ರಾಹೇಲಳು--ದೇವರು ನನಗೆ ನ್ಯಾಯತೀರಿಸಿ ನನ್ನ ಮೊರೆ ಕೇಳಿ ನನಗೆ ಮಗನನ್ನು ಕೊಟ್ಟಿದ್ದಾನೆ ಎಂದು ಹೇಳಿದಳು. ಆದದರಿಂದ ಆಕೆಯು ಅವನಿಗೆ ದಾನ್ ಎಂದು ಹೆಸರಿಟ್ಟಳು.
Cross references
ಲೇಯಳು ಗರ್ಭಿಣಿ ಯಾಗಿ ಮಗನನ್ನು ಹೆತ್ತು--ನಿಜವಾಗಿಯೂ ಕರ್ತನು ನನ್ನ ಬಾಧೆಯನ್ನು ನೋಡಿದ್ದಾನೆ; ಆದದರಿಂದ ನನ್ನ ಗಂಡನು ನನ್ನನ್ನು ಪ್ರೀತಿಮಾಡುವನೆಂದು ಹೇಳಿ (ಮಗುವಿಗೆ) ರೂಬೇನ್ ಎಂದು ಹೆಸರಿಟ್ಟಳು.
ರಾಹೇಲಳ ದಾಸಿಯಾದ ಬಿಲ್ಹಳ ಕುಮಾರರು: ದಾನನು ಮತ್ತು ನಫ್ತಾಲಿಯು.
ದಾನನ ಮಗನು ಹುಶೀಮನು.
ದಾನನು ಇಸ್ರಾಯೇ ಲನ ಗೋತ್ರಗಳಲ್ಲಿ ಒಂದರಂತೆ ತನ್ನ ಜನರಿಗೆ ನ್ಯಾಯತೀರಿಸುವನು.
ಶಪಿಸುವದಕ್ಕೆ ಏಬಾಲ್ ಬೆಟ್ಟದಲ್ಲಿ ನಿಲ್ಲತಕ್ಕವರ್ಯಾ ರೆಂದರೆ; ರೂಬೇನ್, ಗಾದ್, ಆಶೇರ್, ಜೆಬುಲೂನ್, ದಾನ್, ನಫ್ತಾಲಿ ಎಂದು ಆಜ್ಞಾಪಿಸಿ ಹೇಳಿದನು.
ಅವನು ದಾನನ ವಿಷಯವಾಗಿ--ದಾನನು ಸಿಂಹದ ಮರಿಯೇ, ಬಾಶಾನಿನಿಂದ ಹಾರಿ ಬರುವನು ಎಂದು ಹೇಳಿದನು.
ಓ ಕರ್ತನೇ, ನನ್ನ ದೇವರೇ, ನಿನ್ನ ನೀತಿಯ ಪ್ರಕಾರ ನನಗೆ ನ್ಯಾಯತೀರಿಸು; ಅವರು ನನ್ನ ವಿಷಯವಾಗಿ ಸಂತೋಷಪಡದೆ ಇರಲಿ.
ಓ ದೇವರೇ, ನನಗೆ ನ್ಯಾಯತೀರಿಸು. ಭಕ್ತಿ ಇಲ್ಲದ ಜನಾಂಗದ ಸಂಗಡ ನನ್ನ ನ್ಯಾಯವನ್ನು ವಾದಿಸು; ಮೋಸವೂ ಅನ್ಯಾಯವೂ ಉಳ್ಳ ಮನುಷ್ಯನಿಂದ ನನ್ನನ್ನು ತಪ್ಪಿಸು.
ಯೆಹೂ ದವು ದುಃಖಪಡುತ್ತದೆ, ಅದರ ಬಾಗಿಲುಗಳು ಕುಂದಿ ಹೋಗುತ್ತವೆ, ನೆಲದ ವರೆಗೆ ಕಪ್ಪಾಗಿವೆ; ಯೆರೂಸಲೇ ಮಿನ ಕೂಗು ಏರಿ ಬಂತು.
ಆದದರಿಂದ ಇಗೋ, ಕರ್ತನು ಹೇಳುವದೇ ನಂದರೆ--ಇಗೋ, ಇಸ್ರಾಯೇಲಿನ ಮಕ್ಕಳನ್ನು ಐಗುಪ್ತ ದೇಶದೊಳಗಿಂದ ಬರಮಾಡಿದ ಕರ್ತನ ಜೀವದಾಣೆ ಎಂದು ಇನ್ನು ಹೇಳುವದಿಲ್ಲ;
ಓ ಕರ್ತನೇ, ನೀನು ನನ್ನ ಅನ್ಯಾಯವನ್ನು ನೋಡಿದ್ದೀ, ನನಗೆ ನ್ಯಾಯವನ್ನು ತೀರಿಸು.