ಆದಿಕಾಂಡ 31:8 · ಕನ್ನಡ ಬೈಬಲ್
ನಿಮ್ಮ ತಂದೆ ನನಗೆ --ಚುಕ್ಕೆಯುಳ್ಳದ್ದು ನಿನ್ನ ಸಂಬಳವಾಗಿರಲಿ ಅಂದಾಗ ಮಂದೆಯೆಲ್ಲಾ ಚುಕ್ಕೆಯುಳ್ಳದ್ದೇ ಈಯಿತು; ಅವನು --ರೇಖೆಯುಳ್ಳದ್ದು ನಿನ್ನ ಸಂಬಳವಾಗಿರಲಿ ಅಂದಾಗ ಮಂದೆಯೆಲ್ಲಾ ರೇಖೆಯುಳ್ಳದ್ದನ್ನೇ ಈಯಿತು.
Cross references
ಆದಿಕಾಂಡ 30:32
ಈ ಹೊತ್ತು ನಾನು ನಿನ್ನ ಎಲ್ಲಾ ಮಂದೆಯ ಮಧ್ಯದಲ್ಲಿ ಹಾದುಹೋಗುವೆನು; ಅದ ರಲ್ಲಿ ಚುಕ್ಕೆ ಮಚ್ಚೆ ಉಳ್ಳವುಗಳನ್ನೆಲ್ಲಾ ಕುರಿಗಳಲ್ಲಿ ಕಂದು ಬಣ್ಣದವುಗಳನ್ನೆಲ್ಲಾ ಮೇಕೆಗಳಲ್ಲಿ ಚುಕ್ಕೆ ಮಚ್ಚೆ ಉಳ್ಳವುಗಳನ್ನೆಲ್ಲಾ ಬೇರೆ ಮಾಡುವೆನು. ಅವೇ ನನ್ನ ಕೂಲಿಯಾಗಿರಲಿ.