Home Bibles ಆದಿಕಾಂಡ 34:10 · ಕನ್ನಡ ಬೈಬಲ್
ಆದಿಕಾಂಡ 34:10 · ಕನ್ನಡ ಬೈಬಲ್

ಇದಲ್ಲದೆ ನೀವು ನಮ್ಮ ಸಂಗಡ ವಾಸಮಾಡಿರಿ; ದೇಶವು ನಿಮ್ಮ ಮುಂದೆ ಇದೆ. ನೀವು ವಾಸಿಸಿ ಅದರಲ್ಲಿ ವ್ಯಾಪಾರಮಾಡಿ ಅದರಿಂದ ಆಸ್ತಿಯನ್ನು ಮಾಡಿಕೊಳ್ಳಿರಿ ಅಂದನು.

Cross references

ಆದಿಕಾಂಡ 13:9

ಭೂಮಿ ಯೆಲ್ಲಾ ನಿನ್ನ ಮುಂದೆ ಇರುತ್ತದಲ್ಲವೋ? ಹಾಗಾದರೆ ನನ್ನ ಬಳಿಯಿಂದ ಪ್ರತ್ಯೇಕವಾಗು; ನೀನು ಎಡಕ್ಕೆ ಹೋದರೆ ನಾನು ಬಲಕ್ಕೆ ಹೋಗುವೆನು; ನೀನು ಬಲಕ್ಕೆ ಹೋದರೆ ನಾನು ಎಡಕ್ಕೆ ಹೋಗುವೆನು ಅಂದನು.

ಆದಿಕಾಂಡ 20:15

ಅಬೀಮೆಲೆಕನು--ಇಗೋ, ನನ್ನ ದೇಶವು ನಿನ್ನ ಮುಂದೆ ಇದೆ; ನಿನಗೆ ಇಷ್ಟವಾಗಿರುವ ಸ್ಥಳದಲ್ಲಿ ವಾಸಮಾಡು ಅಂದನು.

ಆದಿಕಾಂಡ 34:21

ಈ ಮನುಷ್ಯರು ನಮ್ಮ ಸಂಗಡ ಸಮಾಧಾನ ವಾಗಿದ್ದಾರೆ; ಆದದರಿಂದ ಅವರು ದೇಶದಲ್ಲಿ ವಾಸಮಾಡಿ ಅದರಲ್ಲಿ ವ್ಯಾಪಾರಮಾಡಲಿ. ಇಗೋ, ದೇಶವು ಅವರಿಗಾಗಿ ಸಾಕಷ್ಟು ವಿಸ್ತಾರವಾಗಿದೆ. ಅವರ ಕುಮಾರ್ತೆಯರನ್ನು ನಮಗೆ ಹೆಂಡತಿಯರನ್ನಾಗಿ ತಕ್ಕೊಳ್ಳೋಣ ನಮ್ಮ ಕುಮಾರ್ತೆಯರನ್ನು ಅವರಿಗೆ ಕೊಡೋಣ.

ಆದಿಕಾಂಡ 42:34

ನಿಮ್ಮ ಚಿಕ್ಕ ತಮ್ಮನನ್ನು ನನ್ನ ಬಳಿಗೆ ತನ್ನಿರಿ, ಆಗ ನೀವು ಗೂಢಚಾರರಲ್ಲವೆಂದೂ ಯಥಾರ್ಥ ರೆಂದೂ ತಿಳುಕೊಂಡು ನಿಮ್ಮ ಸಹೋದರನನ್ನು ನಿಮಗೆ ಒಪ್ಪಿಸುವೆನು. ಆಗ ನೀವು ದೇಶದಲ್ಲಿ ವ್ಯಾಪಾರ ಮಾಡಬಹುದು ಎಂದು ಹೇಳಿದನು ಅಂದರು.

ಆದಿಕಾಂಡ 47:27

ಆದರೆ ಇಸ್ರಾಯೇಲ್ಯರು ಐಗುಪ್ತದೇಶದ ಗೋಷೆನ್‌ ಸೀಮೆಯಲ್ಲಿ ವಾಸವಾಗಿದ್ದು ಆಸ್ತಿಯನ್ನು ಸಂಪಾದಿಸಿ ಬೆಳೆದು ಬಹಳವಾಗಿ ಹೆಚ್ಚಿದ್ದರು.

Interlinear

Choose Theme