ಮಗ್ದೀಯೇಲ್ ಗೀರಾಮ್. ತಮ್ಮ ಸ್ವಾಸ್ಥ್ಯದ ದೇಶದಲ್ಲಿ ವಾಸವಾಗಿದ್ದ ಪ್ರಕಾರ ಎದೋಮ್ಯರ ಮುಖಂಡರು ಇವರೇ. ಎದೋಮ್ಯರ ತಂದೆಯಾದ ಏಸಾವನು ಇವನೇ.
Cross references
ಸಾರಳ ದಾಸಿಯಾದ ಐಗುಪ್ತ್ಯದ ಹಾಗರಳು ಅಬ್ರಹಾಮನಿಗೆ ಹೆತ್ತ ಅಬ್ರಹಾಮನ ಮಗನಾದ ಇಷ್ಮಾಯೇಲನ ವಂಶಾವಳಿಗಳು.
ಏಸಾವನು ಯಾಕೋಬನಿಗೆ--ಆ ಕೆಂಪಾದ ಪದಾರ್ಥವನ್ನು ತಿನ್ನುವದಕ್ಕೆ ನನಗೆ ಕೊಡು, ನಾನು ದಣಿದಿದ್ದೇನೆ ಅಂದನು. ಆದದರಿಂದ ಅವನಿಗೆ ಎದೋಮ್ ಎಂದು ಹೆಸರಾಯಿತು.
ಅವರು ಕೂಡಿ ಇರುವದಕ್ಕೆ ಆಗದಷ್ಟು ಅವರ ಸಂಪತ್ತು ಅಭಿವೃದ್ಧಿ ಯಾಗಿತ್ತು. ಅವರ ಹಿಂಡುಗಳಿಗೋಸ್ಕರ ಅವರು ಪ್ರವಾಸವಾಗಿದ್ದ ದೇಶವು ಅವರಿಗೆ ಸಾಲದೆ ಹೋಯಿತು.
ಹೀಗೆ ಏಸಾವನು ಸೇಯಾರ್ ಪರ್ವತದಲ್ಲಿ ವಾಸವಾಗಿದ್ದನು. ಏಸಾವನೇ ಎದೋಮನು.
ಸೇಯಾರ್ ಪರ್ವತದಲ್ಲಿರುವ ಎದೋಮ್ಯರ ತಂದೆಯಾದ ಏಸಾವನ ವಂಶಾವಳಿಗಳು ಇವೇ:
ಏಸಾವನ ಕುಮಾರರ ಮುಖಂಡರು ಯಾರಂದರೆ: ಏಸಾವನ ಚೊಚ್ಚಲ ಮಗನಾಗಿರುವ ಎಲೀಫಜನ ಮಕ್ಕಳಾದ ತೇಮಾನ್ ಓಮಾರ್ ಚೆಫೋ ಕೆನಜ್
ಏಸಾವನ ಹೆಂಡತಿಯಾದ ಒಹೊಲೀಬಾಮಳ ಕುಮಾರರ ಮುಖಂಡರು ಯಾರಂದರೆ: ಯೆಗೂಷ ಯಳಾಮ ಕೋರಹ ಇವರೇ. ಏಸಾವನ ಹೆಂಡತಿ ಯಾದ ಅನಾಹಳ ಮಗಳಾದ ಒಹೊಲೀಬಾಮಳಿಂದ ಬಂದ ಮುಖಂಡರು.
ದೀಶೋನ್ ಏಚೆರ್ ದೀಶಾನ್ ಇವರೇ. ಇವರು ಸೇಯಾರ್ ದೇಶದಲ್ಲಿ ಮುಖಂಡರಾಗಿದ್ದ ಹೋರಿಯರಿಂದ ಬಂದ ಮುಖಂಡರು.
ಆದದರಿಂದ ಈಗ ನೀವಲ್ಲ, ದೇವರು ತಾನೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ. ಆತನು ನನ್ನನ್ನು ಫರೋಹನಿಗೆ ತಂದೆಯಾಗಿಯೂ ಅವನ ಮನೆಗೆಲ್ಲಾ ಯಜಮಾನನನ್ನಾಗಿಯೂ ಐಗುಪ್ತ ದೇಶಕ್ಕೆಲ್ಲಾ ಅಧಿಕಾರಿಯನ್ನಾಗಿಯೂ ಮಾಡಿದ್ದಾನೆ.
ಆಗ ಎದೋಮಿನ ಪ್ರಭುಗಳು ದಿಗ್ಭ್ರಮೆಗೊಳ್ಳು ವರು; ಮೋವಾಬಿನ ಬಲಿಷ್ಠರನ್ನು ಕಂಪನವು ಹಿಡಿಯು ವದು. ಕಾನಾನಿನ ನಿವಾಸಿಗಳೆಲ್ಲಾ ಕರಗಿ ಹೋಗುವರು.
ಇದಲ್ಲದೆ ಮೋಶೆಯು ಕಾದೇಶಿನಿಂದ ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ ಹೇಳಿದ್ದೇನಂದರೆ--ನಿನ್ನ ಸಹೋದರನಾದ ಇಸ್ರಾಯೇ ಲನು ಹೇಳುವದೇನಂದರೆ--ನಮಗೆ ಉಂಟಾದ ಸಕಲ ಆಯಾಸವನ್ನು ನೀನು ಅರಿತಿದ್ದೀ.
ಅವರ ಸಂಗಡ ಜಗಳವಾಡಬೇಡಿರಿ. ನಾನು ನಿಮಗೆ ಅವರ ದೇಶದಲ್ಲಿ ಪಾದದಷ್ಟೂ ಸ್ಥಳ ಕೊಡುವದಿಲ್ಲ; ಸೇಯಾರ್ ಬೆಟ್ಟವನ್ನು ಏಸಾವನಿಗೆ ಸ್ವಾಸ್ತ್ಯವಾಗಿ ಕೊಟ್ಟೆನಲ್ಲಾ.
ಮೆಯೋನೋತೈಯು ಒಫ್ರಾಹ ನನ್ನು ಪಡೆದನು; ಸೆರಾಯನು ಶಿಲ್ಪಿಗರಾಗಿರುವ ಗೇಹರಾಷೀಮ್ಯರ ತಂದೆಯಾದ ಯೋವಾಬನನ್ನು ಪಡೆದನು.