ಬೆಳಿಗ್ಗೆ ನೋಡಲಾಗಿ ಆಕೆಯು ಲೇಯಳಾಗಿದ್ದಳು. ಆಗ ಅವನು ಲಾಬಾನನಿಗೆ--ಇದೇನು ನೀನು ನನಗೆ ಮಾಡಿದ್ದಿ? ರಾಹೇಲಳಿಗೋಸ್ಕರ ನಾನು ನಿನ್ನಲ್ಲಿ ಸೇವೆಮಾಡಿದೆನಲ್ಲಾ? ಯಾಕೆ ನನಗೆ ಮೋಸಮಾಡಿದಿ ಅಂದನು.
Cross references
ಆಗ ಫರೋ ಹನು ಅಬ್ರಾಮನನ್ನು ಕರೆಯಿಸಿ--ನೀನು ನನಗೆ ಮಾಡಿದ್ದೇನು? ಈಕೆಯು ನಿನ್ನ ಹೆಂಡತಿಯೆಂದು ಯಾಕೆ ತಿಳಿಸಲಿಲ್ಲ?
ಅವನು --ನಿನ್ನ ಸಹೋದರನು ಮೋಸದಿಂದ ಬಂದು ನಿನ್ನ ಆಶೀರ್ವಾದವನ್ನು ತಕ್ಕೊಂಡಿದ್ದಾನೆ ಅಂದನು.
ಲಾಬಾನನಿಗೆ ಇಬ್ಬರು ಕುಮಾರ್ತೆಯರಿದ್ದರು. ಹಿರಿಯಳ ಹೆಸರು ಲೇಯಳು, ಕಿರಿಯಳ ಹೆಸರು ರಾಹೇಲಳು.
ಲಾಬಾನನು ಯಾಕೋಬನಿಗೆ--ನೀನು ಏನು ಮಾಡಿದಿ? ನನಗೆ ತಿಳಿಸದೆ ನೀನು ಕಳ್ಳನ ಹಾಗೆ ಓಡಿಬಂದಿಯಲ್ಲಾ. ನನ್ನ ಕುಮಾರ್ತೆಯರನ್ನು ಕತ್ತಿಯಿಂದ ಸೆರೆಹಿಡಿದವರ ಹಾಗೆ ತೆಗೆದುಕೊಂಡು ಬಂದಿಯಲ್ಲಾ.
ಆಗ ಅದೋನೀಬೆಜೆಕನು--ನಾನು ಕೈಕಾಲು ಗಳ ಹೆಬ್ಬೆರಳುಗಳನ್ನು ಕತ್ತರಿಸಿದ ಎಪ್ಪತ್ತು ಮಂದಿ ಅರಸುಗಳು ನನ್ನ ಮೇಜಿನ ಕೆಳಗೆ ತಮ್ಮ ಆಹಾರ ವನ್ನು ಕೂಡಿಸಿದರು; ನಾನು ಹೇಗೆ ಮಾಡಿದೆನೋ ಹಾಗಾಯೇ ದೇವರು ನನಗೆ ಮುಯ್ಯಿಗೆ ಮುಯ್ಯಿಮಾಡಿದ್ದಾನೆ ಅಂದನು. ಅವನನ್ನು ಯೆರೂಸಲೇಮಿಗೆ ತಕ್ಕೊಂಡು ಬಂದರು; ಅವನು ಅಲ್ಲಿ ಸತ್ತನು.
ಇಗೋ, ಭೂಮಿಯ ಮೇಲೆ ನೀತಿವಂತರು ಪ್ರತಿಫಲವನ್ನು ಹೊಂದುವರು; ದುಷ್ಟನೂ ಪಾಪಿಯೂ ಎಷ್ಟೋ ಹೆಚ್ಚಾಗಿ ಪ್ರತಿಫಲ ವನ್ನು ಹೊಂದುತ್ತಾರೆ.
ನೀವು ಮಾಡುವ ತೀರ್ಪಿ ನಿಂದಲೇ ನಿಮಗೆ ತೀರ್ಪಾಗುವದು; ಮತ್ತು ನೀವು ಅಳೆಯುವ ಅಳತೆಯಿಂದಲೇ ನಿಮಗೆ ತಿರಿಗಿ ಅಳತೆ ಯಾಗುವದು.
ಆದದರಿಂದ ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಇಚ್ಛೈಸುವಿರೋ ಅವುಗಳನ್ನು ನೀವು ಸಹ ಅವರಿಗೆ ಹಾಗೆಯೇ ಮಾಡಿರಿ; ಯಾಕಂದರೆ ಇದೇ ನ್ಯಾಯಪ್ರಮಾಣದ ಮತ್ತು ಪ್ರವಾದಿಗಳ ತಾತ್ಪರ್ಯ.
ಆತನು ಮೂರನೆಯ ಸಾರಿ ಅವನಿಗೆ--ಯೋನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ಕೇಳಿದನು. ಆತನು ಮೂರನೆಯ ಸಾರಿ--ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು--ಕರ್ತನೇ, ನಿನಗೆ ಎಲ್ಲವುಗಳು ತಿಳಿದವೆ; ನಾನು ನಿನ
ಯಾವದರಿಂದ ಕಟ್ಟಿದರೂ ಅವನವನ ಕೆಲಸವು ವ್ಯಕ್ತವಾಗುವದು; ಯಾಕಂದರೆ ಆ ದಿನವು ಬೆಂಕಿ ಯೊಡನೆ ಪ್ರತ್ಯಕ್ಷವಾಗಿ ಆ ಕೆಲಸವನ್ನು ಸ್ಪಷ್ಟವಾಗಿ ತೋರಿಸುವದು; ಅವನವನ ಕೆಲಸವೆಂಥದೋ ಆ ಬೆಂಕಿ ಶೋಧಿಸುವದು.
ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ; ಆದದರಿಂದ ನೀನು ಆಸಕ್ತನಾಗಿರು; ಮಾನಸಾಂತರಪಡು.