿಕಾಂಡ 13:6

ಆಗ ಅವರು ಒಂದಾಗಿ ವಾಸಿಸುವ ಹಾಗೆ ಸ್ಥಳವು ಸಾಲದೆ ಹೋಯಿತು. ಯಾಕಂದರೆ ಅವರು ಒಟ್ಟಿಗೆ ವಾಸಿಸದಷ್ಟು ಅವರ ಸಂಪತ್ತು ಬಹಳವಾಗಿತ್ತು.

ಆದಿಕಾಂಡ 13:11

ತರುವಾಯ ಲೋಟನು ಯೊರ್ದನಿನ ಮೈದಾನ ವನ್ನೆಲ್ಲಾ ತನಗಾಗಿ ಆರಿಸಿಕೊಂಡನು; ಹೀಗೆ ಲೋಟನು ಮೂಡಣಕ್ಕೆ ಹೊರಟು ಹೋದದ್ದರಿಂದ ಅವರು ಒಬ್ಬರಿಂದೊಬ್ಬರು ಪ್ರತ್ಯೇಕಿಸಲ್ಪಟ್ಟರು.

ಆದಿಕಾಂಡ 17:8

ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ನೀನು ಪ್ರವಾಸಿಯಾಗಿರುವ ಕಾನಾನ್‌ ದೇಶವನ್ನೆಲ್ಲಾ ಶಾಶ್ವತವಾದ ಸ್ವಾಸ್ಥ್ಯವಾಗಿ ಕೊಡುತ್ತೇನೆ. ನಾನು ಅವರ ದೇವರಾಗಿರುವೆನು ಅಂದನು.

ಆದಿಕಾಂಡ 25:23

ಕರ್ತನು ಆಕೆಗೆ--ನಿನ್ನ ಹೊಟ್ಟೆಯಲ್ಲಿ ಎರಡು ಜನಾಂಗಗಳು ಇವೆ. ನಿನ್ನ ಗರ್ಭದೊಳಗಿನಿಂದಲೇ ಎರಡು ತರವಾದ ಜನಗಳು ಬೇರೆಬೇರೆಯಾಗುವರು. ಒಂದು ತರವಾದ ಜನಕ್ಕಿಂತ ಇನ್ನೊಂದು ಬಲಗೊಳ್ಳು ವದು. ಇದಲ್ಲದೆ ಹಿರಿಯನು ಕಿರಿಯನನ್ನು ಸೇವಿಸುವನು ಎಂದು ಹೇಳಿದನು.

ಆದಿಕಾಂಡ 28:4

ದೇವರು ಅಬ್ರಹಾಮನಿಗೆ ಕೊಟ್ಟಿರುವ ಮತ್ತು ನೀನು ಈಗ ಪ್ರವಾಸಿಯಾಗಿರುವ ದೇಶವನ್ನು ಬಾಧ್ಯವಾಗಿ ಹೊಂದುವಂತೆ ದೇವರು ನಿನ್ನನ್ನು ಆಶೀರ್ವದಿಸಿ ನಿನಗೂ ನಿನ್ನ ಸಂತತಿಗೂ ಕೊಡಲಿ ಅಂದನು.

ಆದಿಕಾಂಡ 32:3

ಯಾಕೋಬನು ಎದೋಮ್ಯರ ದೇಶವಾದ ಸೇಯಾರಿನ ಸೀಮೆಯಲ್ಲಿರುವ ತನ್ನ ಸಹೋದರನಾದ ಏಸಾವನ ಬಳಿಗೆ ದೂತರನ್ನು ತನ್ನ ಮುಂದಾಗಿ ಕಳುಹಿಸಿದನು.

ಯೆಹೆಜ್ಕೇಲ 27:13

ಯಾವಾನ್‌, ತೂಬಲ್‌, ಮೇಷೆಕ್‌ ಇವರು ನಿನ್ನ ವರ್ತಕರಾಗಿದ್ದರು; ಮನುಷ್ಯರ ಪ್ರಾಣಗಳಿಂದಲೂ (ವ್ಯಕ್ತಿ) ಹಿತ್ತಾಳೆಯ ಪಾತ್ರೆ ಗಳಿಂದಲೂ ನಿನ್ನ ಸಂತೆಯಲ್ಲಿ ವ್ಯಾಪಾರ ನಡಿಸಿದರು.

ಪ್ರಕಟನೆ 18:13

ಲವಂಗ, ಚೆಕ್ಕೆ, ಧೂಪ, ಸುಗಂಧ ತೈಲ, ಸಾಂಬ್ರಾಣಿ, ದ್ರಾಕ್ಷಾರಸ, ಎಣ್ಣೆ, ನಯವಾದಹಿಟ್ಟು, ಗೋಧಿ, ದನಗಳು, ಕುರಿ ಗಳು, ಕುದುರೆಗಳು, ರಥಗಳು, ಗುಲಾಮರು, ಮನುಷ್ಯರ ಪ್ರಾಣಗಳು ಇವೇ ಮೊದಲಾದವುಗಳನ್ನು ಯಾರೂ ಎಂದೂ ಕೊಂಡುಕೊಳ್ಳುವರಿಲ್ಲ ಎಂದು ದುಃಖಿಸುವರು.

Interlinear

Choose Theme