ಲೇಯಳ ಕಣ್ಣುಗಳು ಮೃದುವಾಗಿದ್ದವು; ಆದರೆ ರಾಹೇಲಳು ಬಹು ಸುಂದರಿಯೂ ರೂಪವತಿಯೂ ಆಗಿದ್ದಳು.
Cross references
ಇದಾದ ಮೇಲೆ ಅವನು ಐಗುಪ್ತದ ಸವಿಾಪಕ್ಕೆ ಬಂದಾಗ ತನ್ನ ಹೆಂಡತಿಯಾದ ಸಾರಯಳಿಗೆ--ಇಗೋ, ನೀನು ನೋಡುವದಕ್ಕೆ ರೂಪವತಿ ಎಂದು ನನಗೆ ತಿಳಿದಿದೆ.
ಆ ಹುಡುಗಿಯು ನೋಡುವದಕ್ಕೆ ಬಹು ಸುಂದರಿಯಾಗಿದ್ದು ಯಾವ ಮನುಷ್ಯನು ಅರಿಯದ ಕನ್ನಿಕೆಯಾಗಿದ್ದಳು. ಆಕೆಯು ಬಾವಿಗೆ ಇಳಿದುಹೋಗಿ ತನ್ನ ಕೊಡವನ್ನು ತುಂಬಿಕೊಂಡು ಮೇಲೆ ಬಂದಳು.
ಅವನು ಅವರಿಗೆ--ಅವನು ಕ್ಷೇಮವಾಗಿದ್ದಾನೋ ಎಂದು ಕೇಳಿ ದಾಗ ಅವರು--ಕ್ಷೇಮವಾಗಿದ್ದಾನೆ. ಇಗೋ, ಅವನ ಮಗಳಾದ ರಾಹೇಲಳು ಕುರಿಗಳ ಸಂಗಡ ಬರುತ್ತಾಳೆ ಅಂದರು.
ಲಾಬಾನನಿಗೆ ಇಬ್ಬರು ಕುಮಾರ್ತೆಯರಿದ್ದರು. ಹಿರಿಯಳ ಹೆಸರು ಲೇಯಳು, ಕಿರಿಯಳ ಹೆಸರು ರಾಹೇಲಳು.
ಹೀಗಿರುವದರಿಂದ ಯಾಕೋಬನು ರಾಹೇಲಳನ್ನು ಪ್ರೀತಿಮಾಡಿ--ನಾನು ನಿನ್ನ ಕಿರಿಮಗಳಾಗಿರುವ ರಾಹೇಲಳಿಗೋಸ್ಕರ ನಿನ್ನಲ್ಲಿ ಏಳು ವರುಷ ಸೇವೆ ಮಾಡುತ್ತೇನೆ ಅಂದನು.
ರಾಹೇಲಳು ತಾನು ಯಾಕೋಬನಿಗೆ ಇನ್ನು ಹೆರುವದಿಲ್ಲವೆಂದು ತಿಳಿದಾಗ ಆಕೆಯು ತನ್ನ ಸಹೋದರಿಯ ಮೇಲೆ ಹೊಟ್ಟೇಕಿಚ್ಚು ಪಟ್ಟು ಯಾಕೋಬನಿಗೆ--ನನಗೆ ಮಕ್ಕಳನ್ನು ಕೊಡು, ಇಲ್ಲದಿದ್ದರೆ ನಾನು ಸಾಯುತ್ತೇನೆ ಅಂದಳು.
ಆಗ ದೇವರು ರಾಹೇಲಳನ್ನು ಜ್ಞಾಪಕಮಾಡಿ ಕೊಂಡನು. ದೇವರು ಆಕೆಯನ್ನು ಆಲೈಸಿ ಆಕೆಯ ಗರ್ಭವನ್ನು ತೆರೆದನು.
ರಾಹೇಲಳು ಸತ್ತುಹೋದಳು. ಅವಳನ್ನು ಎಫ್ರಾತದ ಮಾರ್ಗದಲ್ಲಿ ಹೂಣಿಟ್ಟರು; ಅದೇ ಬೇತ್ಲೆಹೇಮ್.
ರಾಹೇಲಳ ಕುಮಾರರು: ಯೋಸೇಫನು ಮತ್ತು ಬೆನ್ಯಾವಿಾನನು.
ಹೀಗಿರುವದರಿಂದ ಅವನು ತನಗಿದ್ದದ್ದನ್ನೆಲ್ಲಾ ಯೋಸೇಫನಿಗೆ ಒಪ್ಪಿಸಿ ತಾನು ತಿನ್ನುವ ರೊಟ್ಟಿಯ ವಿಷಯದಲ್ಲಿ ಹೊರತು ಬೇರೆ ಯಾವದರ ವಿಷಯದಲ್ಲೂ ಚಿಂತಿಸಲಿಲ್ಲ. ಯೋಸೇಫನು ಸುರೂಪಿಯೂ ಸೌಂದರ್ಯವಂತನೂ ಆಗಿದ್ದನು.
ಯಾಕೋಬನ ಹೆಂಡತಿಯಾದ ರಾಹೇಲಳ ಕುಮಾರರು: ಯೋಸೇಫ್ ಬೆನ್ಯಾವಿಾನ್ ಎಂಬವರು.
ನಾನು ಪದ್ದನ್ ಅರಾಮಿನಿಂದ ಬಂದಾಗ ಕಾನಾನ್‌ದೇಶದಲ್ಲಿ ಎಫ್ರಾ ತಿಗೆ ಸ್ವಲ್ಪ ದೂರದಲ್ಲಿರುವಾಗ ರಾಹೇಲಳು ನನ್ನ ಬಳಿಯಲ್ಲಿ ಸತ್ತಳು. ಅಲ್ಲಿ ಅಂದರೆ ಬೇತ್ಲೆಹೇಮೆಂಬ ಎಫ್ರಾತಿನ ಮಾರ್ಗದಲ್ಲಿ ಆಕೆಯನ್ನು ಹೂಣಿಟ್ಟೆನು ಅಂದನು.
ನೀನು ಈ ಹೊತ್ತು ನನ್ನನ್ನು ಬಿಟ್ಟು ಹೋದಾಗ ಬೆನ್ಯಾವಿಾನನ ಮೇರೆಯಾದ ಚೆಲ್ಚಹಿ ನಲ್ಲಿರುವ ರಾಹೇಲಳ ಸಮಾಧಿಯ ಬಳಿಯಲ್ಲಿ ಇಬ್ಬರು ಮನುಷ್ಯರನ್ನು ಕಂಡುಕೊಳ್ಳುವಿ. ಅವರು ನಿನಗೆ--ನೀನು ಹುಡುಕಲು ಹೋದ ಕತ್ತೆಗಳು ಸಿಕ್ಕಿದವು; ಇದಲ್ಲದೆ ಇಗೋ, ನಿನ್ನ ತಂದೆಯು ಕತ್ತೆಗಳ ಚಿಂತೆ ಬಿಟ್ಟು ನಿನಗೋಸ್ಕರ ಚಿಂತೆಪಟ್ಟು--ನನ್ನ ಮಗನಿಗೋ ಸ್ಕರ ಏನು ಮಾಡಲಿ? ಅನ್ನುತ್ತಾನೆಂದು ಹೇಳುವರು.
ಸೌಂದ ರ್ಯವು ಮೋಸಕರ; ಲಾವಣ್ಯವು ವ್ಯರ್ಥ; ಕರ್ತನಿಗೆ ಭಯಪಡುವವಳು ಹೊಗಳಲ್ಪಡುವಳು.ಆಕೆಯ ಕೈಕೆಲಸದ ಪ್ರತಿಫಲವನ್ನು ಸಲ್ಲಿಸಿರಿ; ದ್ವಾರಗಳಲ್ಲಿ ಆಕೆಯ ಕಾರ್ಯಗಳು ಆಕೆಯನ್ನು ಹೊಗಳಲಿ.
ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು --ಈ ದೇಶದಲ್ಲಿ ತಿರುಗಿ ಮನೆಗಳೂ ಹೊಲಗಳೂ ದ್ರಾಕ್ಷೇ ತೋಟಗಳೂ ಸ್ವಾಧೀನವಾಗುವವೆಂದು ಹೇಳುತ್ತಾನೆ.
ಅದೇನಂದರೆ--ರಾಮದಲ್ಲಿ ಪ್ರಲಾಪವೂ ಅಳುವಿಕೆಯೂ ಬಹು ಶೋಕದ ಧ್ವನಿಯೂ ಕೇಳಿಸಿತು; ರಾಹೇಲಳು ತನ್ನ ಮಕ್ಕಳಿಗೋಸ್ಕರ ಅಳುತ್ತಾ ಅವರು ಇಲ್ಲದ್ದರಿಂದ ಆದರಣೆ ಹೊಂದಲೊಲ್ಲದೆ ಇದ್ದಳು ಎಂಬದೇ.