ಆದಿಕಾಂಡ 30:31 · ಕನ್ನಡ ಬೈಬಲ್
ಅದಕ್ಕೆ ಲಾಬಾನನು--ನಿನಗೆ ನಾನು ಏನು ಕೊಡಲಿ ಅಂದಾಗ ಯಾಕೋಬನು--ಏನೂ ಕೊಡ ಬೇಡ, ಇದು ಮಾತ್ರ ನೀನು ನನಗಾಗಿ ಮಾಡಿದರೆ ನಾನು ತಿರಿಗಿ ನಿನ್ನ ಮಂದೆಯನ್ನು ಮೇಯಿಸಿ ಕಾಯುವೆನು;
Cross references
2 ಸಮುವೇಲ 21:4
ಆಗ ಗಿಬ್ಯೋನ್ಯರು ಅವನಿಗೆ--ಸೌಲನ ಕೈಯಿಂದಲಾದರೂ ಅವನ ಮನೆ ಯವರ ಕೈಯಿಂದಲಾದರೂ ನಮಗೆ ಬೆಳ್ಳಿಯಾದರೂ ಬಂಗಾರವಾದರೂ ಬೇಡ; ನೀನು ಈ ಕಾರ್ಯಕ್ಕೋಸ್ಕರ ಇಸ್ರಾಯೇಲಿನಲ್ಲಿ ಒಬ್ಬನನ್ನಾದರೂ ಕೊಂದುಹಾಕ ಬೇಕೆಂಬುವದು ನಮಗೆ ಅಗತ್ಯವಿಲ್ಲ ಅಂದರು. ಆಗ ಅವನು--ನೀವು ನನಗೆ ಏನು ಹೇಳುತ್ತೀರೋ ನಾನು ನಿಮಗೆ ಮಾಡುವೆನು ಅಂದನು.
ಕೀರ್ತನೆಗಳು 118:8
ಮನುಷ್ಯರಲ್ಲಿ ಭರ ವಸವಿಡುವದಕ್ಕಿಂತ ಕರ್ತನಲ್ಲಿ ನಂಬಿಕೆಯಿಡುವದು ಒಳ್ಳೇದು.
ಹೆಬ್ರಿಯರಿಗೆ 13:5
ನಿಮ್ಮ ನಡತೆಯು ದ್ರವ್ಯಾಶೆ ಯಿಲ್ಲದ್ದಾಗಿರಲಿ; ನಿಮಗಿರುವವುಗಳಲ್ಲಿ ತೃಪ್ತರಾಗಿರ್ರಿ; ಯಾಕಂದರೆ--ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ ಇಲ್ಲವೆ ತೊರೆಯುವದಿಲ್ಲವೆಂದು ಆತನು ಹೇಳಿದ್ದಾನೆ.