ಆಗ ಕರ್ತನಾದ ದೇವರು ದಿನದ ತಂಗಾಳಿಯಲ್ಲಿ ತೋಟದೊಳಗೆ ತಿರುಗಾಡುವ ಶಬ್ದವನ್ನು ಆದಾಮನೂ ಅವನ ಹೆಂಡತಿಯೂ ಕೇಳಿ ದೇವರಾದ ಕರ್ತನ ಸನ್ನಿಧಿಯಿಂದ ತೋಟದ ಮರಗಳಲ್ಲಿ ಅಡಗಿಕೊಂಡರು.
Cross references
ಅದಕ್ಕ ವನು--ನಿನ್ನ ಶಬ್ದವನ್ನು ತೋಟದಲ್ಲಿ ನಾನು ಕೇಳಿ ಬೆತ್ತಲೆಯಾಗಿರುವದರಿಂದ ಭಯಪಟ್ಟು ಅಡಗಿ ಕೊಂಡೆನು ಅಂದನು.
ನೀನು ಕೇಳಿದಂತೆ ಬೆಂಕಿಯೊಳಗಿಂದ ಮಾತನಾಡುವ ದೇವರ ಶಬ್ದವನ್ನು ಕೇಳಿ ಬದುಕಿದ ಜನರು ಇದ್ದಾರೆಯೇ ?
ಹಾಗಾದರೆ ಈಗ ನಾವು ಯಾಕೆ ಸಾಯಬೇಕು? ಈ ಮಹಾಅಗ್ನಿಯು ನಿಶ್ಚಯವಾಗಿ ನಮ್ಮನ್ನು ದಹಿಸಿಬಿಡುವದು; ನಾವು ಇನ್ನೂ ನಮ್ಮ ದೇವರಾದ ಕರ್ತನ ಶಬ್ದವನ್ನು ಕೇಳಿದರೆ ಸಾಯುತ್ತೇವೆ.
ನಿನ್ನ ದೇವರಾದ ಕರ್ತನು ನಿನ್ನನ್ನು ರಕ್ಷಿಸುವದಕ್ಕೂ ನಿನ್ನ ಶತ್ರುಗಳನ್ನು ನಿನ್ನ ಮುಂದೆ ಒಪ್ಪಿಸಿಬಿಡುವದಕ್ಕೂ ಪಾಳೆಯದ ಮಧ್ಯದಲ್ಲಿ ಸಂಚಾರ ಮಾಡುತ್ತಾನೆ. ಆತನು ನಿನ್ನಲ್ಲಿ ಅಶುದ್ಧವಾದ ಕಾರ್ಯ ವನ್ನು ನೋಡಿ ನಿನ್ನನ್ನು ಬಿಟ್ಟು ತಿರುಗದ ಹಾಗೆ ನಿನ್ನ ಪಾಳೆಯವು ಪರಿಶುದ್ಧವಾಗಿರಬೇಕು.
ಮಂದವಾದ ಮೇಘಗಳು ಆತನ ಮರೆ; ಆತನು ನೋಡುವದಿಲ್ಲ; ಆತನು ಆಕಾಶ ಮಂಡಲದ ಮೇಲೆ ನಡೆಯುತ್ತಾನೆ.
ನಾನು ಎದೆ ಯಲ್ಲಿ ನನ್ನ ಅನ್ಯಾಯವನ್ನು ಅಡಗಿಸಿ, ಆದಾಮನ ಪ್ರಕಾರ ನನ್ನ ದ್ರೋಹವನ್ನು ಮುಚ್ಚಿಕೊಳ್ಳಲಿಲ್ಲ.
ಆತನ ಕಣ್ಣುಗಳು ಮನುಷ್ಯನ ಮಾರ್ಗಗಳ ಮೇಲೆ ಇರುತ್ತವೆ; ಅವನ ಹೋಗೋಣಗಳನ್ನೆಲ್ಲಾ ನೋಡುತ್ತಾನೆ.
ಆಗ ಕರ್ತನು ಯೋಬನಿಗೆ ಬಿರುಗಾಳಿ ಯೊಳಗಿಂದ ಉತ್ತರ ಕೊಟ್ಟು--
ಕರ್ತನೇ, ನನ್ನನ್ನು ಪರಿಶೋಧಿಸಿ ತಿಳುಕೊಂಡಿದ್ದೀ;
ಕೆಟ್ಟವರನ್ನು ಒಳ್ಳೆಯವರನ್ನು ನೋಡುತ್ತಾ ಕರ್ತನ ಕಣ್ಣುಗಳು ಪ್ರತಿಯೊಂದು ಸ್ಥಳ ದಲ್ಲಿವೆ.
ಅವರು ನರಕದ ವರೆಗೂ ತೋಡಿ ಕೊಂಡು ಹೋದರೂ ನನ್ನ ಕೈ ಅವರನ್ನು ಅಲ್ಲಿಂದ ಹಿಡಿದೆಳೆಯುವದು. ಅವರು ಆಕಾಶಕ್ಕೆ ಏರಿ ಹೋದರೂ ನಾನು ಅವರನ್ನು ಅಲ್ಲಿಂದ ಕೆಳಗೆ ಇಳಿಸುವೆನು.