ಮಿಚ್ಪಾ ಎಂದೂ ಹೆಸರಾಯಿತು. ಯಾಕಂದರೆ--ನನಗೂ ನಿನಗೂ ಮಧ್ಯದಲ್ಲಿ ನಾವು ಒಬ್ಬರಿಗೊಬ್ಬರು ಅಗಲಿರುವಾಗ ಕರ್ತನು ನಮ್ಮನ್ನು ಕಾಪಾಡಲಿ.
Cross references
ಅಮ್ಮೋನನ ಮಕ್ಕಳು ಏಕವಾಗಿ ಕೂಡಿಕೊಂಡು ಗಿಲ್ಯಾದಿನಲ್ಲಿ ದಂಡಿಳಿದರು. ಆದರೆ ಇಸ್ರಾಯೇಲ್ ಮಕ್ಕಳು ಏಕವಾಗಿ ಕೂಡಿ ಮಿಚ್ಪೆಯಲ್ಲಿ ದಂಡಿಳಿದರು.ಆಗ ಗಿಲ್ಯಾದಿನ ಜನರೂ ಪ್ರಧಾನರೂ ಒಬ್ಬರಿ ಗೊಬ್ಬರು--ಯಾವನು ಅಮ್ಮೋನನ ಮಕ್ಕಳ ಮೇಲೆ ಯುದ್ಧಮಾಡಲಾರಂಭಿಸುವನೋ ಅವನು ಗಿಲ್ಯಾದಿನ ನಿವಾಸಿಗಳಿಗೆಲ್ಲಾ ನಾಯಕನಾಗಿರುವನು ಎಂದು ಮಾತ ನಾಡಿಕೊಂಡರು.
ಆಗ ಯೆಫ್ತಾ ಹನು ಗಿಲ್ಯಾದಿನ ಹಿರಿಯರ ಸಂಗಡ ಹೋದನು. ಆಗ ಜನರು ಅವನನ್ನು ತಮ್ಮ ಮೇಲೆ ನಾಯಕನ ನ್ನಾಗಿಯೂ ಅಧಿಪತಿಯನ್ನಾಗಿಯೂ ಇಟ್ಟುಕೊಂಡರು. ಯೆಫ್ತಾಹನು ತನ್ನ ಮಾತುಗಳನ್ನೆಲ್ಲಾ ಮಿಚ್ಪೆಯಲ್ಲಿ ಕರ್ತನ ಮುಂದೆ ಹೇಳಿದನು.
ಆಗ ಕರ್ತನ ಆತ್ಮವು ಯೆಪ್ತಾಹನ ಮೇಲೆ ಬಂತು. ಅವನು ಗಿಲ್ಯಾದ್ ಮನಸ್ಸೆಯ ಸೀಮೆಗಳನ್ನು ದಾಟಿ ಹೋಗಿ ಗಿಲ್ಯಾದಿನಲ್ಲಿರುವ ಮಿಚ್ಪೆಗೆ ಬಂದು ಅಲ್ಲಿಂದ ಅಮ್ಮೋನನ ಮಕ್ಕಳೆದುರಿಗೆ ಹಾದುಹೋದನು.
ಸಮುವೇಲನು--ನಾನು ನಿಮಗೋಸ್ಕರವಾಗಿ ಕರ್ತನನ್ನು ಪ್ರಾರ್ಥಿಸುವ ಹಾಗೆ ಇಸ್ರಾಯೇಲನ್ನೆಲ್ಲಾ ಮಿಚ್ಪೆಯಲ್ಲಿ ಕೂಡಿಸಿಕೊಳ್ಳಿರಿ ಅಂದನು. ಅವರೆಲ್ಲರು ಮಿಚ್ಪೆಯಲ್ಲಿ ಒಟ್ಟುಕೂಡಿ ಬಂದು ಕರ್ತನ ಮುಂದೆ ನೀರು ತಂದು ಹೊಯ್ದು ಆ ದಿವಸದಲ್ಲಿ ಉಪವಾಸಮಾಡಿ--
ಆಗ ಅರಸನಾದ ಆಸನು ಯೆಹೂದದೆಲ್ಲೆಲ್ಲಿಯೂ ಸಾರಿದನು; ಒಬ್ಬರೂ ಬಿಡಲ್ಪ ಡಲಿಲ್ಲ; ಆಗ ಅವರು ಬಾಷನು ಕಟ್ಟಿಸಿದ ರಾಮದ ಕಲ್ಲುಗಳನ್ನೂ ಅದರ ಮರಗಳನ್ನೂ ತಕ್ಕೊಂಡು ಹೋದರು. ಅರಸನಾದ ಆಸನು ಅವುಗಳಿಂದ ಬೆನ್ಯಾವಿಾನನ ಗೆಬವನ್ನೂ ಮಿಚ್ಪೆಯನ್ನೂ ಕಟ್ಟಿಸಿದನು.
ಓ ಯಾಜಕರೇ, ಇದನ್ನು ನೀವು ಕೇಳಿರಿ, ಇಸ್ರಾಯೇಲಿನ ಮನೆತನದವರೇ, ನೀವು ಕೇಳಿಸಿಕೊಳ್ಳಿರಿ; ಅರಸನ ಮನೆಯವರೇ, ನೀವು ಕಿವಿಗೊಡಿರಿ. ನೀವು ಮಿಚ್ಪದಲ್ಲಿ ಉರ್ಲಾಗಿಯೂ ತಾಬೋರಿನ ಮೇಲೆ ಒಡ್ಡಿದ ಬಲೆಯಾಗಿಯೂ ಇದ್ದಕಾರಣ ನಿಮಗೆ ನ್ಯಾಯತೀರ್ಪು ಬಂದಿದೆ.